ಶಿಕ್ಷಕ ವೃತ್ತಿಯು ತೃಪ್ತಿಕರವಾದದ್ದು : ಎಚ್.ಎಂ.ಹಳ್ಳದ

Hallad
Published on

ಗದಗ: ಶಿಕ್ಷಕ ವೃತ್ತಿಯು ತೃಪ್ತಿಕರವಾದದ್ದು ತಮ್ಮ ಸೇವಾ ಅವಧಿಯಲ್ಲಿ ತಮ್ಮೊಂದಿಗೆ ಸಹಕರಿಸಿದ ವೃತ್ತಿಬಾಂಧವರು ಆಡಳಿತ ಮಂಡಳಿಯವರನ್ನು ನಾವು ಸ್ಮರಿಸಬೇಕೆಂದು ನಿವೃತ್ತ ಶಿಕ್ಷಕ ಎಚ್.ಎಂ.ಹಳ್ಳದ ಹೇಳಿದರು.

ಅವರು ಗದುಗಿನ ಸೋ.ಸ ಕ್ಷತ್ರೀಯ ಶ್ರೀ ಜಗದಂಬಾ ಶಿಕ್ಷಣ ಕೇಂದ್ರದ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಜರುಗಿದ ನಿವೃತ್ತಿ ಸನ್ಮಾನ ಬೀಳ್ಕೋಡುಗೆ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದರು.

ಸಂಸ್ಥೆಯು ತಮ್ಮ ಸೇವಾ ಅವಧಿಯಲ್ಲಿ ನೀಡಿದ ಮಾರ್ಗದರ್ಶನ ವಿದ್ಯಾರ್ಥಿಗಳ ಆತ್ಮೀಯತೆ ಸಹದ್ಯೋಗಿಗಳ ಸಹಕಾರವು ತಮ್ಮ ವೃತ್ತಿಗೆ ಸಹಾಯವಾಗಿದೆ. ಮಕ್ಕಳ ಕಲಿಕೆಗೆ ಪೂರಕವಾಗಿ ಬೋಧನೆಯಲ್ಲಿ ತಮ್ಮ ಸೇವಾ ಅವಧಿಯಲ್ಲಿ ತೊಡಗಿದ್ದು ನಿಜವಾಗಿಯೂ ತಮಗೆ ತೃಪ್ತಿ ತಂದಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಫಕ್ಕೀರಸಾ ಭಾಂಡಗೆ ವೃತ್ತಿಯಲ್ಲಿ ಸೇವಾ ಮನೋಭಾವನೆ ಹೊಂದಿ ಮಕ್ಕಳೊಂದಿಗೆ ಉತ್ತಮ ಬಾಂಧವ್ಯದೊದಿಗೆ ಶಿಕ್ಷಕ ವೃತ್ತಿಯಲ್ಲಿ ಮುನ್ನಡೆದರೆ ಯಶಸ್ಸು ಅಂತಹ ಕಾರ್ಯವನ್ನು ಹಳ್ಳದ ಅವರು ಮಾಡಿದ್ದಾರೆ ಎಂದರು.

ಶಾಲಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಖಟವಟೆ ಮಾತನಾಡಿ ಸುಧೀರ್ಘವಾದ ಸೇವೆ ಸಲ್ಲಿಸಿದ ಶಿಕ್ಷಕರು ಪ್ರೀತಿಯಿಂದ ಮಕ್ಕಳೊಂದಿಗೆ ಬೋಧನೆಯಲ್ಲಿ ತೊಡಗಿ ಇಂದು ನಿವೃತ್ತಿಯ ಬದುಕು ಸುಗಮವಾಗಲಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಆರ್.ಎನ್.ಬಡಿಗೇರ ನಮ್ಮ ಶಾಲೆಯಲ್ಲಿ ನಮಗೆಲ್ಲ ಹಿರಿಯರಾಗಿ ಆತ್ಮೀಯತೆಯೊಂದಿಗೆ ಒಡನಾಟ ಹೊಂದಿ ಸೇವಾ ಅವಧಿಯನ್ನು ಪೂರ್ತಿಗೊಳಿಸಿದ ಹಳ್ಳದ ಅವರು ನಮಗೆ ಮಾದರಿ ಎಂದರು.

ವೇದಿಕೆಯ ಮೇಲೆ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಂಸ್ಥೆಯ ವತಿಯಿಂದ ಎಚ್.ಎಂ.ಹಳ್ಳದ ದಂಪತಿಗಳನ್ನು ಸನ್ಮಾನಿಸಿ ಬೀಳ್ಕೋಡಲಾಯಿತು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ಐ.ಎಸ್.ಸರಗಣಾಚಾರಿ ಸ್ವಾಗತಿಸಿದರು, ರವಿ ಕೋಟಿಯವರ ನಿರೂಪಿಸಿದರು ಆರ್.ಡಿ.ಬಸವಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net