

Gadag: ಇನ್ನರ್ ವೀಲ್ ಕ್ಲಬ್ ಗದಗ ಬೆಟಗೇರಿಯು ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆ ಗದಗದಲ್ಲಿ ನಾಗರಿಕ ಮೌಲ್ಯಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಕವಿತಾ ಬೇಲೇರಿಯವರು ಮಾತನಾಡಿ ಮೊಬೈಲ್, ಕಂಪ್ಯೂಟರ್‌ನ0ತಹ ಆಧುನಿಕ ತಂತ್ರಜ್ಞಾನಗಳ ಹಾವಳಿಯಿಂದ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ ಮರೆಯಾಗುತ್ತಿದೆ. ಆಧುನಿಕ ಯುಗದಲ್ಲಿ, ಮಕ್ಕಳು ನಮ್ಮ ಸಂಸ್ಕೃತಿ, ಮೌಲ್ಯಗಳು ಮತ್ತು ಸಂಪ್ರದಾಯದಿದ ಹೊರಬರುತ್ತಿದ್ದಾರೆ. ಇಂದಿನ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದೊoದಿಗೆ ಅವರ ನಾಗರಿಕ ಮೌಲ್ಯಗಳ ಸಂಸ್ಕಾರಗಳನ್ನು ಕಲಿಸಿ ಬೆಳೆಸಬೇಕಾಗಿದೆ. ಹಿರಿಯರ ಮೇಲಿನ ಗೌರವ ಕಡಿಮೆಯಾಗುತ್ತಿದೆ. ಆಧುನಿಕ ಯುಗದಲ್ಲಿ ನಮ್ಮ ಮೌಲ್ಯ, ಸಂಸ್ಕೃತಿ, ಸಂಪ್ರದಾಯಗಳಿಗೆ ಧಕ್ಕೆಯಾಗಬಾರದಂತೆ ಪಾಲಕರು ಮಕ್ಕಳಿಗೆ ತಿಳಿಹೇಳುವ ಅಗತ್ಯವಿದೆ ಎಂದರು. ಈ ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಸಂಸ್ಥೆ ಗದಗ ಬೆಟಗೇರಿಯ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಮಾರನಬಸರಿಯವರು ಶಾಲೆಯಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ “ನಾವು ಮನುಜರು” ,ಎಂಬ ವಿಷಯದ ಕುರಿತು ಭಾಷಣ ಸ್ಪರ್ದೆಯಲ್ಲಿ ವಿಜೇತರಾದ ಅಶ್ವಿನಿ ಜಂಗನವಾರಿ, ಅರ್ಜುನ ಬೂದಿಕೊಪ್ಪನವರ, ಸ್ಪಂದನ ಗಗನದ ಇವರಿಗೆ ಬಹುಮಾನ ವಿತರಿಸಿದರು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ. ಪಿ.ಟಿ. ಬಿಸನಳ್ಳಯವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಿಕ್ಷಕರಾದ ಶ್ರೀ ಎಮ್. ಬಿ. ಹರ್ತಿಯವರು ಸರ್ವರನ್ನು ಸ್ವಾಗತಿಸಿದರು ಹಾಗೂ ಶ್ರೀ ಎಮ್. ಕೆ. ಬೇವಿನಕಟ್ಟಿಯವರು ವಂದಿಸಿದರು. ಕಾರ್ಯದರ್ಶಿಗಳಾದ ಶ್ರೀಮತಿ ವೀಣಾ ತಿರ್ಲಾಪೂರ, ಐಎಸ್‌ಓ ಶ್ರೀಮತಿ ಪುಷ್ಪಾ ಭಂಡಾರಿ, ಮಾಜಿಅಧ್ಯಕ್ಷರಾದ ಶ್ರೀಮತಿ ಆಶಾ ಪಟ್ಟಣಶೆಟ್ಟಿ, ಸಿಎಲ್‌ಸಿಸಿ ಶ್ರೀಮತಿ ಸುಮಾ ಪಾಟೀಲ, ಶ್ರೀಮತಿ ಮೀನಾಕ್ಷಿ ಕೊರವಣ್ಣವರ ಉಪಸ್ಥಿತರಿದ್ದರು.