ನಿವೃತ್ತಿ ನಂತರದ ಹಣ ದತ್ತಿನಿಧಿಯಾಗಿಟ್ಟು ಸಮಾಜಮುಖಿ ಕೆಲಸಕ್ಕೆ ಬಳಕೆ ಅಪರೂಪ: ಡಿ.ಆರ್​. ಪಾಟೀಲ

13GDG05
Published on

ವಿಜಯವಾಣಿ ಸುದ್ದಿಜಾಲ ಗದಗ

ನಿವೃತ್ತಿ ನಂತರ ಬಂದ ಹಣವನ್ನು ತಮ್ಮ ಅಜ್ಜನವರ ಹೆಸರಿನಲ್ಲಿ ದತ್ತಿ ನಿಧಿಯಾಗಿ ಇಟ್ಟು, ಅದನ್ನು ಸಮಾಜಮುಖಿ ಕೆಲಸ, ಚಟುವಟಿಕೆಗಳಿಗಾಗಿ ಬಳಸುವ ನಿವೃತ್ತಿ ಶಿಕ ಎಸ್​. ಎ. ಜಮಾದಾರರ ಕಾರ್ಯ ಅಪರೂಪವಾಗಿದ್ದು ಎಂದು ಹಿರಿಯ ರಾಜಕಾರಣಿ ಡಿ. ಆರ್​. ಪಾಟೀಲ ಹೇಳಿದರು.

ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಶಾಸ್ತ್ರಿ ಹನಮಂತಸಿಂಗ ಜಮಾದಾರರ 51 ನೇ ಪುಣ್ಯಸ್ಮರಣೋತ್ಸವ, ಜೀವನ ಆಧಾರಿತ ಪುಸ್ತಕ ಬಿಡುಗಡೆ ಸಮಾರಂಭ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತೊಡಗುವ ಗುಣ ಎಲ್ಲರೂ ಮೈಗೂಡಿಸಿ ಕೊಳ್ಳಬೇಕಾದ ಅವಶ್ಯಕತೆ ಇದೆ. ರಜಪೂತ ಸಮಾಜದವರು ನನಗೆ ಮತ್ತು ತಮ್ಮ ಸಹೋದರ ಸಚಿವ ಎಚ್​.ಕೆ. ಪಾಟೀಲರಿಗೆ ರಾಜಕೀಯ ಬೆಂಬಲ ನೀಡುತ್ತಿರುವುದನ್ನು ಎಂದಿಗೂ ಮರೆಯಲಾಗದ ವಿಷಯ ಎಂದರು.

ಜೆ.ಕೆ. ಜಮಾದಾರ ಮಾತನಾಡಿ, ಶಾಸ್ತ್ರಿ ಹನಮಂತಸಿಂಗ್​ ಅವರು ರಜಪೂತ ಸಮಾಜದಲ್ಲಿ ಅತ್ಯಂತ ಪ್ರತಿಭಾಶಾಲಿಗಳು, ಶಕ್ತಿ ಆರಾಧಕರಾಗಿದ್ದ ಅವರ ಅದ್ವೆ$ೈತ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದರು. ಬಹುಭಾಷೆ ಬಲ್ಲವರು ಆಗಿದ್ದರು. ಶೃಂಗೇರಿ ಮತ್ತು ಸಿಂದಗಿ ಮಠಗಳಲ್ಲಿ ಇದ್ದು ಸಂಸತ ಅಧ್ಯಯನ ಮಾಡಿದ್ದರು. ರೇಖಾಶಾಸ್ತ್ರ, ಪಂಚಾಂಗವನ್ನು ಅಭ್ಯಾಸ ಮಾಡಿದ್ದರು. ಭಗವದ್ಗೀತೆಯ ಶ್ಲೋಕಗಳನ್ನು ಲೀಲಾಜಾಲವಾಗಿ ಪಠಿಸುವರಾಗಿದ್ದರು. ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ, ಅವರ ನೆನಪು ಮರುಕಳಿಸುವಂತೆ ಮಾಡಿರುವ ಅವರ ಮೊಮ್ಮಗನ ಕಾರ್ಯ ಶ್ಲಾನೀಯ ಎಮದರು.

ಕಾರ್ಯಕ್ರಮದಲ್ಲಿ ರಜಪೂತ ಸಮಾಜದ ಪ್ರತಿಭಾನ್ವಿತ ಎಸ್ಸೆಸ್ಸೆಲ್ಸಿ, ಪಿಯುಸಿ, ವೃತ್ತಿಪರ ಪರೀೆ ಾಸಾದ, ವೈದ್ಯರು, ಸಾಧಕರು ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸ್ತ್ರಿ ಹನಮಂತಸಿಂಗ ಜಮಾದಾರರ ಅವರ ಜೀವನ ಆಧಾರಿತ ಪುಸ್ತಕ ಬಿಡುಗಡೆ ಮಾಡಲಾಯಿತು.

ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ. ರವೀಂದ್ರಸಿಂಗ, ಕೊಪ್ಪಳದ ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜಿನ ಶಾಲಾಕ್ಯ ವಿಭಾಗದ ಮುಖ್ಯಸ್ಥ ಡಾ. ವೀರಯ್ಯ ಹಿರೇಮಠ, ಗದಗ ಜಿಲ್ಲಾ ಶಿಣ ಇಲಾಖೆಯ ಡಿಡಿ ಆರ್​.ಎಸ್​. ಬುರಡಿ, ಮಹಾರಾಷ್ಟ್ರದ ಸಿಬಿಐ ವಿಶೇಷ ವಕೀಲ ಪ್ರದಿಪಸಿಂಗ ದೊಡ್ಡಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net