ಕದಳಿಶ್ರೀ ವೇದಿಕೆಯಿಂದ ಅಮೃತ ಭೋಜನ ಕಲಿಕಾ ಸಾಮಗ್ರಿ ವಿತರಣೆ

23GDG06
Published on

ಗದಗ: ಸರ್ಕಾರಿ ಶಾಲೆಗಳು ಶೈಣಿಕ ಸಾಧನೆಗಳು ಹಾಗೂ ವಿದ್ಯಾಥಿರ್ಗಳಲ್ಲಿ ವಿಮರ್ಶಾತ್ಮಕ ಮನೋಭಾವ, ಧನಾತ್ಮಕ ಚಿಂತನೆಯೊಂದಿಗೆ ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ. ಇದರಿಂದಾಗಿ ಸರ್ಕಾರಿ ಶಾಲೆಗಳ ವಿದ್ಯಾಥಿರ್ಗಳಲ್ಲಿ ಮನೋಸ್ಥೆರ್ಯ ಗಟ್ಟಿಗೊಳ್ಳುತ್ತವೆ ಎಂದು ಗದಗ ಜಿಲ್ಲಾ ಶಿಣ ತರಬೇತಿ ಕೇಂದ್ರದ ಉಪನ್ಯಾಸಕಿ ಸುಧಾ ಬೆನಕಲ್ಲ ಹೇಳಿದರು.
ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಆದರ್ಶ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜರುಗಿದ ಶ್ರಾವಣದ ಅಮೃತ ಭೋಜನ ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಕ್ಕಳು ಪಠ್ಯದೊಂದಿಗೆ ಆಟಪಾಠಗಳಲ್ಲಿ ಭಾಗವಹಿಸಬೇಖು. ಇದರಿಂದ ಮನಸ್ಸು ಉಲ್ಲಾಸಿತಗೊಂಡು ಕಲಿಕೆಯಲ್ಲಿ ಆಸಕ್ತಿ ಮೂಡುತ್ತದೆ ಎಂದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಟಕದ ಪದಾಧಿಕಾರಿ ಸುಜಾತಾ ಗುಡಿಮನಿ ಮಾತನಾಡಿ, ಸರ್ಕಾರಿ ಶಾಲೆಗೆ ಬರುವುದೆಂದರೆ ನಮಗೆಲ್ಲ ಖುಷಿ. ಇಲ್ಲಿಯ ಮಕ್ಕಳ ಮುಗ್ದ ನಗು, ಅವರಲ್ಲಿರುವ ದಿಟ್ಟತನ, ಅವರ ಕಲಿಕೆಯ ಆಸಕ್ತಿ ಅವರನ್ನು ದೃಢಗೊಳಿಸುತ್ತವೆ ಎಂದರು.
ನಿವೃತ್ತ ಉಪನ್ಯಾಸಕಿ ಪ್ರೊ. ಪಿ. ಬಿ. ಹಿರೇಮಠ ಮಾತನಾಡಿ, ಸಮಾಜ ಹಾಗೂ ಸಂಟನೆಗಳು ಸರ್ಕಾರಿ ಶಾಲೆಯ ಬಲವರ್ಧನೆಗೆ ಒಟ್ಟಾಗಿ ಕೈ ಜೋಡಿಸಬೇಕು. ಇಲ್ಲಿಯ ಗುಣಮಟ್ಟದ ಶಿಣದ ಬಗೆಗೆ ಪಾಲಕರಿಗೆ ಮನವರಿಕೆ ಮಾಡಬೇಕು. ಮಕ್ಕಳು ಒಳ್ಳೆಯ ಮಾತು, ಉತ್ತಮ ನಡತೆ ಹಾಗೂ ಒಳ್ಳೆಯ ಸಂಸ್ಕಾರಗಳನ್ನು ಬೆಳೆಸಿಕೊಂಡು ಮನೆಯ ಹಿರಿಯರ, ಶಾಲಾ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೋಟ್​ಬುಕ್​ ವಿತರಿಸಲಾಯಿತು. ಸುವರ್ಣಾ ಗುರಮ್ಮನವರ, ನಿರ್ಮಲಾ ಚಿತ್ತಾಮೂರ, ಸವಿತಾ ಲಕ್ಕುಂಡಿ, ಕವಿತಾ ಬೇಲೇರಿ, ರುಕ್ಮೀಣಿ ಕುರ್ತಕೋಟಿ, ಗೀತಾ ದೇವರಮನಿ, ಯಲ್ಲಮ್ಮ ಅರಕೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net