ಇನ್ನರ್ ವ್ಹೀಲ್ ಸಂಸ್ಥೆ ಗದಗ ಬೆಟಗೇರಿಯಿಂದ ಶಿಕ್ಷಣಕ್ಕಾಗಿ 5000 ರೂಪಾಯಿ ಆರ್ಥಿಕ ನೆರವು

WhatsApp Image 2024-10-14 at 8.58.52 PM
Published on

Gadag: ಶಿಕ್ಷಣವು ವ್ಯಯಕ್ತಿಕ ಅಭಿವೃದ್ಧಿಗಾಗಿ ಕುಟುಂಬದ ಪ್ರಗತಿಗಾಗಿ ದೇಶದ ಉನ್ನತಿಗಾಗಿ ಬಲನೀಡುವ ಏಕೈಕ ಸಾಧನವಾಗಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರವು ಈ ದೇಶದ ಯಾವ ಪ್ರಜೆಯು ಆರ್ಥಿಕ ಮುಗ್ಗಟ್ಟಿನಿಂದಾಗಿ ಶಿಕಣ್ಷದಿಂದ ವಂಚಿತರಾಗ ಬಾರದೆಂದು ಅನೇಕ ಸೌಲಭ್ಯಗಳನ್ನು ನೀಡಿದೆ. ಕೆಲವೊಂದುಸಾರಿ ಈ ಸೌಲಭ್ಯಗಳು ಕೆಲವಿದ್ಯಾರ್ಥಿಗಳಿಗೆ ದೊರಕದಿದ್ದಾಗ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಆರ್ಥಿಕ ಮುಗ್ಗಟ್ಟಿನಿಂದಾಗಿ ಮೊಟಕುಗೊಳಿಸುವುದ ಅನಿವಾರ್ಯವಾಗುತ್ತದೆ. ಇಂತಹ ಸಂಧರ್ಬದಲ್ಲಿ ಶಾಲಾ ಕಾಲೇಜಿನ ಶಿಕ್ಷಕರು, ಉಪನ್ಯಾಸಕರು ಸಮಾಜ ಸೇವಾ ಸಂಸ್ಥೆಗಳನ್ನು ಸಂಪರ್ಕಿಸಿ ವಿದ್ಯಾರ್ಥಿಗಳಿಗೆ ನೆರವು ಕಲ್ಪಿಸಿಕೊಡುವಂತೆ ಸಹಾಯಕೋರಿ ವಿದ್ಯಾರ್ಥಿಗಳ ಶಿಕ್ಷಣ ಮುಂದುವರಿಸಲು ಅವಕಾಶ ಮಾಡಿಕೊಡಟ್ಟಿದ್ದಾರೆ. ಈ ನಿಟ್ಟಿನಲ್ಲಿ ಕೆ.ಎಲ್.ಇ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕಾರದ ಶ್ರೀ ಐ. ಬಿ. ಪಾಟೀಲರವರು ಇನ್ನರ್ ವ್ಹೀಲ್ ಸಂಸ್ಥೆಯನ್ನು ಸಂಪರ್ಕಿಸಿ ಪಿಯುಸಿ ಬೋರ್ಡ್ ಪರೀಕ್ಷೆಯಲ್ಲಿ 97.5% ಅಂಕ ಗಳಿಸಿದ ತಮ್ಮ ವಿದ್ಯಾರ್ಥಿನಿ ಕು. ಬಸಮ್ಮ ಜಗ್ಗಲ್‌ಗೆ ಶಿಕ್ಷಣ ಮುಂದುವರಿಸಲು ಆರ್ಥಿಕ ಸಹಾಯವನ್ನು ನೀಡುವಂತೆ ಕೊರಿದ್ದರು. ಈ ಕೋರಿಕೆಗೆ ಸ್ಪಂದಿಸಿದ ಇನ್ನರ್ ವ್ಹೀಲ್ ಸಂಸ್ಥೆ ಗದಗ ಬೆಟಗೇರಿ ಅಧ್ಯಕ್ಷೆ ಶ್ರೀಮತಿ ನಾಗರತ್ನ ಮಾರನಬಸರಿಯವರು ತಮ್ಮ ಪುತ್ರಿ ಶ್ರೀಮತಿ ಗ್ರೀಷÁ್ಮ ಮಾರನಬಸರಿ (ಕೋಟಿ)ಯವರಿಂದ 5,000/- ಹಣವನ್ನು ವಿದ್ಯಾರ್ಥಿನಿಗೆ ನೀಡಿ ಆಕೆಯ ಭವಿಷ್ಯವನ್ನು ನಿರೂಪಿಸುವಲ್ಲಿ ಸಹಾಯ ಮಾಡಿದರು. ಈ ಸಂಧರ್ಭದಲ್ಲಿ ಇನ್ನರ್ ವ್ಹೀಲ್ ಜಿಲೆ 317ದ ಮಾಜಿ ಚೇರಮನ್ನರಾದ ಶ್ರೀಮತಿ ಪ್ರೇಮಾ ಗುಳಗೌಡರ ವೇದಿಕೆಯಮೇಲೆ ಉಪಸ್ಥಿತರಿದ್ದರು. ಕೆ.ಎಲ್.ಇ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ವಿದ್ಯಾರ್ಥಿನಿ ಕು. ಬಸಮ್ಮ ಜಗ್ಗಲ್ ಪರವಾಗಿ ಉಪನ್ಯಾಸಕಾರದ ಶ್ರೀ ಐ. ಬಿ. ಪಾಟೀಲರವರು ಇನ್ನರ್ ವ್ಹೀಲ್ ಸಂಸ್ಥೆ ಗದಗ ಬೆಟಗೇರಿಯ ಸರ್ವಸದಸ್ಯರಿಗ ಧನ್ಯವಾದಗಳನ್ನು ತಿಳಿಸಿದರು.
ಇನ್ನರ್ ವ್ಹೀಲ್ ಸಂಸ್ಥೆ ಗದಗ ಬೆಟಗೇರಿಯ ಕಾರ್ಯದರ್ಶಿಗಳಾದ ಶ್ರೀಮತಿ ವೀಣಾ ತಿರ್ಲಾಪೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಐಎಸ್‌ಓ ಶ್ರೀಮತಿ ಪುಷ್ಪಾ ಭಂಡಾರಿ, ಸದಸ್ಯರಾದ ಶ್ರೀಮತಿ ಶ್ರೀಯಾ ಪವಾಡಶೆಟ್ಟರ, ಶ್ರೀಮತಿ ಸುಮಾ ಪಾಟೀಲ, ಶ್ರೀಮತಿ ಮಂಗಳಾ ಅಬ್ಬಿಗೇರಿ, ಶ್ರೀಮತಿ ನಾಗರತ್ನ ಪಾಟೀಲ, ಶ್ರೀಮತಿ ಪೂಜಾ ಭೂಮಾ, ಶ್ರೀಮತಿ ನೀಲಾಂಬಿಕಾ ಉಗಲಾಟ, ಶ್ರೀಮತಿ ಸುಲೋಚನ ಐಹೊಳಿ, ಶ್ರೀಮತಿ ಆಶಾ ಹುಕ್ಕೇರಿ, ಶ್ರೀಮತಿ ರೇಷ್ಮಾ ಬಸರಿಗಿಡದ, ಶ್ರೀಮತಿ ಸಂದ್ಯಾ ಕೋಟಿ, ಶ್ರೀಮತಿ ಸುಶಿಲಾ ಕೋಟಿ, ಶ್ರೀಮತಿ ಕಸ್ತೂರಬಾಯಿ ಹಿರೇಗೌಡರ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net