ಗರ್ವ ಬಿಟ್ಟು ನಮ್ರತೆಯಿಂದ ಕಾರ್ಯ ನಿರ್ವಹಿಸಿ: ಎಚ್​.ಕೆ. ಪಾಟೀಲ

IMG-20240918-WA0018
Published on

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಜಿಲ್ಲಾಡಳಿತ ಭವನ ಮುಂಭಾಗದಲ್ಲಿ ಬುಧವಾರ ಏರ್ಪಡಿಸಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಆಡಳಿತದ ಪಾಠ ಮಾಡಿದ ಸಚಿವ ಎಚ್​.ಕೆ. ಪಾಟೀಲ ತಮ್ಮದೇ ಮಾತಿನ ಶೈಲಿಯಲ್ಲಿ ಎಚ್ಚರಿಕೆ ನೀಡಿದರು. ಕೆಲ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಅವರು, ರಚನಾತ್ಮಕ ಅಧಿಕಾರಿಗಳಿಗೆ, ಜನರೊಂದಿಗೆ ನಮ್ರತೆಯಿಂದ ವತಿರ್ಸುವರಿಗೆ ಮಾತ್ರ ಜಿಲ್ಲೆಯಲ್ಲಿ ಸ್ಥಾನ ಎಂಬ ಸಂದೇಶವನ್ನು ಪರೋಕ್ಷವಾಗಿ ನೀಡಿದರು. ಗರ್ವ ಬಿಟ್ಟು ನಮ್ರತೆಯಿಂದ ಕಾರ್ಯ ನಿರ್ವಹಿಸಲು ಸೂಚಿಸಿದರು.
ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನತಾ ದರ್ಶನದಲ್ಲಿ ಕೆಲ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳ ಮೇಲೆ ಮೊದಲೇ ಬೇಸರಗೊಂಡಿದ್ದರು. ಈ ರೀತಿಯ ನಡೆಯನ್ನು ತೀಕ್ಷ$್ಣವಾಗಿ ಟೀಕಿಸಿದ ಸಚಿವರು ತಮ್ಮ ಆರಂಭದ ಭಾಷಣದಲ್ಲೇ ಅಧಿಕಾರಿಗಳಿಗೆ ಆಡಳಿತದ ಪಾಠ ಮಾಡಿದರು. ಜನತಾ ದರ್ಶನ ಕಾರ್ಯಕ್ರಮಕ್ಕೆ ಆಗಮಿಸಿದ ಅಧಿಕಾರಿಗಳ ಪಟ್ಟಿ ನೀಡುವಂತೆ ಸೂಚಿಸಿದರು ಮತ್ತು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದರು. ಮುಂದುವರಿದು ಮಾತನಾಡಿ, ಅನವಶ್ಯಕವಾಗಿ ಕಚೇರಿಗೆ ಜನರನ್ನು ಅಧಿಕಾರಿಗಳು ಅಲೆಯುವಂತೆ ಮಾಡುವುದನ್ನು ತಪ್ಪಿಸಲು ಮತ್ತು ಕ್ಷುಲ್ಲಕ ಕೆಲಸಗಳಿಗೆ ಅಧಿಕಾರಿಗಳು ಲಂಚ ಪಡೆಯುವುದನ್ನು ತಪ್ಪಿಸುವುದೇ ಜನತಾ ದರ್ಶನದ ಉದ್ದೇಶವಾಗಿದೆ ಎಂದರು.

ರೈತರೆದುರು ಗರ್ವ ಬಿಡಿ:
ರೈತರ ಮುಂದೆ ಗರ್ವ ಬಿಡಿ. ವಿನಮ್ರದಿಂದ ಕೆಲಸ ಮಾಡಿ ಎಂದು ಸೂಚ್ಯವಾಗಿ ತಿಳಿಸಿದ ಎಚ್​.ಕೆ ಪಾಟೀಲ, ರೈತ ಹರಕು ಪಂಚೆ(ದೋತ್ರ) ತೊಟ್ಟು ಅಜಿರ್, ಅಹವಾಲು ನೀಡಲು ಬಂದ ಸಂದರ್ಭದಲ್ಲಿ ಅವರನ್ನು ಕುಳಿತುಕೊಳ್ಳಲು ವಿನಮ್ರವಾಗಿ ತಿಳಿಸಿ. ಒಂದು ವೇಳೆ ರೈತರು ಭಯದಿಂದ, ಸಂಕೋಚನಿಂದ ಕುಳಿತುಕೊಳ್ಳಲು ಸಂಕೋಚ ಪಟ್ಟರೆ ಜಿಲ್ಲಾಧಿಕಾರಿ ಒಳಗೊಂಡು ಇತರೆ ಅಧಿಕಾರಿಗಳು ಸಹ ಅವರ ಮುಂದೆ ಎದ್ದು ನಿಂತು, ಗೌರವ ಕೊಟ್ಟು ಅವರಿಗೆ ಸ್ಪಂಧಿಸಬೇಕು. ರೈತರ, ಬಡವರ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಮುಂದೆ ಅಧಿಕಾರಿಗಳು ಗರ್ವ ಬಿಡಬೇಕು ಎಂದು ಎಚ್​.ಕೆ. ಪಾಟೀಲ ಅಧಿಕಾರಿಗಳನ್ನು ಎಚ್ಚರಿಸಿದರು.

ನಂಬಿಕಸ್ಥ ಅಧಿಕಾರಿಗಳನ್ನು ನೇಮಿಸಿ:
ಕೆಲ ತಾಲೂಕು ಕಚೇರಿಯಲ್ಲಿ ನೂರಾರು ಬಾಕಿ ಕಡತಗಳಿವೆ. ಅವುಗಳ ವಿಲೇವಾರಿ ವಿಳಂಬವೇಕೆ ಎಂಬುದೇ ಪ್ರಶ್ನೆ. ಅಂತಹ ಕಡತಗಳ ವಿಲೆವಾರಿ ವಿಳಂಬಕ್ಕೆ ಕಾರಣ ಹುಡುಕಲು ಮತ್ತು ಆದಷ್ಟು ಬೇಗ ವಿಲೇವಾರಿ ಮಾಡಲು ಇಬ್ಬರು ವಿಶೇಷ ಅಧಿಕಾರಿಗಳನ್ನು ನೇಮಿಸಿಬೇಕು ಎಂದು ಎಚ್​.ಕೆ. ಪಾಟೀಲ ಜಿಲ್ಲಾಧಿಕಾರಿಗೆ ಸೂಚಿಸಿದರು. ತಾಲೂಕು ಕಚೇರಿಯಲ್ಲಿ ನೂರಾರು ಕಡತಗಳನ್ನು ಬಾಕಿ ಇರಿಸಿಕೊಂಡು ಅಧಿಕಾರಿಗಳು ಜನತಾ ದರ್ಶನ ದಲ್ಲಿ ದಾಖಲೆ ಹುಡುಕುತ್ತ ಕುರುವುದು ಸರಿಯಲ್ಲಿ. ನಂಬಿಕಸ್ಥ ಇಬ್ಬರೂ ಅಧಿಕಾರಿಗಳನ್ನು ನೇಮಿಸಿ ಅಂತಹ ಕಡತಗಳನ್ನು ಗಳನ್ನು ತರಿಸಿ ವಿಲೇವಾರಿ ಮಾಡುವ ಕ್ರಮ ಕೈಗೊಳ್ಳಬೇಕು. ಯಾವುದೇ ನೆಪಮೊಡ್ಡಿ ಜನರ ಅಜಿರ್ಗಳ ವಿಲೇವಾರಿ ವಿಳಂಬ ಮಾಡುವಂತಿಲ್ಲ. ಕಾನೂನಾತ್ಮಕ ಸಮಸ್ಯೆ ಇದ್ದರೆ ಮಾತ್ರ ಅಂತಹ ಅಜಿರ್ಗಳ ಮುಂದಿನ ಕ್ರಮಕ್ಕೆ ವಹಿಸಬೇಕು ಎಂದರು.

ಸಿಸಿ ಕ್ಯಾಮಾರ ಅಳವಡಿಸಿ:
ದಿನನಿತ್ಯ ಅಧಿಕ ಜನರು ಆಗಮಿಸುವಂತೆ ಕಚೇರಿಗಳಿಗೆ ಸಿಸಿ ಕ್ಯಾಮಾರ ಅಳವಡಿಸಬೇಕು. ಪ್ರತಿ ಕೆಡಿಪಿ ಸಭೆಯಲ್ಲಿ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತೇನೆ. ಆಹಾರ, ಸಾಮಾಜ ಕಲ್ಯಾಣ, ಹಿಂದುಳಿದ ವರ್ಗ, ತಹಸೀಲ್ದಾರ ಕಚೇರಿಯಲ್ಲಿ ಸಿಸಿ ಕೆಮಾರ ಅಳವಡಿಸಬೇಕು. ಪಾರದರ್ಶಕ ಕಾನೂನಾತ್ಮಕ ಸೇವೆಯನ್ನು ಜನರು ಭಯಸುತ್ತಾರೆ ಎಂದು ಸಚಿವರ ತಿಳಿಸಿದರು.
ಶಾಸಕ ಜಿ. ಎಸ್​. ಪಾಟೀಲ ಮಾತನಾಡಿ ಅಧಿಕಾರಿಗಳು ವಿನಾಕಾರಣ ವಿಳಂಭ ಧೋರಣೆ ಕೈ ಬಿಡಬೇಕು. ತುರ್ತಾಗಿ ಜನರ ಕಷ್ಟಗಳಿಗೆ ಸ್ಪಂದಿಸಿ ಕೆಲಸ ನಿರ್ವಹಿಸಬೇಕು. ಇದರ ಸಂರ್ಪೂಣ ಸದುಪಯೋಗವನ್ನು ಜಿಲ್ಲೆಯ ಜನತೆ ಪಡೆಯಬೇಕು ಎಂದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಓ ಭರತ್​ ಎಸ್​, ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್​ ಮೀನಾ, ಅಪರ ಜಿಲ್ಲಾಧಿಕಾರಿ ಅನ್ನರ್ಪೂಣ ಎಂ, ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಎಂ.ಬಿ. ಸಂಕದ ಉಪ ವಿಭಾಗಾಧಿಕಾರಿ ಗಂಗಪ್ಪ ಎಂ , ಬಿ.ಬಿ. ಅಸೂಟಿ ಇದ್ದರು.

ನಾವೇ ನಂ. 1:
ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಗದಗ ಜಿಲ್ಲೆ ರಾಜ್ಯದಲ್ಲಿ ನಂ 1 ಸ್ಥಾನದಲ್ಲಿದೆ. ಶೇ.99.02 ಪ್ರಗತಿ ಸಾಧಿಸಿದ್ದೇವೆ. ಇನ್ನೂಳಿದ ಶೇ. 0.08 ಅಜಿರ್ಗಳು ಬ್ಯಾಂಕ್​ ಇತರೆ ವಿವಿಧ ಕಾರಣಗಳಿಂದ ಭಾಕಿ ಇವೆ. ಬ್ಯಾಂಕ್​ ಖಾತೆಗೆ ಆಧಾರ ಜೋಡಣೆ, ಫೋನ್​ ನಂಬರ್​ ಜೋಡಣೆ ಸೇರಿದಂತೆ ಇತರೆ ಕಾರಣದಿಂದ ಬಾಕಿ ಉಳಿದವುಗಳಾಗಿವೆ ಎಂದು ಸಚಿವರು ತಿಳಿಸಿದರು.

ನಗರಸಭೆ ಅಧಿಕಾರಿಗಳಿಗೆ ತರಾಟೆ:
ವಾರ್ಡ ನಂ 35 ರ ಆದರ್ಶ ನಗರದ ಜನರು ನೀರು, ರಸ್ತೆ, 65 ಲಕ್ಷ ರೂ. ವೆಚ್ಚದಲ್ಲಿ ನಗರೋತ್ಥಾನ ಕಾರ್ಯ ಆರಂಭ ಆಗದ ಕುರಿತು ಅಹವಾಲು ನೀಡಿದರು. ಈ ಸಂದರ್ಭದಲ್ಲಿ ನಗರಸಭೆ ಕೆಲ ಅಧಿಕಾರಿಗಳು ಸ್ಥಳದಲ್ಲಿ ಇಲ್ಲದ್ದರಿಂದ ಎಚ್​.ಕೆ. ಪಾಟೀಲ ಸಿಟ್ಟಾದರು. ಒಳಚರಂಡಿ ವ್ಯವಸ್ಥೆ ಕುರಿತು ಮಾಹಿತಿ ನೀಡಬೇಕಿದ್ದ ಪರಿಸರ ಇಲಾಖೆ ಅಧಿಕಾರಿ ಆನಂದ ಬದಿ ಇಲ್ಲದ್ದಕ್ಕೆ ಸಿಟ್ಟಾದ ಸಚಿವರು ನೋಟೀಸ್​ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ನಗರೋತ್ಥಾನ ಕಾಮಗಾರಿ ಏಕೆ ಆರಂಭ ಆಗಿಲ್ಲ ಎಂದು ಯೋಜನಾಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಟನೆ ಜರುಗಿತು. ಇನ್ನೂ ವಾರ್ಡ್​ ನಂ 22 ರಲ್ಲಿ ಒಳಚರಂಡಿ, ರಸ್ತೆ, ನೀರು, ವಿದ್ಯುತ್​ ಕುರಿತು ಸಲ್ಲಿಸಿದ ಅಜಿರ್ಗೆ ಪ್ರತಿಕ್ರಿಯಿಸಿದ ಸಚಿವರು ಅ.2ರ ಒಳಗಾಗಿ ರಸ್ತೆ ಮತ್ತು ನೀರಿನ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಗತ್ಯ ಬಿದ್ದರೆ ಕೊಳವೆ ಬಾವಿ ಕೊರೆಸುವಂತೆ ನಿದೇರ್ಶನ ನೀಡಿದರು.

ಬಸ್​ ಸಂಚಾರ ಸಗುಮಗೊಳಿಸಿ:
ಬಾದಾಮಿ &-ಗದಗ, ಬಾಗಲಕೋಟ & ಗದಗ, ರೋಣ &ಗದಗ ಈ ಸಾರಿಗೆ ಬಸ್​ ಹಳೆಯ ಬಸ್​ ನಿಲ್ದಾಣಕ್ಕೆ ಬರುವುದಿಲ್ಲ ಎಂದು ಅಜಿರ್ ದಾರರು ಮನವಿ ಸಲ್ಲಿಸಿದರು. ಸಾರಿಗೆ ಇಲಾಖೆ ಅಧಿಕಾರಿಗಳು ಮಾತನಾಡಿ, ಹಳೆ ಬಸ್​ ನಿಲ್ದಾಣದಲ್ಲಿ ಅವಕಾಶ ಕಲ್ಪಿಸಿದರೆ ಸಂಚಾರ ದಟ್ಟಣೆ ಆಗುತ್ತಿದೆ. ಪೊಲೀಸರು ಕೂಡ ಈ ಮಾರ್ಗಕ್ಕೆ ಸಮ್ಮತಿ ಸೂಚಿಸಿಲ್ಲ ಎಂದರು. ಎಚ್​.ಕೆ. ಪಾಟೀಲ ಮಧ್ಯ ಪ್ರವೇಶಿಸಿ ಗದಗ ಡಿವಿಸಿಜ್​ ಬಸ್​ ಗಳು ಗದಗ ಹಳೇ ಬಸ್​ ನಿಲ್ದಾಣದ ಸಂಪಕಿರ್ಸಿ ಹೋಗಬೇಕು ಎಂದು ನಿರ್ದೇಶನ ನೀಡಿದರು.

ಮೊದಲಿನಂತಿಲ್ಲ ಸಭೆ:
ಕಳೆದ ಜನತಾ ದರ್ಶನ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಜಿಲ್ಲಾಡಳಿತ ಈ ಬಾರಿ ಸ್ವಲ್ಪ ಎಡವಿದ್ದನ್ನು ಸಚಿವ ಎಚ್​.ಕೆ. ಪಾಟೀಲ ಗಮನಿಸಿದ್ದರು. ಅಧಿಕಾರಿಗಳಿಗೆ, ಅಜಿರ್ ದಾರರಿಗೆ ಆಸನದ ವ್ಯವಸ್ಥೆ, ಊಟೋಪಚಾರದ ವ್ಯವಸ್ಥೆ ಬಗ್ಗೆ ಸಚಿವರು ಬೇಸರ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಕೂಡ ವೇದಿಕೆಯಲ್ಲಿ ಮೌನವಾಗಿರುವುದು ಕಂಡು ಬಂದಿತು. ಅಪರ ಜಿಲ್ಲಾಧಿಕಾರಿ ಅನ್ನಪೂರ್ನ ಎಂ ಅವರು ಕಾರ್ಯಕ್ರಮದಲ್ಲಿ ಕಸಿವಿಸಿಗೊಂಡಿರುವುದು ಕಂಡುಬಂದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net