

ಇನ್ನರ್ ವ್ಹೀಲ್ ಸಂಸ್ಥೆ ಗದಗ ಬೆಟಗೇರಿಯವತಿಯಿಂದ ಉಚಿತ ಹಿಮೋಗ್ಲೋಬಿನ ತಪಾಸಣೆ
Gadag: ಇನ್ನರ್ ವೀಲ್ ಕ್ಲಬ್ ಗದಗ ಬೆಟಗೇರಿ, ಕೆಎಲ್ ಇ ಸೊಸೈಟಿಯ ಕಲಾ ಮತ್ತು ವಾಣಿಜ್ಯ ಕಾಲೇಜು, ಮಹಿಳಾ ಸಬಲೀಕರಣ ಕೋಶ ಹಾಗೂ ಬಸವೇಶ್ವರ ರಕ್ತ ಕೇಂದ್ರ, ಗದಗ ಇವುಗಳ ಸಹಯೋಗದೊಂದಿಗೆ ಮಹಿಳೆಯರಿಗೆ ಉಚಿತವಾಗಿ ಹಿಮೋಗ್ಲೋಬಿನ್ ತಪಾಸಣಾ ಶಿಬಿರವನ್ನು ಕೆಎಲ್ ಇ ಸೊಸೈಟಿಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಡಾ. ಎ. ಕೆ. ಮಠ ಶಿಬಿರವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ಹಾಗೂ ಇನ್ನರ್ ವ್ಹೀಲ್ ಸಂಸ್ಥೆಯ ಸದಸ್ಯರನ್ನುದ್ಧೇಶಿಸಿ ಮಾತನಾಡುತ್ತಾ ರಕ್ತದಲ್ಲಿರು ಕಡಿಮೆ ಅಥವಾ ಅಧಿಕ ಹಿಮೋಗ್ಲೋಬಿನ್ ನಿಖರವಾದ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯವಾಗಿರುತ್ತದೆ. ನಮ್ಮ ರಕ್ತದಲ್ಲಿ ಹಿಮೋಗ್ಲೋಬಿನ್ ಇದೆ ಎಂಬುದನ್ನು ಕಂಡುಹಿಡಿಯಲು ಹಿಮೋಗ್ಲೋಬಿನ್ ಪರೀಕ್ಷೆಯನ್ನು ಬಳಸಲಾಗುತ್ತದೆ. ರಕ್ತಹೀನತೆ ಎಂದು ಕರೆಯಲ್ಪಡುವ ಸ್ಥಿತಿಯನ್ನು ನಾವು ಆರ್.ಬಿಸಿಯ ಕಡಿಮೆ ಮಟ್ಟವನ್ನು ಹೊಂದಿದ್ದೇವೆಯೇ ಎಂದು ನಿರ್ಧರಿಸಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ರಕ್ತಹೀನತೆಯನ್ನು ಗುರುತಿಸುವುದರ ಜೊತೆಗೆ, ಹಿಮೋಗ್ಲೋಬಿನ್ ಪರೀಕ್ಷೆಯು ಯಕೃತ್ತು ಮತ್ತು ಮೂತ್ರಪಿಂಡದ ಕಾಯಿಲೆಗಳು, ರಕ್ತದ ಅಸ್ವಸ್ಥತೆಗಳು, ಅಪೌಷ್ಟಿಕತೆ, ಕೆಲವು ರೀತಿಯ ಕ್ಯಾನ್ಸರ್ ಮತ್ತು ಹೃದಯ ಮತ್ತು ಶ್ವಾಸಕೋಶದ ಸ್ಥಿತಿಗಳಂತಹ ಇತರ ಆರೋಗ್ಯ ಸಮಸ್ಯೆಗಳ ರೋಗನಿರ್ಣಯದಲ್ಲಿ ತೊಡಗಿಸಿಕೊಳ್ಳಬಹುದು. ಋತುಚಕ್ರವು ಮಹಿಳೆಯರಲ್ಲಿ ಹಿಮೋಗ್ಲೋಬಿನ್ ಮಟ್ಟಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಆದ್ದರಿಂದ ಮಹಿಳೆಯರು ಹಿಮೋಗ್ಲೋಬಿನ್ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದರು. ಈ ಶಿಬಿರದಲ್ಲಿ ಒಟ್ಟು 151 ಮಹಿಳೆಯರಿಗೆ ರಕ್ತದೊತ್ತಡ ಹಾಗೂ ಹಿಮೋಗ್ಲೋಬಿನ್ ಪರೀಕ್ಷೆಯನ್ನುಮಾಡಿ ಮಾಹಿತಿನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಸಂಸ್ಥೆ ಗದಗ ಬೆಟಗೇರಿಯ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಮಾರನಬಸರಿ, ಕಾರ್ಯದರ್ಶಿಗಳಾದ ಶ್ರೀಮತಿ ವೀಣಾ ತಿರ್ಲಾಪೂರ, ಐಎಸ್‌ಓ ಶ್ರೀಮತಿ ಪುಷ್ಪಾ ಭಂಡಾರಿ, ಮಾಜಿಅಧ್ಯಕ್ಷರಾದ ಶ್ರೀಮತಿ ಆಶಾ ಪಟ್ಟಣಶೆಟ್ಟಿ, ಶ್ರೀಮತಿ ಸುಮಾ ಪಾಟೀಲ, ವೈದ್ಯಕೀಯ ತಂತ್ರಜ್ಞರಾದ ಅನಿಲ, ಸರೋಜ ಪತ್ರಾರ, ದೀಪಾ ರಾಮೆನಹಳ್ಳಿ, ಮಹಿಳಾ ಸಬಲೀಕರಣ ಕೋಶದ ಸಂಚಾಲಕರಾದ ಶ್ರೀಮತಿ ವಿಶಾಲಾ ತಳಗಡೆ, ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾ .ವೀಣಾ ಇ, ಪ್ರೊ ಶ್ವೇತಾ ರಾಚಯ್ಯನವರ, ಪೊ. ಗೌರಾ ಯಳಮಲಿ ಹಾಗೂ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.