ಗದಗ: ಆಗಷ್ಟ್ 24 ರಂದು ಗದಗ ಜಿಲ್ಲಾ ದ್ವಿತಿಯ ಕದಳಿ ಮಹಿಳಾ ಸಮ್ಮೇಳನ ನಡೆಯಲಿದೆ. ಡಾ. ಸಿ. ಸೋಮಶೇಖರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ರಾಷ್ಟ್ರ ದ್ವಜಾರೋಹಣ ನೇರವೆರಿಸಲಿದ್ದು, ಪರಿಷತ್ ಧ್ವಜಾರೋಹಣವನ್ನು ಕೆ. ಎ. ಬಳಿಗೇರ ಜಿಲ್ಲಾಧ್ಯಕ್ಷರು, ಶರಣ ಸಾಹಿತ್ಯ ಪರಿಷತ್ತು ನೇರವೆರಿಸಲಿದ್ದಾರೆ. ಕಾರ್ಯಕ್ರಮದ ಗೌರವ ಉಪಸ್ಥಿತಿಯನ್ನು ಕೆ. ಎಚ್. ಬೇಲೂರ ಶರಣ ಚಿಂತಕರು, ಡಾ. ಶಿವಪ್ಪ ಕುರಿ ಮಾಜಿ ಜಿಲ್ಲಾಧ್ಯಕ್ಷರು, ಕ.ಸಾ.ಪ, ಡಾ. ಶರಣು ಗೋಗೇರಿ ಮಾಜಿ ಜಿಲ್ಲಾಧ್ಯಕ್ಷರು, ಕ.ಸಾ.ಪ, ಲಲಿತಾ ಕೆರಿಮನಿ ಶರಣ ಚಿಂತಕರು, ಲಕ್ಷೇಶ್ವರ ಹಾಗೂ ಡಾ. ಎಸ್. ಸಿ. ಚವಡಿ ಶರಣ ಚಿಂತಕರು, ಮುಳಗುಂದ ಸೇರಿದಂತೆ ಹಲವರು ವಹಿಸಿಕೋಳ್ಳಲಿದ್ದಾರೆ ಅಂತ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮ.ನಿ.ಪ್ರ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿಕೋಳ್ಳಲಿದ್ದು, ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಕೆ. ಪಾಟೀಲ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಡಾ. ಸಿ. ಸೋಮಶೇಖರ, ಐ.ಎ.ಎಸ್ (ನಿ) ಅಧ್ಯಕ್ಷರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು ವಹಿಸಿಕೋಳ್ಳಲಿದ್ದು, ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಸುಧಾ ಎಸ್. ಹುಚ್ಚಣ್ಣವರ ಜಿಲ್ಲಾಧ್ಯಕ್ಷರು, ಕದಳಿ ಮಹಿಳಾ ವೇದಿಕೆ ಮಾತನಾಡಲಿದ್ದಾರೆ. ಸ್ಮರಣ ಸಂಚಿಕೆಯನ್ನು ವಿ. ಪ ಸದಸ್ಯ ಎಸ್. ವಿ. ಸಂಕನೂರ ಬಿಡುಗಡೆಗೋಳಿಸಲಿದ್ದಾರೆ ಅಂತ ಹೇಳಿದರು.
ಜಿಲ್ಲೆಯ ಏಳು ತಾಲ್ಲೂಕಿನ ಪ್ರತಿಯೊಬ್ಬರನ್ನು 'ಶಿವಶರಣೆ ಮುಕ್ತಾಯಕ್ಕ ಪ್ರಶಸ್ತಿಗೆ' ಆಯ್ಕೆ ಮಾಡಲಾಗಿದೆ. ನಂತರ ಚಿಂತನಾಗೋಷ್ಠಿ ಭಾಗ-1 ನಡೆಯಲಿದ್ದು, ಸಾನಿಧ್ಯವನ್ನು ಪೂಜೆ ಶಿವಶರಣೆ ಡಾ. ನೀಲಮ್ಮ ತಾಯಿ ವಹಿಸಿಕೊಳ್ಳಲಿದ್ದು, ಅಧ್ಯಕ್ಷತೆಯನ್ನು ಡಾ. ಅರ್ಜುನ ಗೋಳಸಂಗಿ ವಹಿಸಿಕೊಳ್ಳಲಿದ್ದಾರೆ. ವಚನ ಸಾಹಿತ್ಯಕ್ಕೆ ಗದಗ ಜಿಲ್ಲೆಯ ಮಠಮಾನ್ಯಗಳ ಕೊಡುಗೆ ಕುರಿತು ಸಿದ್ದು ಯಾಪಲಪರವಿ ಉಪನ್ಯಾಸ ನೀಡಲಿದ್ದು, '12 ನೇ ಶತಮಾನದ ಆಲಕ್ಷಿತ ವಚನಕಾರ್ತಿಯರು' ಎಂಬ ವಿಷಯದ ಕುರಿತು ಡಾ. ವಿಜಯಲಕ್ಷ್ಮಿ ಗೇಟಿಯವರ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಮಹನಿಯರು ಭಾಗವಹಿಸಲಿದ್ದಾರೆ ಅಂತ ತಿಳಿಸಿದರು.
ಚಿಂತನಾಗೋಷ್ಠಿ ಭಾಗ-2 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೋ: ಸೋಮರೆಡ್ಡಿ ಬಸಾಪೂರ ವಹಿಸಿಕೊಳ್ಳಲಿದ್ದಾರೆ. ಉಪನ್ಯಾಸಕರಾಗಿ ಸಿದ್ದಣ್ಣ ಜಗಭಾಳ ಆಗಮಿಸಲಿದ್ದು, ಇವರು 'ಜಾನಪದ ಸಾಹಿತ್ಯದಲ್ಲಿ ಬಸವೇಶ್ವರರು' ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ. ಸಾಯಂಕಾಲ 4:30 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಸಾನಿಧ್ಯವನ್ನು ಬೈರನಹಟ್ಟಿಯ ಶ್ರೀ ಶಾಂತಲಿಂಗ ಮಹಾಸ್ವಾಮೀಜಿಗಳು ವಹಿಸಿಕೊಳ್ಳಲಿದ್ದು, ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಿ. ಆರ್ ಪಾಟೀಲ ವಹಿಸಿಕೊಳ್ಳಲಿದ್ದಾರೆ. ಸಮಾರೋಪ ನುಡಿಗಳನ್ನು ಸುಶೀಲ ಸೋಮಶೇಖರ ನುಡಿಯಲ್ಲಿದ್ದಾರೆ ಅಂತ ಜಿಲ್ಲಾಧ್ಯಕ್ಷೆ ಸುಧಾ ಹುಚ್ಚಣ್ಣವರ ತಿಳಿಸಿದರು.
ಈ ವೇಳೆ ಕೆ. ಎ ಬಳಿಗೇರ, ಸೀತಾ ಬಸಾಪೂರ, ಸುಖನ್ಯ ಸಾಲಿ, ಪ್ರತಿಭಾ ಹೊಸಮನಿ, ಸುಲೋಚನಾ ಐಹೋಳೆ, ಅಶ್ವಿನಿ ಅಂಕಲಕೋಟಿ, ಎಸ್ ಎಂ ಮರಿಗೌಡ್ರ, ಶೇಖಣ್ಣ ಕವಳಿಕಾಯಿ, ಪ್ರಕಾಶ ಅಸುಂಡಿ, ಪ್ರೇಮಾ ಮೇಟಿ, ಐ. ಬಿ ಬೆನಕೋಪ್ಪ, ಎಂ. ಕೆ ಲಮಾಣಿ, ಅಶೋಕ ಹಾದಿ, ಬೂದಪ್ಪ ಅಂಗಡಿ ಉಪಸ್ಥಿತರಿದ್ದರು.