

ವಿಜಯವಾಣಿ ಸುದ್ದಿಜಾಲ ಗದಗ
ವಿದ್ಯಾಥಿರ್ಗಳು ಶಾಲೆಯಲ್ಲಿ ವಿದ್ಯೆ ಕಲಿಯುವುದು ಎಷ್ಟು ಮುಖ್ಯವೋ? ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯ. ವಿದ್ಯಾಥಿರ್ ಜೀವನದಲ್ಲಿಯೇ ಸಂಗೀತ, ನೃತ್ಯ, ಕ್ರೀಡೆ ಚಿತ್ರಕಲೆ ಮುಂತಾದ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಖು ಎಂದು ಅಂತರಾಷ್ಟ್ರಿಯ ಯೋಗ ತರಬೇತುದಾರ ಸುಭಾಸ ಬೆಂಗೇರಾ ಹೇಳಿದರು.
ನಗರದ ಜೇಸಿ ಪ್ರೌಢಶಾಲೆಯಲ್ಲಿ ಶನಿವಾಋ ಏರ್ಪಡಿಸಿದ್ದ ಕಲಾ, ವಿಜ್ಞಾನ, ಕ್ರೀಡಾ ಹಾಗೂ ಯೋಗಾ ಸಂಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕಲೆಯು ಹೃದಯಕ್ಕೆ, ವಿಜ್ಞಾನ ಮೆದುಳಿಗೆ, ಆಟ ಸದೃಡವಾದ ದೇಹಕ್ಕಾಗಿ, ಯೋಗ ಸರ್ವಾಂಗೀಣ ಅಬಿವೃದ್ಧಿಗಾಗಿ ಇವೆ. ಪ್ರತಿಯೊಬ್ಬ ವಿದ್ಯಾಥಿರ್ಯಲ್ಲಿ ಹುದುಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಈ ಸಂದಲ್ಲಿ ಜರುಗುವ ಚಟುವಟಿಕೆಗಳು ಉತ್ತಮ ಅವಕಾಶ ಒದಗಿಸಬಲ್ಲ ವೇದಿಕೆಯಾಗಿದೆ ಎಂದರು.
ಡಾ. ಅವಿನಾಶ್ ಓದುಗೌಡರ ಮಾತನಾಡಿ, ಇಂದಿನ ಸಣ್ಣ ಹೆಜ್ಜೆಗಳೇ ಮುಂದಿನ ದೊಡ್ಡ ಪರಿವರ್ತನೆಗೆ ಕಾರಣ. ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಹಾಗಾಗಿ ಮಕ್ಕಳು ಜ್ಞಾನಾರ್ಜನೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಶಾಲೆಯ ಪ್ರಾಚಾರ್ಯ ಜಯಶ್ರೀ ಮಡಿವಾಳರ ಮಾತನಾಡಿ, ಇದು ಕೌಶಲ್ಯದಯುಗ. ಹಾಗಾಗಿ ಪ್ರತಿಯೊಬ್ಬ ವಿದ್ಯಾಥಿರ್ಯು ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಗತ್ಯ. ಬೌದ್ಧಿಕ ಶಕ್ತಿಯ ಜೊತೆಗೆ ದೈಹಿಕ, ಮಾನಸಿಕ ಶಕ್ತಿ ಅವಶ್ಯಕ. ಇಂದಿನ ಆಧುನಿಕ ಯುಗದಲ್ಲಿ ಅಂಕಗಳಿಸುವುದಷ್ಟೇ ಮುಖ್ಯವಲ್ಲ. ಶಾಲೆಯಲ್ಲಿ ಹಮ್ಮಿಕೊಳ್ಳುವ ಪ್ರತಿ ಚಟುವಟಿಕೆಗಳಲ್ಲಿ ಸ್ಪರ್ಧಾತ್ಮಕ ಭಾವನೆಯಿಂದ ಭಾಗವಹಿಸುವುದು ಮುಖ್ಯ. ಪ್ರತಿಯೊಬ್ಬ ವಿದ್ಯಾಥಿರ್ಯು ವ್ಯಕ್ತಿತ್ವದ ಬೆಳವಣಿಗೆಗೆ ಶಾಲೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಖು ಎಂದರು.
ಅನ್ನಪೂರ್ಣಾ ಬ್ಯಾಹಟ್ಟಿ, ಕವಿತಾ ಕೆ, ಮಂಜುಳಾ ಬುಳ್ಳಾ, ಮಮತಾ ಬಳ್ಳಾರಿ, ದಾನಮ್ಮಾ ತೆಗ್ಗಿನಕೇರಿ, ಆ್ಯಂಥೋನಿ ಚಿತಾಪೂರ ಇತರರು ಇದ್ದರು.