ಗದಗ-ಬೆಟಗೇರಿ ಇನ್ನರ್ ವ್ಹೀಲ್ ಕ್ಲಬ್‌ದಿಂದ ಕೃಷ್ಣ ಜನ್ಮಾಷ್ಟಮಿ ಆಚರಣೆ

IMG-20250822-WA0059
Published on

ಗದಗ: ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಕೃಷ್ಣಾವತಾರದ ಶ್ರೀ ಕೃಷ್ಣನ ಜನ್ಮ ಸ್ಮರಣಾರ್ಥವಾಗಿ ಆಚರಿಸುವ ಹಬ್ಬವೇ ಕೃಷ್ಣ ಜನ್ಮಾಷ್ಟಮಿ. ಇದರ ಅಂಗವಾಗಿ ಇನ್ನರ್ ವ್ಹೀಲ್ ಕ್ಲಬ್ ಗದಗ-ಬೆಟಗೇರಿಯವರು ಜ್ಞಾನ ಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಿದರು. ಶಾಲಾ ವಿದ್ಯಾರ್ಥಿಗಳು ರಾಧಾ ಕೃಷ್ಣರ ವೇಷಧರಿಸಿ ಸಂಭ್ರಮಿಸುತ್ತಿರುವದನ್ನು ಕಂಡು ಇನ್ನರ್ ವ್ಹೀಲ್ ಕ್ಲಬ್ಬಿನ ಅಧ್ಯಕ್ಷರಾದ ಅಶ್ವಿನಿ ಜಗತಾಪ ಅವರು ಮಕ್ಕಳು ಕೇವಲ ಪಠ್ಯ ಚಟುವಟಿಕೆ ಅಲ್ಲದೆ ಪಠ್ಯೇತರ ಚಟುವಟಿಕೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿರುವದು ಸಂತೋಷದ ಸಂಗತಿ, ಇದು ಅವರ ಭವ್ಯ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದರು. ಕಾರ್ಯಾಧ್ಯಕ್ಷರಾದ ಶಿವಲೀಲಾ ಅಕ್ಕಿ ಅವರು ಮಾತನಾಡಿ ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಪ್ರೋತ್ಸಾಹಿಸಲು ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಅವಶ್ಯಕ ಇದರಿಂದ ಮಕ್ಕಳು ನಮ್ಮ ಪಾರಂಪರಿಕ, ಸಂಸ್ಕೃತಿಕ ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಎಂದರು. ಮಕ್ಕಳು ರಾಧಾ ಕೃಷ್ಣರ ಹಾಡುಗಳನ್ನು ಹಾಡಿ ಭಕ್ತಿಯ ವಾತಾವರಣವನ್ನು ಸೃಷ್ಟಿಸಿದರು. ಕೃಷ್ಣನ ಸಂದೇಶಗಳನ್ನು ತಮ್ಮ ಮಾತುಗಳಲ್ಲಿ ವಿವರಿಸಿದ್ದು ಅಷ್ಟೇ ಅಲ್ಲದೆ ಗೋಪಿಕೆಯರು ಹಾಗೂ ರಾಧಾಕೃಷ್ಣರ ನಡುವಿನ ಭಾಂದವ್ಯವನ್ನು ತಮ್ಮ ನೃತ್ಯದ ಮೂಲಕ ಪ್ರಸ್ತುತಪಡಿಸಿದರು. ರಾಧಾ ಕೃಷ್ಣರ ವೇಷಭೂಷಣ ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಿದ ಮಂಜುಳಾ ಅಕ್ಕಿಯವರ ಪರಿಶೀಲನಿಗೆ ಅನುಗುಣವಾಗಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಇನ್ನರ್ ವ್ಹೀಲ್ ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಅನ್ನಪೂರ್ಣ ವರವಿ, ಉಪ ಕಾರ್ಯದರ್ಶಿಯಾದ ಜಯಶ್ರೀ ಉಗಲಾಟ, ಸಂಪಾದಕರಾದ ವೀಣಾ ಕಾವೇರಿ, ಸಿ.ಪಿ.ಸಿ.ಸಿ. ಮೀನಾಕ್ಷಿ ಕೊರವಣ್ಣವರ ಹಾಗೂ ಕೋ.-ಸಿ.ಪಿ.ಸಿ.ಸಿ. ಶಿಲ್ಪಾ ಅಕ್ಕಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net