

ಗದಗ: ಕಾಂಗ್ರೇಸ್ ಸರ್ಕಾರದ ಆರೋಗ್ಯ ಇಲಾಖೆ ಸಚಿವ ದಿನೇಶ ಗುಂಡುರಾವ್ ಅವರು ಸರ್ಕಾರಿ ಆಸ್ಪತ್ರೆ ಹಾಗು ಸುತ್ತಮುತ್ತಲಿನ ವಾತಾವರಣದಲ್ಲಿ ಇರುವ ಕೇಂದ್ರ ಸರ್ಕಾರದ ಬಡವರ ಪಾಲಿಗೆ ಮಹತ್ತರ ಯೋಜನೆಯಾದ ಜನ ಔಷದಿ ಕೇಂದ್ರವನ್ನು ಮುಚ್ಚುವ ನಿರ್ಧಾರ ಕೈಗೊಂಡಿರುವುದು ಖಂಡನೀಯವಾಗಿದೆ ಎಂದು ನಗರಸಭೆ ಸದಸ್ಯ ಅನೀಲ ಅಬ್ಬಿಗೇರಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಆರೋಗ್ಯ ಸಚಿವ ದಿನೇಶ ಗುಂಡುರಾವ ಅವರು ತೆಗೆದುಕೊಂಡಿರುವ ಜನ ಔಷಧಿ ಕೇಂದ್ರವನ್ನು ಮುಚ್ಚುವ ನಿರ್ಧಾರ ಖಂಡನೀಯವಾಗಿದೆ. ಕೇಂದ್ರ ಸರ್ಕಾರವು ದೇಶಾಧ್ಯಂತ ಬಡವರಿಗೆ, ದೀನದಲಿತರಿಗೆ ಕಡಿಮೆ ಧರದಲ್ಲಿ ಔಷಧಿ ದೊರೆಯಬೇಕೆಂದು ಬಹುದೊಡ್ಡ ಕನಸಿನೊಂದಿಗೆ ಮೋದಿಜೀ ಅವರು ಜನ ಔಷಧಿ ಯೋಜನೆಯನ್ನು ದೇಶಾದ್ಯಂತ ಜಾರಿಯಲ್ಲಿ ತಂದಿದ್ದರು. ಸಾರ್ವಜನಿಕರೂ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಯೋಜನೆಯ ಉದ್ದೇಶ ಹಾಗು ಗುರಿಯನ್ನು ರಾಜ್ಯ ಸರ್ಕಾರವು ನಾಶ ಮಾಡಲು ಹೊರಟಿದೆ ಎಂದು ತಿಳಿಸಿದ್ದಾರೆ.