ತೋಂಟದಾರ್ಯ ಜಾತ್ರೆ ಅಂಗವಾಗಿ ಕೃಷಿ ಮೇಳ ಕಾರ್ಯಕ್ರಮ

10GDG05
Published on

ಗುಣಮಟ್ಟದ ಕೃಷಿಗಾಗಿ ಪರಿಸರ ಉಳಿಸುವುದು ಅನಿವಾರ್ಯ: ಶಿವಕುಮಾರಗೌಡ ಪಾಟೀಲ

ವಿಜಯವಾಣಿ ಸುದ್ದಿಜಾಲ ಗದಗ

ಕೃಷಿ ಹಾಗೂ ಪರಿಸರ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಕೃಷಿಯನ್ನು ಉಳಿಸಿ ಬೆಳೆಸಲು, ಅದರ ಗುಣಮಟ್ಟವನ್ನು ಕಾಪಾಡಲು ಪರಿಸರವನ್ನು ಉಳಿಸುವುದು ಅನಿವಾರ್ಯವಾಗಿದೆ ಎಂದು ಕೆಸಿಸಿ ಬ್ಯಾಂಕ್​ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ

ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಗುರುವಾರ ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಕೃಷಿ ಮೇಳ, ಪ್ರದರ್ಶನ ಹಾಗೂ ಮಾರಾಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೃಷಿಯ ಬಗ್ಗೆ ಅಪಾರ ಆಸಕ್ತಿ ಹಾಗೂ ಜ್ಞಾನ ಹೊಂದಿದ್ದ ಲಿಂ.ಸಿದ್ಧಲಿಂಗ ಮಹಾಸ್ವಾಮಿಗಳು ಪ್ರತಿವರ್ಷ ಮಠದ ಜಾತ್ರೆಯಲ್ಲಿ ಕೃಷಿಯನ್ನು ಪ್ರೋತ್ಸಾಹಿಸುವ ಸೃಜನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ಈ ಭಾಗದ ಅಮೂಲ್ಯ ನೈಸಗಿರ್ಕ ಸಂಪತ್ತಾದ ಕಪ್ಪತಗುಡ್ಡವನ್ನು ರಸಿದ್ದಲ್ಲದೇ ಗಣಿಗಾರಿಕೆಯಿಂದ ನೂರಾರು ಎಕರೆ ಜಮೀನುಗಳನ್ನು ರಸಿರುವ ಕೀತಿರ್ ಅವರಿಗೆ ಸಲ್ಲುತ್ತದೆ. ಇಂದು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗಣಿಗಾರಿಕೆ ನೈಸಗಿರ್ಕ ಸ್ಥಿತ್ಯಂತರ ಮಾಡಿದೆ. ಈ ಭಾಗದಲ್ಲಿ ಕೈಗಾರಿಕೆ ಬರುವುದಾದರೆ ಅದು ಕೃಷಿಗೆ ಪೂರಕವಾಗಿರಬೇಕು. ಕೃಷಿಯನ್ನು ಹೊರತುಪಡಿಸಿ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಿಲ್ಲ, ಕೃಷಿಯಲ್ಲಿ ನಾವೀನ್ಯತೆ ತರಬೇಕಿದೆ ಎಂದರು.

ತೋಂಟದ ಸಿದ್ಧರಾಮ ಶ್ರೀಗಳು ಮಾತನಾಡಿ, ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬ ನಾಣ್ಣುಡಿಯಂತೆ ಕೃಷಿ ದೇಶದ ಪ್ರಧಾನ ವೃತ್ತಿಯಾಗಿದೆ. ರೈತನ ತನು ಮನ ಭಾವ ಶುದ್ಧ. ಆತ ಶ್ರೇಷ್ಠ ಭಕ್ತ ಎಂದು ವಿಶ್ವಗುರು ಬಸವೇಶ್ವರರು ತಮ್ಮ ವಚನಗಳಲ್ಲಿ ಬಣ್ಣಿಸಿದ್ದಾರೆ. ರೈತರಿಗೆ ಅತ್ಯಂತ ಉಪಯುಕ್ತವಾದ ಕಾರ್ಯಕ್ರಮವನ್ನು ಜಾತ್ರಾ ಸಮಿತಿ ಹಮ್ಮಿಕೊಂಡಿದೆ. ಕೃಷಿ ಕುರಿತು ಕಾರ್ಯಕ್ರಮಗಳಲ್ಲಿ ರೈತರು ನಿರಾಸಕ್ತಿ ವಹಿಸಬಾರದು. ಕೃಷಿಯಲ್ಲಿ ಕಾಲಕಾಲಕ್ಕೆ ಆಗುವ ಬದಲಾವಣೆಗಳನ್ನು ತಂತ್ರಜ್ಞಾನಗಳನ್ನು ಗಮನಿಸಿ ಅವುಗಳನ್ನು ಅಳವಡಿಸಿಕೊಳ್ಳುವ ಕೆಲಸ ಆಗಬೇಕಿದೆ ಎಂದರು.

ಮಲ್ಲಯ್ಯ ಗುರುಬಸಪ್ಪನಮಠ ಸಂಗ್ರಹಿಸಿದ ಹಳೆಯ ಕೃಷಿ ಸಲಕರಣೆಗಳ ಪ್ರದರ್ಶನ ಜನಮನ ಸೆಳೆಯಿತು. ಜಾತ್ರೆಯ ನಿಮಿತ್ಯ ಏರ್ಪಡಿಸಲಾದ ಜಾನುವಾರು ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.

ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ. ಎಸ್​. ಎಸ್​ ಪಟ್ಟಣಶೆಟ್ಟರ, ನಿವೃತ್ತ ಕೃಷಿ ಅಧಿಕಾರಿ ಸುರೇಶ ಕುಂಬಾರ, ಜಾತ್ರಾ ಸಮಿತಿ ಗೋಣಿಬಸಪ್ಪ ಕೊರ್ಲಹಳ್ಳಿ, ರುದ್ರಣ್ಣ ಗುಳಗುಳಿ ಸೇರಿದಂತೆ ಜಾತ್ರಾ ಸಮಿತಿ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net