ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶ್ರೀ ಬಸವರಾಜ್ ಕೊತ್ಲನ್ನವರ್ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಹೊಂಬಾಳ ಇವರು ಜಿಲ್ಲೆಯ ಎಲ್ಲ ಜೀವಶಾಸ್ತ್ರ ಉಪನ್ಯಾಸಕರು ಒಂದು ಕಡೆ ಸೇರುವುದರ ಮೂಲಕ ಜಿಲ್ಲೆಯ ಜೀವಶಾಸ್ತ್ರ ವಿಷಯದ ಬೋಧನೆ ಅಥವಾ ಜೀವಶಾಸ್ತ್ರ ವಿಷಯದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯುವುದು ಹಾಗೂ ಪ್ರಯೋಗ ವಿಷಯದಲ್ಲಿ ಏಕತೆಯನ್ನು ತರುವುದು ಕುರಿತು ಮಾತನಾಡಿದರು ಕಾರ್ಯಕ್ರಮವನ್ನು ಉದ್ಘಾಟಿಸಿ ಕೆಎಲ್ಇ ಸಂಸ್ಥೆಯ ಸಂಸ್ಥೆಯ ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಪಿ .ಜಿ. ಪಾಟೀಲ್ ಇವರು ಮಾತನಾಡುತ್ತಾ ಜೀವಶಾಸ್ತ್ರವು ಕ್ಲಾಸಿಗೆ ಜೀವ ತರುವ ವಿಷಯವಾಗಿದ್ದು ವಾಸ್ತವಿಕ ಇರುವ ವಾತಾವರಣದಲ್ಲಿ ಕಲಿಯುದಾಗಿದೆ ಸದ್ಯ ಜೀವ ಶಾಸ್ತ್ರಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದು ಉತ್ತಮ ಅವಕಾಶವಾಗಿದ್ದು ವಿದ್ಯಾರ್ಥಿಗಳಿಗೆ ಅತಿ ಅವಶ್ಯಕವಾಗಿದೆ ನಿಸರ್ಗದ ವಿಚಾರಗಳನ್ನು ಅರಿಯುವಲ್ಲಿ ಸಹಾಯಕ ಇತ್ತೀಚೆಗೆ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ವಿಷಯದ ಜ್ಞಾನಕ್ಕಿಂತ ಅಂಕಗಳ ಮಾನದಂಡವೇ ಮುಖ್ಯವಾಗಿದೆ ಪರೀಕ್ಷಾ ಪದ್ಧತಿ ಬಗ್ಗೆ ಮಾತನಾಡುತ್ತಾ ವಿದ್ಯಾರ್ಥಿಗಳು ಅತಿ ಸುಲಭವಾಗಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು ಎಂದರು ಈ ಉಪನ್ಯಾಸಕ ವೃತ್ತಿಯು ಪುಣ್ಯದ ಕೆಲಸವಾಗಿದೆ ಉಪನ್ಯಾಸಕರು ಸಮಾಜದಲ್ಲಿ ಗೌರವ ಯುತವಾಗಿ ನಡೆದುಕೊಳ್ಳಬೇಕಾಗಿದೆ ಎಂದರು