ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಲು ವಿದ್ಯಾಥಿರ್ಗಳಿಗೆ ಕರೆ

28GDG05
Published on

ವಿಜಯವಾಣಿ ಸುದ್ದಿಜಾಲ ಗದಗ
ಪಠ್ಯೇತರ ಚಟುವಟಿಕೆಯಾಗಿ ಮಕ್ಕಳು ಸಾಹಿತ್ಯ ಕಲೆ, ಸಂಗೀತ, ಚಿತ್ರಕಲೆ ಮುಂತಾದವುಗಳ ಬಗ್ಗೆ ಅಭಿರುಚಿ ಬೆಳೆಸಿಕೊಂಡರೆ ಉತ್ತಮ ಸಂಸ್ಕಾರ ಪಡೆಯಬಹುದು ಎಂದು ಸಾಹಿತಿ ಡಿ.ವಿ. ಬಡಿಗೇರ ಹೇಳಿದರು.
ಕಬ್ಬಿಗರ ಕೂಟದಲ್ಲಿ ಇತ್ತೀಚೆಗೆ ಕಬ್ಬಿಗರ ಕೂಟ ಹಮ್ಮಿಕೊಂಡಿದ್ದ ಮಕ್ಕಳಿಗಾಗಿ ಸಾಹಿತ್ಯ ಸವಿ ಕಾರ್ಯಕ್ರಮದ ಅಧ್ಯತೆ ವಹಿಸಿ ಅವರು ಮಾತನಾಡಿದರು.
ನೀತಿ ಮೌಲ್ಯಗಳು ಕುಸಿದು ಸಮಾಜದಲ್ಲಿ ಅಪರಾಧ ಪ್ರವೃತ್ತಿ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಓದಿನ ಜೊತೆಗೆ ಉತ್ತಮ ಜೀವನ ಶೈಲಿ ಹಾಗೂ ನೈತಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವುದು ಅನಿವಾರ್ಯವಾಗಿದೆ. ಮಕ್ಕಳನ್ನು ಮೊಬೈಲ್​ ಗೀಳಿನಿಂದ ದೂರ ಇಡಬೇಕು. ಮಕ್ಕಳಿಗೆ ಬಿಡುವಿನ ವೇಳೆಯಲ್ಲಿ ಕಾವ್ಯ, ಕಥೆ, ಸಂಗೀತ ಮುಂತಾದ ಕಲಾ ಪರಂಪರೆಯ ಪರಿಚಯ ಮಾಡಿಕೊಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಟಿದ ಕಬ್ಬಿಗರ ಕೂಟದ ಅಧ್ಯ ಮನೋಹರ ಮೇರವಾಡೆ, ಕಬ್ಬಿಗರ ಕೂಟ ಮಕ್ಕಳಿಗಾಗಿ ಹಮ್ಮಿಕೊಂಡ ಸಾಹಿತ್ಯ ಸವಿ ಕಾರ್ಯಕ್ರಮವು ವಿನೂತನ ಪ್ರಯತ್ನವಾಗಿದೆ. ಇದು ಮಕ್ಕಳಲ್ಲಿ ಸಾಂಸತಿಕ ಪ್ರಜ್ಞೆ ಹುಟ್ಟಿಸಲು ಸಹಕಾರಿ ಆಗುತ್ತದೆ. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬಲು ಕಬ್ಬಿಗರ ಕೂಟದ 50ನೇ ವಾಷಿರ್ಕೋತ್ಸವ ನಿಮಿತ್ಯ 50 ಸಾಹಿತ್ಯ ಸವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಕಥೆಗಾರ ಬಸವರಾಜ ಗಣಪ್ಪನವರ ವಿಶೇಷ ಉಪನ್ಯಾಸ ನೀಡಿ ವಿದ್ಯಾಥಿರ್ ಜೀವನದ ಮಹತ್ವವನ್ನು ತಿಳಿಸಿದರು. ವಿದ್ಯಾಥಿರ್ಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಅಭ್ಯಾಸದೊಂದಿಗೆ ಸಾಂಸತಿಕ ಪ್ರೀತಿ, ಪರಿಸರ ಕಾಳಜಿ, ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಬೇಕು ಎಂದರು.
ನಿವೃತ್ತ ಶಿಕ ಎಸ್​.ಎಸ್​. ಮಲ್ಲಾಪೂರ, ಬಿ. ಎಸ್​. ಹಿಂಡಿ, ಎಂ. ಎನ್​. ಕುರಟ್ಟಿ, ಮಲ್ಲಮ್ಮ ಚಲುವನವರ, ಜಯಶ್ರೀ ಮೇರವಾಡೆ, ವಿ. ಎಂ. ಪವಾಡಿಗೌಡರ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net