

ವಿಜಯವಾಣಿ ಸುದ್ದಿಜಾಲ ಗದಗ
ನಗರದ ಇನ್ನರ್ ವ್ಹೀಲ್ ಸಂಸ್ಥೆಯಲ್ಲಿ ಭಾನುವಾರ ವಿದ್ಯುನ್ಮಾನ ತ್ಯಾಜ್ಯ ಸಂಗ್ರಹಣೆ ಉಪಕರಣಗಳಿಗೆ ಚಾಲನೆ ಕಾರ್ಯಕ್ರಮ ಜರುಗಿತು.
ಸಂಸ್ಥೆಯ ಚೇರಮನ್ನ ಜ್ಯೋತಿಕಿರಣ ದಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯುನ್ಮಾನ ವಸ್ತುಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ನಿರುಪಯುಕ್ತ ವಿದ್ಯುನ್ಮಾನ ವಸ್ತುಗಳಿಂದ ಪರಿಸರಕ್ಕೆ ಆಗುವ ಅಪಾಯಗಳು ಅಧಿಕವಾಗಿವೆ. ಅಭಿವೃದ್ಧೀಶಿಲ ರಾಷ್ಟ್ರಗಳಲ್ಲಿ ವಿದ್ಯುನ್ಮಾನ ತ್ಯಾಜ್ಯವನ್ನು ಅಸಾಂಪ್ರದಾಯಿಕವಾಗಿ ಸಂಸ್ಕರಿಸುವುದರಿಂದ ಗಂಭೀರ ಅರೋಗ್ಯ ಮತ್ತು ಮಲಿನತೆ ಸಮಸ್ಯೆಗಳು ಉಂಟಾಗುತ್ತವೆ ಎಂದರು.
ಕೆಲವು ವಿದ್ಯುನ್ಮಾನ ಭಾಗಗಳು, ಸಿಆರ್ಟಿಗಳು, ಸೀಸ, ನೀಲಿ ತವರ, ಬೆರಿಲಿಯಮ್, ಪಾದರಸ, ಮತ್ತು ಬ್ರಾಮಿನೇಟೆಡ್, ದುರಸ್ತಿಯಾಗದ ಟಿವಿ, ಮೊಬೈಲ್, ಸ್ಮಾರ್ಟ್ೋನ್, ಫ್ರಿಡ್ಜ್, ವಾಷಿಂಗ್ ಮೆಷಿನ್, ಓವನ್, ಪ್ರಿಂಟರ್, ಕೀ ಬೋರ್ಡ್, ಏರ್ ಕಂಡೀಷನರ್, ಜೆರಾಕ್ಸ್ ಸೇರಿದಂತೆ 23 ಬಗೆಯ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ಸ್ ಉಪಕರಣಗಳನ್ನು ಇತ್ಯಾಜ್ಯ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ವೈಜ್ಞಾನಿಕ ವಿಲೇವಾರಿಗೆ ಸಂಸ್ಥೆ ಮುಂದಡಿ ಇಟ್ಟಿದೆ ಎಂದರು.
ವೀಣಾ ತಿರ್ಲಾಪೂರ, ನಾಗರತ್ನ ಮಾರನಬಸರಿ, ಪ್ರೇಮಾ ಗುಳಗೌಡರ, ಪುಷ್ಪಾ ಭಂಡಾರಿ, ಪೂಜಾ ಭೂಮ ಇತರರು ಇದ್ದರು.