ವಿಜಯವಾಣಿ ಸುದ್ದಿಜಾಲ ಗದಗ
ಸಮಾಜದಿಂದ ಮಾನವ ಎಲ್ಲವನ್ನು ಪಡೆದಿದ್ದಾನೆ. ಸಮಾಜಕ್ಕೆ ಋಣ ತೀರಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವ್ಯಕ್ತಿ ಉದ್ಧಾರವಾದರೆ, ದೇಶ ಉದ್ಧಾರವಾಗುತ್ತದೆ. ವಿದ್ಯಾಥಿರ್ಗಳ ಗುರಿ ಕೇವಲ ಪಠ್ಯಕ್ಕಾಗಿ ಓದದೇ ಅದರಾಚೆಗೆ ಇರುವ ಸಂಗತಿಗಳನ್ನು ತಿಳಿದುಕೊಳ್ಳಬೇಕು ಎಂದು ನಿವೃತ್ತ ನ್ಯಾ. ಅರಳಿ ನಾಗರಾಜ ಹೇಳಿದರು.
ನಗರದ ಡಿ.ಸಿ.ಪಾವಟೆ ಮಹಾವಿದ್ಯಾಯಲಯದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಲಾ&ಕಾಲೇಜಿಗೊಂದು ಶರಣತತ್ವ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೀನು ಗಳಿಸಿದ ಜ್ಞಾನವನ್ನು ದೇಶದ ಒಳಿತಿಗಾಗಿ ಬಳಸು ದೇಶಭಕ್ತನಾಗುತ್ತೀಯ, ಇದನ್ನು ಮಾಡದಿದ್ದರೆ ನೀನೇ ಮೊದಲ ದೇಶದ್ರೋಹಿ ಆಗುತ್ತಿಯ ಎಂದು ವಿದ್ಯಾಥಿರ್ಗಳನ್ನು ಎಚ್ಚರಿಸಿದರು. ಸದಾ ಅಧ್ಯಯನಶೀಲ ಆಗಬೇಕು. ನಮ್ಮ ನಡೆ&ನುಡಿಗಳು ಒಂದಾಗಿರಬೇಕು. ಶ್ರಮರಹಿತ ಧನವನ್ನು ತಿರಸ್ಕರಿಸಿ ನಿಮ್ಮದೇ ಬೆವರಿನಿಂದ ಗಳಿಸಿದುದನ್ನು ಉಣ್ಣಬೇಕು. ಇದರಲ್ಲೇ ಕಾಯಕ ತತ್ವವಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯ ಕೆ. ಎ. ಬಳಿಗೇರ ಮಾತನಾಡಿ, ಶರಣ ತತ್ವಗಳು ಇಂದಿನ ವಿದ್ಯಾಥಿರ್ಗಳಿಗೆ ತಲುಪಬೇಕು. ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜದ ನಿರ್ಮಾಣದಲ್ಲಿ ಕೈಜೋಡಿಸಬೇಕು. ಮಕ್ಕಳು ಶರಣ ಮಾರ್ಗದಲ್ಲಿ ನಡೆಯಬೇಖು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಪಿ. ಗೌಳಿ ಮಾತನಾಡಿ, ವಿದ್ಯಾಥಿರ್ಗಳಲ್ಲಿ ಓದುವ ಅಭಿರುಚಿ ಎಂದಿಗೂ ಬತ್ತಬಾರದು. ಓದು ನಿತ್ಯವೂ ಕಾಯಕವಾಗಬೇಕು. ಓದಿನಿಂದ ನಮ್ಮ ಬಾಳಬುತ್ತಿಗೆ ದಾರಿಯಾದರೆ, ಶರಣ ತತ್ವಪಾಲನೆಯಿಂದ ಜೀವನ ಸಾರ್ಥಕವಾಗುತ್ತದೆ. ನಿಜವಾಗಿ ತಮ್ಮ ಜೀವನದಲ್ಲಿ ಶರಣ ತತ್ವಗಳನ್ನು ಅಳವಡಿಸಿಕೊಂಡು ಬಾಳುತ್ತಿರುವ ಅರಳಿ ನಾಗರಾಜ ರವರ ಜೀವನ ವಿದ್ಯಾಥಿರ್ಗಳಿಗೆ ಆದರ್ಶಪ್ರಾಯವಾಗಿದೆ ಎಂದರು.
ಪ್ರಕಾಶ ಅಸುಂಡಿ, ಸುಲೋಚನಾ ಐಹೊಳಿ, ಡಿ. ಎಸ್. ಬಾಪುರಿ, ಬೂದಪ್ಪ ಅಂಗಡಿ, ಡಾ. ಪ್ರಕಾಶ ಹೊಸಮನಿ, ಪಾರ್ವತಿ ಬಳಿಗೇರ, ಸುಧಾ ಹುಚ್ಚಣ್ಣವರ ಇತರರು ಇದ್ದರು.