

ವಿಜಯವಾಣಿ ಸುದ್ದಿಜಾಲ ಗದಗ
ಪರಿಶುದ್ಧವಾದ ನೀರು, ಗಾಳಿ, ಪರಿಸರವೇ ಮಾನವಕುಲದ ಉಳಿವು. ಮನುಕುಲದ ಅಸ್ಥಿತ್ವಕ್ಕೆ ಗಿಡಮರಗಳನ್ನು ಬೆಳೆಸಬೇಕು. ಹಸಿರೇ ಮಾನವನ ಉಸಿರು ಎಂದು ತೋಂಟದ ಸಿದ್ದರಾಮ ಶ್ರೀಗಳು ಹೇಳಿದರು.
ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಾಲ್ಯದಲ್ಲಿಯೇ ಮಕ್ಕಳಿಗೆ ಪರಿಸರದ ಬಗ್ಗೆ ತಿಳುವಳಿಕೆ ಮುಖ್ಯ. ಓಜೋನ ಪರದೆ ಹರಿದರೆ ಸುರತವಲ್ಲ. ಸೂರ್ಯನ ಕಿರಣಗಳು ನೇರವಾಗಿ ಬಂದರೆ ಚರ್ಮರೋಗದಂತಹ ಸಮಸ್ಯೆಗಳು ಕಾಡುತ್ತವೆ. ಕುಡಿವ ನೀರು, ಉಸಿರಾಡುವ ಗಾಳಿ, ಕೇಳುವ ಶಬ್ದ, ತಿನ್ನುವ ಆಹಾರ ಎಲ್ಲವು ಮಾಲಿನ್ಯವಾಗಿದೆ. ಮಾನವನ ಬದುಕು ದುಸ್ತರವಾಗಿದೆ. ಇಂದು ಪ್ಲಾಸ್ಟಿಕ್ ಸಮಸ್ಯೆ ಹೆಚ್ಚು ಕಾಡುತ್ತಿದೆ. ಪ್ಲಾಸ್ಟಿಕ ಬಳಕೆಯನ್ನು ಸಂರ್ಪೂಣ ತ್ಯಜಿಸಬೇಕು. ಹೊಗೆ ರಹಿತ ಕಾರ್ಖಾನೆಗಳು ಬರಬೇಕು ಎಂದು ಶ್ರೀಗಳು ಹೇಳಿದರು.
ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪುರಸ್ಕಾರ ಟ್ರಸ್ಟ್ನ ಮಾಜಿ ಅಧ್ಯ ವಿರುಪಾಪ್ಪ ಮ್ಯಾಗೇರಿ ಮಾತನಾಡಿ, ವಿಶ್ವ ಪರಿಸರದ ಆಚರಣೆ 1972 ರಿಂದ ಪ್ರಾರಂಭವಾಗಿದೆ. ಆದರೂ ತಾಪಮಾನ ವಿಪರೀತ ಏರುತ್ತಿದೆ. ಪ್ರಾಣಿ ಪ ಮಾನವರಿಗೆ ತುಂಬಾ ತೊಂದರೆ ಆಗುತ್ತಿದೆ. ಗ್ರೀನ್ ಹೌಸ್ ಎೆಕ್ಟ್ನಿಂದ ಉಷ್ಣತೆ ಜಾಸ್ತಿ ಆಗುತ್ತಿದೆ. ಕೈಗಾರಿಕೆಗೆ, ಕೃಷಿಗೆ, ಕಟ್ಟಿಗೆಗೆ, ಕಟ್ಟಡಕ್ಕೆ ಮುಂತಾದ ದುರಾಸೆಗಾಗಿ ಕಾಡು ನಾಶ ಮಾಡುತ್ತೇವೆ. ಅರಣ್ಯವೇ ತೆರೆದ ಆಮ್ಲಜನಕದ ಕಾರ್ಖಾನೆ. ಅದರ ರಣೆ ನಮ್ಮೆಲ್ಲರ ಹೊಣೆ. ಸುಂದರಲಾಲ್ ಬಹುಗುಣ ಮತ್ತು ಸಾಲುಮರದ ತಿಮ್ಮಕ್ಕರ ಸಾಹಸದ ಕತೆಗಳನ್ನು ಮಕ್ಕಳಿಗೆ ಸಮಾಜಕ್ಕೆ ತಿಳಿಸಿ ಜಾಗೃತಿ ಮೂಡಿಸುವುದು ಅವಶ್ಯ ಎಂದು ಹೇಳಿದರು.
ಅನ್ನರ್ಪೂಣ ಬಡಿಗೇರ, ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ ಇತರರು ಇದ್ದರು