ವಿದ್ಯಾಥಿರ್ಗಳ ಸರ್ವತೋಮುಖ ಬೆಳವಣಿ: ಎಂ. ಐ. ಸಜ್ಜನ

Published on

ವಿಜಯವಾಣಿ ಸುದ್ದಿಜಾಲ ಗದಗ

ಸ್ಪರ್ಧಾತ್ಮಕ ಪ್ರಪಂಚದಲ್ಲಿ ವಿದ್ಯಾಥಿರ್ಗಳು ಭವಿಷ್ಯದ ಬಗ್ಗೆ ಹೆಚ್ಚು ಶ್ರಮ ವಹಿಸಬೇಕಾಗಿದೆ. ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾಥಿರ್ಗಳನ್ನು ಮಾದರಿಯಾಗಿ ಇಟ್ಟುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಅಂದಾಗ ಮಾತ್ರ ವಿದ್ಯಾಥಿರ್ ಸರ್ವತೋಮುಖ ಬೆಳವಣಿಗೆ ಹೊಂದಲು ಸಾಧ್ಯ ಎಂದು ಪೊಲೀಸ ಉಪ ಅಧೀಕ ಎಂ. ಐ. ಸಜ್ಜನ ಹೇಳಿದರು.

ನಗರದ ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ ಇತ್ತೀಚೆಗೆ ಜರುಗಿದ ತೋಂಟದಾರ್ಯ ವಿದ್ಯಾಪಿಠದ ತೋಂಟದ ಸಿದ್ಧೇಶ್ವರ ವಿಜ್ಞಾನ ವಾಣಿಜ್ಯ ಹಾಗೂ ಕಲಾ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಸಕ್ತ 2025 26ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾಥಿರ್ಗಳಿಗೆ ಸ್ವಾಗತ, ಶೈಣಿಕ ಚಟುವಟಿಕೆಗಳ ಉದ್ಘಾಟನೆ ಮತ್ತು ಮಾರ್ಚ 2025ರಲ್ಲಿ ನಡೆದ ದ್ವೀತಿಯ ಪಿಯುಸಿ ವಾಷಿರ್ಕ ಪರೀೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾಥಿರ್ಗಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿದ್ಯಾಥಿರ್ ಜೀವನದಲ್ಲಿ ಪದವಿ ಪೂರ್ವ ಹಂತ ಪ್ರಮುಖ ಕಾಲಟ್ಟವಾಗಿದೆ. ಕಾಲಹರಣ, ಕೆಟ್ಟ ಅಭ್ಯಾಸದಲ್ಲಿ ತೊಡಗಿ ಭವಿಷ್ಯದಲ್ಲಿ ಪಶ್ಚಾತಾಪ ಪಡದಂತೆ ಎಚ್ಚರವಹಿಸಬೇಕು. ಇಂದಿನ ಯುವ ಪಿಳಿಗೆ ಹೊಸ ಹೊಸ ಆವಿಷ್ಕಾರಗಳು ತಂತ್ರಜ್ಞಾನಕ್ಕೆ ಹೊಂದಿಕೊಂಡು ಸಮಾಜದಲ್ಲಿ ಎತ್ತರಕ್ಕೆ ಬೆಳೆಯುವ ಗುರಿ ಹೊಂದಬೇಕು. ನಿತ್ಯ ಹೆಚ್ಚು ಸಮಯ ಅಭ್ಯಾಸದ ಕಡೆಗೆ ಗಮನಹರಿಸಬೇಕು ಎಂದರು.

ಇಂದಿನ ಪ್ರತಿಯೊಂದು ಅಪರಾಧಗಳು ಹೆಚ್ಚು ಸೈಬರ್​ ಕೆಂಗಳಾಗಿವೆ. ಮೊಬೈಲ್​ನ್ನು ಕೆಟ್ಟದಕ್ಕೆ ಬಳಸಿದರೆ ಜೀವನವು ದುಸ್ಥಿತಿಯತ್ತ ಸಾಗುತ್ತದೆ. ಸೈಬರ್​ ಅಪರಾಧಗಳು ನಮ್ಮ ಮೊಬೈಲ್​ಗೆ ಕರೆ ಮಾಡಿ ನಮ್ಮಿಂದ ವೈಯಕ್ತಿಕ ಮಾಹಿತಿ ಪಡೆಯುತ್ತಾರೆ ಮತ್ತು ವಂಚಿಸುತ್ತಾರೆ. ಈ ಬಗ್ಗೆ ಮುಂಜಾಗೃತಾ ಕ್ರಮ ವಹಿಸಬೇಕು ಎಂದರು.

ಡಾ. ಉಮೇಶ ಪುರದ ಅವರು ಮಾತನಾಡಿ ಸೋಲು ಕಂಡಾಗ ಕುಗ್ಗದೇ ಧೈರ್ಯವಾಗಿ ಗೆಲುವು ಸಾಧಿಸುವುದೇ ನಿಜವಾದ ಯಶಸ್ಸು. ವಿದ್ಯಾಥಿರ್ಗಳ ಅಂತಃ ಸತ್ವವನ್ನು ವೃದ್ಧಿಸುವ, ಅರಿವು ಮೂಡಿಸುವ ಉದ್ದೇಶವನ್ನು ಈ ಸಂಸ್ಥೆ ಹೊಂದಿದೆ ಎಂದರು.

ಸರ್ಕಾರಿ ಪ್ರವಢ ಶಾಲೆ ಮುಖ್ಯೋಪಾದ್ಯಾಯ ಸಿ. ಎಂ. ಪತ್ತಾರ ಮಾತನಾಡಿ, ವಿದ್ಯಾಥಿರ್ಗಳಿಗೆ ಕಾಲೇಜು ಸಂಸತ್ತಿನ ಪ್ರಮಾಣ ವಚನ ಬೋಧಿಸಿದರು. ಈ ಕಾಲೇಜು ಸಂಸತ್ತು ಸಂವಿಧಾನ ಮಾದರಿಯಂತೆ ರಚನೆಗೊಂಡಿದೆ. ಎಲ್ಲ ವಿದ್ಯಾಥಿರ್ಗಳು ತಮಗೆ ವಹಿಸಿದ ಕಾರ್ಯಕ್ಕೆ ಅನುಗುಣವಾಗಿ ಮತ್ತು ಉಪನ್ಯಾಸಕರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದರು.

ತೋಂಟದಾರ್ಯ ವಿದ್ಯಾಪಿಠದ ಕಾರ್ಯದಶಿರ್ ಎಸ್​. ಎಸ್​. ಪಟ್ಟಣಶೆಟ್ಟರ ಮಾತನಾಡಿ, ಮಕ್ಕಳನ್ನು ಪ್ರತಿಭಾವಂತರನ್ನಾಗಿ, ಕೀತಿರ್ವಂತರನ್ನಾಗಿ, ಗುಣವಂತರನ್ನಾಗಿ ಮಾಡುವುದು ಪ್ರತಿಯೊಬ್ಬ ಶಿಕರ ಕೈಯಲ್ಲಿದೆ. ಅಂತಹ ಕಾರ್ಯವನ್ನು ಮಾಡಿದ ಎಲ್ಲ ಶಿಕ ವೃಂದಕ್ಕೆ ಅಭಿನಂದನೆಗಳು.

ಕಾರ್ಯಕ್ರಮದಲ್ಲಿ ಮಾರ್ಚ 2025ರಂದು ನಡೆದ ದ್ವೀತಿಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾಥಿರ್ಗಳನ್ನು ಸನ್ಮಾನಿಸಲಾಯಿತು.

ಬಾಲಚಂದ್ರ ಭರಮಗೌಡ್ರರ, ಕೊಟ್ರೇಶ ಮೆಣಸಿನಕಾಯಿ, ವೈ. ಎಸ್​. ಮತ್ತೂರ, ಶ್ವೇತಾ ನಿಲುಗಲ, ಎನ್​. ವಿ. ಕಡಗದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net