

ಗದಗ: ಜಾತಿ, ಧರ್ಮ, ಪಕ್ಷ ಎಲ್ಲವನ್ನು ಮೀರಿ ರಾಜ್ಯದ ಸಮಸ್ತ ಜನತೆ ಪೂಜಿಸುವ ಧರ್ಮಸ್ಥಳದ ಶ್ರದ್ದಾ ಕೇಂದ್ರದ ಬಗ್ಗೆ ಕೆಲವು ಕಾಣದ ಕೈಗಳು ಅಪಪ್ರಚಾರ ನಡೆಸುತ್ತಿರುವುದನ್ನು ಜೆಡಿಎಸ್ ಪಕ್ಷ ತೀವ್ರವಾಗಿ ಖಂಡಿಸುತ್ತಿದೆ. ಪವಿತ್ರ ತೀರ್ಥ ಕ್ಷೇತ್ರದ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಜೆಡಿಎಸ್ ಪಕ್ಷದಿಂದ ಆಗಷ್ಟ್ 31 ರಂದು ಧರ್ಮಸ್ಥಳ ಸತ್ಯ ಯಾತ್ರೆ ನಡೆಯಲಿದ್ದು, ರಾಜ್ಯದ ಸಮಸ್ಥ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಧರ್ಮಸ್ಥಳದಲ್ಲಿ ನಡೆಯುವ ಸತ್ಯಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದು, ಗದಗ ಜಿಲ್ಲೆಯಂದ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಅಂತ ಜಿಲ್ಲಾಧ್ಯಕ್ಷ ಎಂ. ವೈ ಮುಧೋಳ ಹೇಳಿದರು.
ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
ಹಾಸನ ಜಿಲ್ಲೆಯ ಕದಲಿ ಗ್ರಾಮದಿಂದ ಬೆಳಿಗ್ಗೆ 11 ಗಂಟೆಗೆ ವಾಹನದ ಮೂಲಕ ಯಾತ್ರೆ ಕೈಗೊಂಡು 12:30ಕ್ಕೆ ಧರ್ಮಸ್ಥಳ ತಲುಪಿ ಶ್ರೀಮಠದ ವರೆಗೂ ಪಾದಯಾತ್ರೆ ಮಾಡುತ್ತೇವೆ. ಸಮೀರ್, ಚಿನ್ನಯ್ಯ, ತಿಮರೋಡಿ ಸೇರಿದಂತೆ ಹಲವಾರು ಜನ ಷಡ್ಯಂತ್ರದ ಮೂಲಕ ಕೆಟ್ಟ ಹೆಸರು ತರಲು ಪ್ರಯತ್ನಿಸಿದರು. ಧರ್ಮಸ್ಥಳದಲ್ಲಿ ಧರ್ಮ ಇದೆ. ವೀರೇಂದ್ರ ಹೆಗಡೆಯವರ ಬೆಂಬಲಕ್ಕಾಗಿ ಜೆಡಿಎಸ್ ಪಕ್ಷ ಇದೆ. ಅಪಪ್ರಚಾರ ಮಾಡಿದವರಿಗೆ ಸೂಕ್ತ ಕ್ರಮ ಕೈಗೋಳ್ಳಬೇಕು ಎಂದರು.
ರಾಜ್ಯದ ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಸಲು ದೊಡ್ಡ ಷಡ್ಯಂತರ ನಡೆಯುತ್ತಿದೆ. ಇದರ ಹಿಂದೆ ಹಲವು ದುಷ್ಟ ಶಕ್ತಿಗಳು ಕೈಯಾಡಿಸುತ್ತಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಕೂಡಾ ಇಂತಹ ಅಪಪ್ರಚಾರಕ್ಕೆ ಪುಷ್ಟಿ ನೀಡುತ್ತಿದೆ ಎಂಬ ಅನುಮಾನ ಭಕ್ತರಲ್ಲಿ ಮೂಡಿದೆ. ಅಮಾಯಕ ವ್ಯಕ್ತಿಯೊಬ್ಬ ಬುರುಡೆ ಹಿಡಿದುಕೊಂಡು ಬಂದ ತಕ್ಷಣ ಹಿಂದೆ ಮುಂದೆ ಯೋಚನೆ ಮಾಡದೇ ಸರಕಾರ ಎಸ್‌ಐಟಿ ತನಿಖೆವಹಿಸುತ್ತದೆ. ಧರ್ಮಸ್ಥಳದ ಭಕ್ತರ ನಂಬಿಕೆಗೆ ದ್ರೋಹ ಬಗೆಯುವ ಕೆಲಸ ಮಾಡಲು ಕೆಲವರು ಹೊರಟಿದ್ದಾರೆ. ಇದನ್ನು ಹತ್ತಿಕ್ಕುವ ಕೆಲಸ ಸರಕಾರ ಮಾಡದೇ ಮೌನವಹಿಸಿದೆ. ಕಾಣದ ಕೈಗಗಳನ್ನು ಗುರುತಿಸಬೇಕು ಎಂದು ಆಗ್ರಹಿಸಿದರು.
ಅನ್ನ ನೀಡುವ ಕೈಗೆ ಅಪವಾದ ತರುವ ಕೆಲಸವನ್ನು ಭ್ರಷ್ಟರು, ದುಷ್ಠರು ಸೇರಿಕೊಂಡು ಷಡ್ಯಂತ್ರ ಮಾಡಿದ್ದರು. ರಾಜ್ಯ ಸರ್ಕಾರ ಕೂಡ ಯಾವುದೇ ಮುಂಜಾಗ್ರತೆ ವಹಿಸದೇ ಹೋರಾಟಗಾರರ ಮಾತಿಗೆ ಬೆಲೆ ನೀಡಿ 7 ಕೋಟಿ ಜನರನ್ನು ದಿಕ್ಕರಿಸಿ ಎಸ್.ಐ.ಟಿ ತಂಡ ರಚನೆ ಮಾಡಿತು. ಇದರ ಹಿಂದೆ ರಾಜ್ಯ ಸರ್ಕಾರದ ಷಡ್ಯಂತ್ರ ಕೂಡ ಇರಬಹುದು ಎನ್ನುವ ಅನುಮಾನ ಕಾಡುತ್ತಿದೆ. ಷಡ್ಯಂತ್ರದ ವಿರುದ್ದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಾಯಕತ್ವದಲ್ಲಿ ಜೆಡಿಎಸ್ ನ ಎಲ್ಲ ಹಾಲಿ, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರನ್ನೊಳಗೊಂಡು ಯಾತ್ರೆ ಮಾಡಲಾಗುತ್ತಿದೆ ಅಂತ ಹೇಳಿದರು.
ಹಾಸನ ಜಿಲ್ಲೆಯ ಕದಲಿ ಗ್ರಾಮದಿಂದ ಬೆಳಿಗ್ಗೆ 11 ಗಂಟೆಗೆ ವಾಹನದ ಮೂಲಕ ಯಾತ್ರೆ ಕೈಗೊಂಡು 12:30ಕ್ಕೆ ಧರ್ಮಸ್ಥಳ ತಲುಪಿ ಶ್ರೀಮಠದ ವರೆಗೂ ಪಾದಯಾತ್ರೆ ಮಾಡುತ್ತೇವೆ. ಸಮೀರ್, ಚಿನ್ನಯ್ಯ, ತಿಮರೋಡಿ ಸೇರಿದಂತೆ ಹಲವಾರು ಜನ ಷಡ್ಯಂತ್ರದ ಮೂಲಕ ಕೆಟ್ಟ ಹೆಸರು ತರಲು ಪ್ರಯತ್ನಿಸಿದರು. ಧರ್ಮಸ್ಥಳದಲ್ಲಿ ಧರ್ಮ ಇದೆ. ವೀರೇಂದ್ರ ಹೆಗಡೆಯವರ ಬೆಂಬಲಕ್ಕಾಗಿ ಜೆಡಿಎಸ್ ಪಕ್ಷ ಇದೆ. ಅಪಪ್ರಚಾರ ಮಾಡಿದವರಿಗೆ ಸೂಕ್ತ ಕ್ರಮ ಕೈಗೋಳ್ಳಬೇಕು ಎಂದರು.
ಈ ವೇಳೆ ಈರಣ್ಣ ಬಾಳಿಕಾಯಿ, ಗಿರೀಶ್ ಸಂಶಿ, ನಿಂಗಪ್ಪ ಪ್ಯಾಟಿ, ತಿಪ್ಪಣ್ಣ ಹುಡೇದ, ದೇವಪ್ಪ ಮಲ್ಲಸಮುದ್ರ, ಕೆ. ಎಫ್ ದೊಡ್ಡಮನಿ, ಸಂಗಪ್ಪ ಯರಹುಣಸಿ, ಚನ್ನಪ್ಪ ಹರಿಹರ, ಭಾಷಾಸಾಬ್ ಬಾಗ್ವಾನ್, ಎಂ. ಎಂ ಜಾವೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.