ಆಪರೇಷನ್​ ಸಿಂಧೂರ! ಜಯ ಕರ್ನಾಟಕ ಸಂಟನೆಯಿಂದ ವಿಜಯೋತ್ಸವ.

07GDG03
Published on

ಗದಗ: ಪಹಲ್ಗಾಮ್​ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯು ಆಪರೇಷನ್​ ಸಿಂಧೂರ ಕಾರ್ಯಾಚರಣೆ ಮೂಲಕ ಪಾಕಿಸ್ತಾನದ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ನಡೆಸಿ ಉಗ್ರರನ್ನು ಸೆದೆಬಡಿದ ಕಾರ್ಯವನ್ನು ನಗರದ ವಿರೇಶ್ವರ ಪುಣ್ಯಾಶ್ರಮದಲ್ಲಿ ಪೂಜೆ ಸಲ್ಲಿಸುವ ಮೂಲಕ ಜಯ ಕರ್ನಾಟಕ ಸಂಟನೆ ವಿಜಯೋತ್ಸವ ಆಚರಿಸಿತು.

ಸಂಟನೆ ಅಧ್ಯಕ್ಷ ಚಂದ್ರಕಾಂತ ಚವ್ಹಾಣ ಮಾತನಾಡಿ, ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ಕೇವಲ 23 ನಿಮಿಷದಲ್ಲಿ ಪಾಕ್​ನ 9 ಉಗ್ರರನೆಲೆಗಳನ್ನು ದ್ವಂಸ ಮಾಡಿ, 70ಕ್ಕೂ ಹೆಚ್ಚು ಉಗ್ರರನ್ನು ಸಂಹಾರ ಮಾಡಿದೆ. ಭಾರತೀಯ ಸೇನೆಗೆ ಆತ್ಮಬಲವು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಿಗಲೆಂದು ಪಂಡಿತ್​ ಪುಟ್ಟರಾಜ ಕವಿ ಗವಾಯಿಗಳ ಆಶ್ರಮದಲ್ಲಿ ಪೂಜ್ಯರ ಗದ್ದುಗೆ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತಿದೆ. ಭಾರತದ140 ಕೋಟಿ ಭಾರತೀಯ ಜನರು ಸೇನೆಗೆ ಬೆಂಬಲವಾಗಿ ಇದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಭಾಷಾ ಸಾಬ್​ ಮಲ್ಸಮುದ್ರ, ನಾಗರಾಜ ತ್ರಿ, ವಿಠ್ಠಲ್​ ಬೆಂತೂರ, ಮೇರಾಜ ಮೇಲ್ಮನೆ, ಮಂಜುನಾಥ ಕುರುಬರ, ಮುತ್ತು ಪೂಜಾರ, ಸಂತೋಷ ಪೂಜಾರ, ಎಲ್ಲಪ್ಪ ಮೇಲ್ಮನಿ, ಸತ್ಯನ ಗೌಡ ಗೌಡರ, ಅಲ್ತಾ, ಸಾಧಿಕ, ಅನ್ನಪ್ಪ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net