

-ಕೌಶಲ್ಯ ಹೊಂದಿರುವ ಯುವಕರಿರುವ ದೇಶದಲ್ಲಿ ಬಡತನವಿಲ್ಲ: ಬಸವರಾಜ ಬೊಮ್ಮಾಯಿ
-61 ಕಂಪನಿಗಳು ಭಾಗಿ, 2347 ಅಭ್ಯಥಿರ್ಗಳ ಸಂದರ್ಶನ, 307 ಅಭ್ಯಥಿರ್ಗಳ ಆಯ್ಕೆ, 609 ಅಭ್ಯಥಿರ್ಗಳನ್ನು ಎರಡನೇ ಹಂತದ ಸಂದರ್ಶನಕ್ಕೆ ಆಯ್ಕೆ: ಎಸ್.ವಿ. ಸಂಕನೂರು
ವಿಜಯವಾಣಿ ಸುದ್ದಿಜಾಲ ಗದಗ
ಕೌಶಲ್ಯ ಇರುವ ದೇಶದಲ್ಲಿ ಬಡತನ ಇರುವುದಿಲ್ಲ. ಭಾರತ ದೇಶದಲ್ಲಿ ಕೌಶಲ್ಯದ ಕೊರತೆ ಇದೆ. ಅದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶೇಷವಾಗಿರುವ ಕೌಶಲ್ಯ ಅಭಿವೃದ್ಧಿ ಇಲಾಖೆ ತೆರೆದು ತರಬೇತಿ ನೀಡಲು ಕ್ರಮ ಕೈಗೊಂಡಿದ್ದಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನನಗೆ ಕೌಶಲ್ಯ ಅಭಿವೃದ್ಧಿ, ಕಾಮಿರ್ಕ ಹಾಗೂ ಟೆಕ್ಸಟೈಲ್ ಕ್ಷೇತ್ರದಲ್ಲಿ ಉದ್ಯೋಗ ನೀಡುವ ಇಲಾಖೆಗಳ ಜವಾಬ್ದಾರಿಯನ್ನು ಪಧಾನಿ ನೀಡಿದ್ದಾರೆ. ಪ್ರಧಾನ ಮಂತ್ರಿಯ ಕನಸು ಕೌಶಲ್ಯ ಭರಿತ ಭಾರತ ಮಾಡುವ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಗೆ ಪೂರಕವಾದ ವರದಿಯನ್ನು ನೀಡಲು ನಾನು ಶ್ರಮ ವಹಿಸುತ್ತೇನೆ. ಶಿಕ್ಷಣ ಮತ್ತು ಉದ್ಯೋಗದ ನಡುವೆ ಅಂತರ ಇದೆ. ಸಂಸ್ಥೆಗಳು ಬಯಸುವ ಉದ್ಯೋಗಕ್ಕೂ ನಾವು ಕಲಿಯುವುದಕ್ಕೂ ವ್ಯತ್ಯಾಸ ಇದೆ. ಅದನ್ನು ಸರಿಪಡಿಸಲು ಪದವಿ ಪಡೆಯುವ ಮೊದಲೇ ಕೌಶಲ್ಯ ತರಬೇತಿ ಪಡೆಯಬೇಕು. ತಾಂತ್ರಿಕ ತರಬೇತಿ, ಕೌಶಲ್ಯ ತರಬೇತಿ ಪಡೆಯಬೇಕು. ದುಡ್ಡಿದ್ದರೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸ್ವಾಭಿಮಾನವೂ ಹೆಚ್ಚಳವಾಗುತ್ತದೆ. ಉದ್ಯೋಗ ಒಂದು ಘನತೆಯನ್ನು ತಂದುಕೊಡುತ್ತದೆ. ಮೊದಲು ಜನಸಂಖ್ಯೆ ನಿಯಂತ್ರಿಸಬೇಕು ಎಂದು ಹೇಳುತ್ತಿದ್ದರು. ಈಗ ಜನಸಂಖ್ಯೆಯೇ ಭಾರತಕ್ಕೆ ವರವಾಗಿದೆ ಎಂದು ಬೊಮ್ಮಾಯಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ಇಂದಿನ ಯುಗದಲ್ಲಿ ವೈಜ್ಞಾನಿಕ ಜ್ಞಾನದ ಶಿಕ್ಷಣ ಅಗತ್ಯವಿದೆ. ಒಂದು ಕೋಟಿ ಯುವಕರಿಗೆ ಉದ್ಯೋಗ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರವೇ ಸಂಬಳ ನೀಡಲಿದೆ. ಹೆಚ್ಚಿನ ಯುವಕರು ಅದರ ಲಾಭ ಪಡೆದುಕೊಳ್ಳಬೇಕು. ಉದ್ಯೋಗ ಮೇಳದಿಂದ ಔದ್ಯೋಗಿಕರಣ ಆಗಲಿದೆ. ಶಿಕ್ಷಣ ಪಡೆದವರು ನಿರುದ್ಯೋಗಿ ಆಗಬಾರದು. ಎಲ್ಲಿ ಹೋದರೂ ಉದ್ಯೋಗ ಸಿಗುವಂತಾಗಬೇಕು. ಉದ್ಯೋಗ ಪಡೆಯಬೇಕು ಇಲ್ಲದಿದ್ದರೆ ಉದ್ಯೋಗ ನೀಡುವಂತಾಗಬೇಕು. ಆಗ ಈ ದೇಶ ಉದ್ದಾರವಾಗಲಿದೆ ಎಂದರು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ದೇಶದಲ್ಲಿ 2014 ರಲ್ಲಿ 42 ಸಾವಿರ ಕೋಟ್ಯಧಿಪತಿಗಳು ಇದ್ದರು. ಈಗ ಮೂರು ಲಕ್ಷಕ್ಕೂ ಹೆಚ್ಚು ಜನರು ಒಂದು ಕೋಟಿಗಿಂತಲೂ ಹೆಚ್ಚು ಆದಾಯ ಪಡೆಯುತ್ತಿದ್ದಾರೆ. ಆಥಿರ್ಕತೆಯಲ್ಲಿ ಯಾವುದೇ ಮ್ಯಾಜಿಕ್ ಇಲ್ಲ. ಕಠಿಣ ಪರಿಶ್ರಮ, ಪ್ರಾಮಾಣಿಕ ಪಯತ್ನ, ದೃಢ ಸಂಕಲ್ಪ, ಸಾಧನೆ ಮಾಡುವ ಛಲ ಇದ್ದರೆ ಮಾತ್ರ ಯಶಸ್ಸು ಸಿಗುತ್ತದೆ. ಬಿಜೆಪಿ ಸರ್ಕಅರ ಅವಧಿಯಲ್ಲಿ ಸ್ತ್ರೀ ಸಾಮರ್ಥ್ಯ ಯೋಜನೆ, ಸ್ವಯಂ ಉದ್ಯೋಗ ಮಾಡುವ ಮಹಿಳೆಯರಿಗೆ 8 ಲಕ್ಷ ರೂ. ಸಾಲ ನೀಡುವ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆಗಳನ್ನು ಈಗಿನ ಸರ್ಕಾರ ನಿಲ್ಲಿಸಿದೆ. ಕರಕುಶಲ ಕಮಿರ್ಗಳಾದ ಕಮ್ಮಾರ, ಕುಂಬಾರ, ಬಡಿಗ ಉದ್ಯೋಗ ಮಾಡುವವರಿಗೆ ತರಬೇತಿ ನೀಡಿ ಸಾಲ ನೀಡುವ ಯೋಜನೆಯನ್ನು ಬೊಮ್ಮಾಯಿ ನೇತೃತ್ವದ ಸರ್ಕಾರ ರೂಪಿಸಿತ್ತು ಎಂದು ಸಿ.ಸಿ. ಪಾಟೀಲ ಹೇಳಿದರು.
ಸಮಾರಂಭದ ಅಧ್ಯತೆಯನ್ನು ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿಯವರು ವಹಿಸಿದ್ದರು. ಉದ್ಯೋಗ ಮೇಳದಲ್ಲಿ 61 ಕಂಪನಿಗಳು ಭಾಗವಹಿಸಿದ್ದವು. 2347 ಅಭ್ಯಥಿರ್ಗಳು ಸಂದರ್ಶನ ನೀಡಿದರು. 307 ಅಭ್ಯಥಿರ್ಗಳು ಆಯ್ಕೆ ಆದರು. 609 ಅಭ್ಯಥಿರ್ಗಳನ್ನು ಎರಡನೇ ಹಂತದ ಸಂದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು.
ಕರ್ನಾಟಕ ರಾಜ್ಯ ವಾಣಿಜ್ಯ ಹಾಗೂ ಕೈಗಾರಿಕೆ ಸಂಸ್ಥೆಯ ಅಧ್ಯ ಎಸ್. ಪಿ. ಸಂಶಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಉಷಾ ದಾಸರ, ವಿಜಯಲಕ್ಷಿ$್ಮ ದಿಂಡೂರ, ವಿದ್ಯಾವತಿ ಗಡಗಿ, ಪ್ರಕಾಶ ಅಂಗಡಿ, ಎಸ್. ಬಿ. ಹಾವೇರಿ, ಬಸವರಾಜ ಮಲ್ಲೂರ, ಪ್ರೋ ಪಿ.ಜಿ. ಪಾಟೀಲ ಇತರರು ಇದ್ದರು.