ಅಂತರಂಗದ ಅರಿವಿನಿಂದ ಬಹಿರಂಗದ ಪರಿವರ್ತನೆ ಸಾಧ್ಯ: ಡಾ.ತೋಂಟದ ಸಿದ್ದರಾಮ ಶ್ರೀಗಳು

09GDG05
Published on

ವಿಜಯವಾಣಿ ಸುದ್ದಿಜಾಲ ಗದಗ

ಜಾತಿ ಮತ ಪಂಥ ಲಿಂಗಭೇದ ಅಳಿಸಿ ಸಂತೃಪ್ತವಾದ ಸಮಾಜ ಕಟ್ಟಿದವರು ಶರಣರು. ಅದು ಸಾಧ್ಯವಾದದ್ದು ಅಂತರಂಗದ ಅರಿವಿನಿಂದ. ಅಂತರಂಗದ ಅರಿವಿನಿಂದ ಬಹಿರಂಗದ ಪರಿವರ್ತನೆ ಸಾಧ್ಯ ಎಂದು ತೋಂಟದ ಸಿದ್ಧರಾಮ ಶ್ರೀಳು ಹೇಳಿದರು.

ತೋಂಟದಾರ್ಯ ಮಠದಲ್ಲಿ ಇತ್ತೀಚೆಗೆ ನಡೆದ ಶಿವಾನುಭ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ಜ್ಞಾನ ಸಂವೇದನೆ, ಅರಿವಿನ ಬೆಳವಣಿಗೆಯೇ ಅವನ ಬಾಹ್ಯ ನಡುವಳಿಕೆ. ಅದು ಸಮಾಜದ ಪರಿವರ್ತನೆ ಮೇಲೆ ಪ್ರಭಾವ ಬೀರುತ್ತದೆ. ಬ್ರಹ್ಮಚರ್ಯ ಗೃಹಸ್ಥ ನಂತರ ಸನ್ಯಾಸ ದೀೆ ಪಡೆಯಬೇಕು. ಆದರೆ ಶಿವಪ್ರೀಯಾನಂದ ಸ್ವಾಮಿಗಳು ನೇರವಾಗಿ ಸನ್ಯಾಸ ದೀೆ ಪಡೆದಿದ್ದಾರೆ. ಸನ್ಯಾಸಿಗಳು ಲೌಕಿಕ ಗೊಡವೆ ಇರಲಾರದೆ, ಮಾಯಾಮೋಡಗಳಿಗೆ ಬಲಿಯಾಗದೆ ಸಮಾಜ ಸೇವೆ ಮಾಡುತ್ತಾರೆ ಎಂದು ಶ್ರೀಗಳು ಹೇಳಿದರು.

ಸನ್ಯಾಸ ದೀೆ ಪಡೆದು ಪುರಪ್ರವೇಶ ಮಾಡಿದ ಶಿವಪ್ರೀಯಾನಂದ ಶ್ರೀಗಳು ಮಾತನಾಡಿ, ಪ್ರಾಮಾಣಿಕವಾದ ಪ್ರೀತಿಯಿಂದ ಸಮಾಜ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಪಂಥರಹಿತವಾದ ಪಂಥ ಸೃಷ್ಟಿಸುವುದು ನಮ್ಮ ಆಶಯ. ಮೌಲ್ಯಗಳ ಕುಸಿತ ಮಕ್ಕಳಿಂದ ಆಗಿಲ್ಲ. ದೊಡ್ಡವರಿಂದ ಆಗಿದೆ. ಒಂದು ಮಗು ದೇವರನ್ನು 2 ನಿಮಿಷ ನೋಡುತ್ತದೆ. ತಾಯಿಯನ್ನು 10 ನಿಮಿಷ ನೋಡುತ್ತದೆ. ಶಿಕರನ್ನು 50 ನಿಮಿಷ ನೋಡುತ್ತದೆ. ಆದರೆ ಸನ್ಯಾಸಿಗಳನ್ನು ಸಮಾಜ ನಿರಂತರ ನೋಡುತ್ತದೆ. ಸಮಾಜ ಆದರ್ಶಗಳನ್ನು ನಿರೀೆ ಮಾಡುತ್ತದೆ ಎಂದರು.

ಕೆವಿಎಸ್​ಆರ್​ ಕಾಲೇಜಿನ ನಿವೃತ್ತ ಉಪನ್ಯಾಸಕ ಎಸ್​. ಎಚ್​. ದೇಶಪ್ಪನವರ ಮಾತನಾಡಿ, ಮಾನವನ ಅಂತರಂಗದಲ್ಲಿ ಒಮ್ಮೆ ಅರಿವು ಮೂಡಿದರೆ ತಾನು ಯಾರು, ಏಕೆ ಬದುಕಬೇಕು, ಹೇಗೆ ಬದುಕಬೇಕು ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾನೆ. ಇದರಿಂದ ಅವನ ಬಾಹ್ಯ ನಡವಳಿಕೆಗಳು ನಿರ್ಣಯಗಳು ಬದಲಾಗುತ್ತವೆ ಎಂದು ತಿಳಿಸಿದರು.

ಡಿ. ಆರ್​. ಪಾಟೀಲ, ರಾಮಕೃಷ್ಣ ಕುಲಕಣಿರ್, ಬಾಲಚಂದ್ರ ಭರಮಗೌಡ್ರ, ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಶಿವಾನಂದ ಹೊಂಬಳ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net