ನೂತನ ವೀರಭದ್ರೇಶ್ವರ ಮತ್ತು ಭದ್ರಕಾಳಮ್ಮ ಮೂರ್ತಿ ಪ್ರತಿಷ್ಠಾಪನೆ

Oplus_131072
Oplus_131072
Published on

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಬಸವೇಶ್ವರ ನಗರದ ವೀರಭದ್ರೇಶ್ವರ ದೇವಸ್ಥಾನದಲ್ಲಿ ನೂತನ ವೀರಭದ್ರೇಶ್ವರ ಮೂರ್ತಿ ಮತ್ತು ಭದ್ರಕಾಳಮ್ಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಮಹಾರಥೋತ್ಸವ ಮತ್ತು ಗಂಗಾ ಪೂಜೆ, ಕಲಶ ಪೂಜೆ ಅಗ್ನಿ ಪ್ರವೇಶ ಲು ರಥೋತ್ಸವ ಕಾರ್ಯಕ್ರಮಗಳು ಆ. 11 ರಿಂದ ಆ. 30ರ ವರೆಗೆ ಜರುಗಲಿವೆ ಎಂದು ದೇವಸ್ಥಾನ ಟ್ರಸ್ಟ ಧರ್ಮದಶಿರ್ ರಾಚಪ್ಪ ಮಿಣಜಗಿ ಹೇಳಿದರು.
ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆ.11 ರಂದು ಒಕ್ಕಲಗೇರಿ ಓಣಿಯ ರಾಯಚೋಟೇಶ್ವರ ದೇವಸ್ಥಾನದಿಂದ ನೂತನ ಮೂರ್ತಿ ರ್ಗಳನ್ನು ಮೆರವಣಿ ಮೂಲಕ ದೇವಸ್ಥಾನಕ್ಕೆ ತರಲಾಗುವುದು. ಆ. 17 ರಂದು ಗಂಗಾಪೂಜೆ, ಗೋಪೂಜೆ, ದೇವಾಲ ಪ್ರವೇಶ, ಪ್ರಧಾನ ಕಲಶ ಪೂಜೆ ಗಣ ಹೋಮ ನೆರವೇರುವುದು. ಆ.18 ರಂದು ಬೃಹನ್ಮಠದ ಅಬಿನವ ಪಂಚಾಕ್ಷ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ರುದ್ರಾಭಿಷೇಕ, ರುದ್ರಹೋಮ ನೆರವೇರುವುದು ಮತ್ತು ಪ್ರಾಣ ಪ್ರತಿಷ್ಠಪನೆ ಕಾರ್ಯಕ್ರ ಜರುಗುವುದು. ಆ. 26 ರಂದು ಮಹಾರಥೋತ್ಸವ ಹಾಗೂ ಆ. 27 ರಂದು ಅಗ್ನಿ ಪೂಜೆ, ರಥೋತ್ಸವ ಜರಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಪುತ್ರಪ್ಪ ಬೇವಿನಮರದ, ಜಗದೀಶ ಯಚ್ಚಲಗಾರ, ಸುರೇಶ ಶಿರಗಣ್ಣವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net