ಜನಪದವು ನಮ್ಮ ಸಂಸ್ಕೃತಿಯ ತಾಯಿ ಬೇರು

1000201266
Published on
Gadag: ಇಂದು ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗದಗನಲ್ಲಿ ಹಮ್ಮಿಕೊಂಡಿದ್ದ *ಜನಪದ ಉತ್ಸವ* ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ್ದ ಹುಲಿಗೆಪ್ಪ ಎಸ್ ಜೊಂಡಿಯವರು ಇಂದಿನ ದಿನಮಾನಗಳಲ್ಲಿ ನಮ್ಮ ಮೂಲ ಸಂಸ್ಕೃತಿ ,ಆಚಾರ ,ವಿಚಾರ ಸಂಪ್ರದಾಯ ,ರೂಢಿಗಳು ನಶಿಸಿ ಹೋಗುತ್ತಿವೆ .ವಿದೇಶಿಯ ಸಂಸ್ಕೃತಿ ರಾರಾಜಿಸುತ್ತಿದೆ. ಇಂತಹ ಕಾಲಘಟ್ಟದಲ್ಲಿ ನಮ್ಮ ತಾಯಿ ಸಂಸ್ಕೃತಿ ,ಭಾಷೆ ,ಮೌಲ್ಯಗಳನ್ನು ಉಳಿಸಿ ಬೆಳೆಸಬೇಕಾದದ್ದು ಅನಿವಾರ್ಯವೂ ಅಗತ್ಯವೂ ಹೌದು.
 ಜನಪದ ಹಾಡು, ಒಗಟು ,ಒಡಪು ,ಲಾವಣಿಗಳ ಸಾಹಿತ್ಯದಲ್ಲಿ ಸಂಸ್ಕೃತಿಯ ಬೇರುಗಳಿವು. ಅವುಗಳನ್ನು ಮುಂದಿನ ಜನಾಂಗಕ್ಕೆ ಪೋಷಿಸಿ ಉಳಿಸಿ ಬೆಳಸಬೇಕೆಂದು ವಿದ್ಯಾರ್ಥಿಗಳಿಗೆ ಹಾಡುಗಳ ಮೂಲಕ  ತಿಳಿ  ಹೇಳಿದರು.
 ಜೊತೆಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಶಿವಪ್ಪ ಎಂ ಕುರಿ ಅವರ ಅನಿಸಿಕೆ ವ್ಯಕ್ತಪಡಿಸಿದರು.ಐಕ್ಯೂ ಎಸಿ ಸಂಚಾಲಕರಾದ ಮಹಾಂತೇಶ್ ಮುಧೋಳ ಹಾಗೂ ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಮಹಾದೇವ ಫ.ವಡೇಕಾರ  ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ ಕೆ.ಎಂ ಚಿಕ್ಕೇರೂರ  ವಹಿಸಿದ್ದರು.
ಪ್ರಾರ್ಥನೆಯನ್ನ ಕು. ಆಶಾ ಗೈದರು. ಸ್ವಾಗತವನ್ನು ಎಸ್ .ಎ. ಸಂಗನಾಳ ಅವರು ನೆರವೇರಿಸಿದರೆ . ನಾಗಮ್ಮನವರ್ ಅವರು  ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶರಣಪ್ಪ ಹೊಸಳ್ಳಿ  ನೆರವೇರಿಸಿದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net