ಶಿಕ್ಷಣದಿಂದ ಗುಣಾತ್ಮಕ ಬದಲಾವಣೆ ಸಾಧ್ಯ : ಹೊಸಳ್ಳಿಮಠ

Published on

ಗದಗ:  ಶಿಕ್ಷಣವು ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರಬಲ್ಲದು. ಅನುಭವವು ನಮ್ಮ ಬದುಕನ್ನು ಹದಗೊಳಿಸಿದರೆ ಶಿಕ್ಷಣವು ಹದವಾದ ಬದುಕಿಗೆ ಅರ್ಥ ನೀಡುವದು. ಮಗುವೊಂದು ಬೆಳೆದು ಸತ್ಪçಜೆಯಾಗಲು ಉತ್ತಮ ಶಿಕ್ಷಣ ಬೇಕು, ಇಂತಹ ಶಿಕ್ಷಣ ನೀಡುವ ಶಿಕ್ಷಕರ ಸೇವೆ ಅನುಪಮವಾದದ್ದು ಎಂದು ನಿವೃತ್ತ ಉಪನ್ಯಾಸಕರೂ, ಗದಗ ಅಡವೀಂದ್ರ ಸ್ವಾಮಿಮಠದ ಧರ್ಮದರ್ಶಿ ಪೂಜ್ಯ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಹೇಳಿದರು.

ಗದಗ ಜಿಲ್ಲಾ ಶರಣೆ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆ ಶಿಕ್ಷಕರ ದಿನಾಚರಣೆಯ ಅಂಗವಾಗಿ ಎರ್ಪಡಿಸಿದ್ದ ‘ಗುರುವಂದನೆ’ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿದರು.

ಶಿಕ್ಷಕರು ಸುಂದರ ಸಮಾಜದ ನಿರ್ಮಾತೃಗಳಾಗಿದ್ದು ಶಿಕ್ಷಕ ವೃತ್ತಿಯು ಬರೀ ಜೀವನ ವೃತ್ತಿಯಲ್ಲ. ಸಮಾಜದಲ್ಲಿ ಮಕ್ಕಳ ಭವ್ಯ ಭವಿಷ್ಯವನ್ನು ರೂಪಿಸಬಲ್ಲ ಜವಾಬ್ದಾರಿಯುಳ್ಳವರು. ಇಂತಹ ಜವಾಬ್ದಾರಿ ಹೊರಲು ವಿಸ್ತೃತವಾದ ಜ್ಞಾನದ ಭಂಡಾರ, ಸಂಯಮ, ಅಂತರ್ಯದಲ್ಲಿ ಯತಿಯಂತಹ ಭಾವಗಳು ದೂರದೃಷ್ಠಿಯಂತಹ ಮಹತ್ವದ ಅಂಶಗಳನ್ನು ಹೊಂದಿರಬೇಕು ಎಂದರು.

ಇನ್ನೋರ್ವ ಸನ್ಮಾನಿತರಾದ ಗದುಗಿನ ಕಾಶೀ ವೈದಿಕ ಪಾಠಶಾಲೆಯ ಮುಖ್ಯೋಪಾಧ್ಯಾಯ ಗುರುಸಿದ್ಧಯ್ಯ ಹಿರೇಮಠ ಮಾತನಾಡಿ ಬೋಧನೆ ಒಂದು ಸಂಕೀರ್ಣ ಕೌಶಲ. ಇದು ಒಂದು ನಿರ್ಧಿಷ್ಠವಾದ ಉದ್ದೇಶಪೂರ್ವಕವಾದ ಹಾಗೂ ಪ್ರಜ್ಞಾಪೂರ್ವಕವಾದ ಕ್ರಿಯೆ. ಶಿಕ್ಷಕರ ವೃತ್ತಿ ಜೀವನವು ಆರಂಭದಿAದ ಅಂತ್ಯದವರೆಗೂ ತನ್ನರಿವೇ ತನಗೆ ಗುರು ಎಂಬAತೆ ಸಾಗುತ್ತದೆ ಎಂದರು.

ಸAಪನ್ಮೂಲ ವ್ಯಕ್ತಿ ಕವಿತಾ ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಶಿಕ್ಷಕ ಜೀವನವು ಪವಿತ್ರವಾದದ್ದು ಮಕ್ಕಳಲ್ಲಿ ಅಕ್ಷರದ ಅರಿವು ಮೂಡಿಸಿ ಅವರನ್ನು ಅಕ್ಷರಸ್ಥರನ್ನಾಗಿ ಮಾಡಿ ಜೀವನದ ಪಥದಲ್ಲಿ ಯಶಸ್ಸು ಸಾಧಿಸುವಂತೆ ಮಾಡುವುದಾಗಿದೆ ಎಂದರು.

ವೀಣಾ ಬೇಲಿ ಪ್ರಾರ್ಥಿಸಿದರು, ಸುಮಾ ಪಾಟೀಲ ಸ್ವಾಗತಿಸಿದರು ಸುಶೀಲಾ ಕೋಟಿ ನಿರೂಪಿಸಿದರು, ಸುಧಾ ಬೆನಕಲ್ಲ ಪರಿಚಯಿಸಿದರು ಸುಮತಿ ಗದಗಿನಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net