

ವಿಜಯವಾಣಿ ಸುದ್ದಿಜಾಲ ಗದಗ
ನಮ್ಮ ಪರಂಪರೆಯನ್ನು ಈ ಹಿಂದೆ ನಮ್ಮ ಪೂರ್ವಜರು ಕಟ್ಟಿ ಬೆಳೆಸಿದ ಜನಪದ ಸಂಸತಿಯ ಅಡಕವಾಗಿದೆ. ಜನರ ಬಾಯಿಂದ ಬಾಯಿಗೆ ಪಸರಿಸುವ ಮಾತು, ಪದಗಳೇ ನಮ್ಮ ಜನಪದ ಎಂದು ಜಿಲ್ಲಾ ಬಿಜೆಪಿ ಎಸ್. ಟಿ ಮೋರ್ಚಾ ಬಸವಂತಪ್ಪ ತಳವಾರ ಹೇಳಿದರು.
ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ಗುರು ಮಲ್ಲಜ್ಜನವರ ಹಾಗೂ ದುರ್ಗಾದೇವಿ ಜಾತ್ರಾಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸತಿ ಇಲಾಖೆಯ ವತಿಯಿಂದ ಹಮ್ಮಿಕೊಂಡ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಜಾನಪದ ಮಾತುಗಳೇ ಮುಂದೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾದ ಜನಪದ ಸಂಸತಿಯನ್ನು ಶ್ರೀಮಂತಗೊಳಿಸಿದವು. ಜಗತ್ತು ಎಷ್ಟೇ ಮುಂದುವರೆದರೂ ಕೂಡಾ ಜನಪದ ಸಂಸತಿಯ ಹಿನ್ನಲೆಯ ಮೇಲೆ ನಿಂತಿದೆ. ಅಂತಹ ಮೂಲ ಜನಪದ ಸಂಸತಿಯನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ಬೆಟಗೇರಿ ಪೊಲೀಸ ಠಾಣೆಯ ಪಿಎಸ್ಐ ಲಕ್ಷ$್ಣಣ ಆರಿ ಮಾತನಾಡಿ, ಇಂದು ಪ್ರತಿಯೊಂದು ೇತ್ರದಲ್ಲಿ ವಿದ್ಯಾಥಿರ್, ಯುವ ಜನರ ಸಾಧನೆಗೆ ತಂತ್ರಜ್ಞಾನ ತುಂಬಾ ಸಹಕಾರಿ ಆಗಿದೆ. ಅದನ್ನು ಸರಿಯಾಗಿ ಬಳಸಿಕೊಂಡು ಒಂದಿಲ್ಲೊಂದು ೇತ್ರದಲ್ಲಿ ಸಾಧನೆಗೈದು ಈ ದೇಶಕ್ಕೆ ಕೀತಿರ್ ತರುವ ನಿಟ್ಟಿನಲ್ಲಿ ಬೆಳೆಯಬೇಕು ಎಂದರು.
ನಗರಸಭೆ ಸದಸ್ಯ ಚಂದ್ರು ಕರಿಸೋಮನಗೌಡರ ಮಾತನಾಡಿ, ಇಂದು ತಂತ್ರಜ್ಞಾನ ಯುಗದಲ್ಲಿ ಬದುಕುತ್ತಿದ್ದೇವೆ. ಆದರೆ ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಮರೆತು ಬದುಕುತ್ತಿರುವುದು ಶೋಚನೀಯ. ನಮ್ಮ ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವು ನಡೆದಾಗ ನಮ್ಮ ನಾಡಿನ ಮತ್ತು ದೇಶದ ಸಂಸತಿಗೆ ನಾವು ಗೌರವಿಸಿದಂತಾಗುತ್ತದೆ ಎಂದರು.
ನಿವೃತ್ತ ಪಿಎಸ್ಐ ಮುದಬಸಯ್ಯ ಸಂದಿಗೋಡಮಠ ಮಾತನಾಡಿ, ಸಾಧನೆ ಎಂಬುದು ಸಾಧಕನ ಸ್ವತ್ತು ಹೊರತೆ ಸೋಮಾರಿ ಸ್ವತ್ತಲ್ಲ. ಹಾಗಾಗಿ ನಮ್ಮ ಯುವ ಜನರು ಕಲೆ, ಸಂಗೀತ, ಸಾಹಿತ್ಯ, ಯೋಗ, ಕ್ರೀಡೆ, ಚಿತ್ರಕಲೆ, ಶಿಲ್ಪಕಲೆ, ನಾಟಕ, ನೃತ್ಯ, ಮತ್ತು ಧಾಮಿರ್ಕ ವಿಧಿ ವಿಧಾನಗಳನ್ನು ವಿದ್ಯಾಥಿರ್ ದಿಸೆಯಲ್ಲಿಯೇ ಕರಗತ ಮಾಡಿಕೊಂಡು ಪರಿರ್ಪೂಣವಾಗಿ ಸಾಧನೆ ಮಾಡಿದ್ದಾರೆ ಎಂದರು.
ಶಿವರುದ್ರಪ್ಪ ನರಸಾಪೂರ, ಶೇಖರಯ್ಯ ಹಿರೇಮಠ, ಹೊನ್ನಮ್ಮ ಹತಿರ್, ಪಾರ್ವತೆವ್ವ ಗಿಡ್ಡಮಲ್ಲಣ್ಣವರ, ಬಸವರಾಜ ಕುರಹಟ್ಟಿ, ಚನ್ನಪ್ಪ ಬಿಳೆಯಲಿ, ಷಣ್ಮುಖಪ್ಪ ಹುಡೇದ, ಶರಣಪ್ಪ ಅಸೂಟಿ, ಮಲ್ಲಪ್ಪ ಬಿಳೆಯಲಿ, ಚನ್ನಪ್ಪ ಗಿಡ್ಡಮಲ್ಲಣ್ಣವರ, ಸಿದ್ದಪ್ಪ ನಿಡಗುಂದಿ, ಯಲ್ಲಪ್ಪ ಮಾದರ, ದೇವಪ್ಪ ಕೊತಬಾಳ, ಭೀಮನಗೌಡ ಗೌಡರ, ಪ್ರಕಾಶ ಬಿಳೆಯಲಿ, ಮಲ್ಲಪ್ಪ ಮೇಗಲಮನಿ, ಬಡೇಸಾಬ ನದಾ, ಬಸವರಾಜ ಖಾನಗೌಡರ, ಕೃಷ್ಣಾ ನರಸಾಪೂರ, ಬಸವರಾಜ ಚನ್ನಪ್ಪ ಬಿಳೆಯಲಿ, ನಿಂಗನಗೌಡ ಗಿಡ್ಡಮಲ್ಲಣ್ಣವರ ಇತರರು ಇದ್ದರು.