ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ್ ಟೌನ್ ವತಿಯಿಂದ  ಕಾಲೇಜ್  ಬ್ಯಾಗ್ ಗಳು  ವಿತರಣೆ

Screenshot_20240518_175004_Gallery
Published on

Gadag: ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ್ ಟೌನ್ ವತಿಯಿಂದ ಗದಗ್ ಸೂರ್ಯ ನಗರದ  ವೀರಾಂಜನೇಯ ದೇವಸ್ಥಾನದಲ್ಲಿ ಎಸ್‍ಎಸ್‍ಎಲ್‍ಸಿ   ಮತ್ತು ದ್ವಿತೀಯ ಪಿಯುಸಿ ಯಲ್ಲಿ  ಅತಿ ಹೆಚ್ಚು ಅಂಕ ಪಡೆದು ಪಾಸಾದ ಬಡ ವಿದ್ಯಾರ್ಥಿನಿಯರಿಗೆ ಮತ್ತು ವಿದ್ಯಾರ್ಥಿಗೆ  ಕಾಲೇಜ್ ಬ್ಯಾಗ್ ಗಳನ್ನು  ವಿತರಿಸಲಾಯಿತು. ಇದರ ಪ್ರಾಯೋಜಕತ್ವವನ್ನು ಸೂರ್ಯ ನಗರದ ನಿವಾಸಿಯಾದ ಶ್ರೀಮತಿ ಮಹಾದೇವಿ.ಎಸ್. ಶಾನಭೋಗರ  ಇವರು ವಹಿಸಿಕೊಂಡಿದ್ದರು.ಈ ಮಕ್ಕಳು ತಮ್ಮ ಕಾಲೇಜಿಗೆ ಹಾಗೂ  ತಂದೆ ತಾಯಿಗಳಿಗೆ ಗೌರವ  ತಂದು ಕೊಟ್ಟಿದ್ದಾರೆ.  ಬಡತನದಲ್ಲಿದ್ದರೂ ಸಹ ಓದಲಿಕ್ಕೆ ಹಿಂಜರಿಯದೆ ಹಗಲು,ರಾತ್ರಿ  ಶ್ರಮಪಟ್ಟು ಓದಿ  ಅಂಕಗಳಿಸಿದ್ದಾರೆ. ಇಂಥ ಮಕ್ಕಳನ್ನು ಗುರುತಿಸಿ, ಜೀವನದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಬೇಕೆಂದು ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿ ,  ಮಕ್ಕಳಿಗೆ ಕಾಲೇಜ್   ಬ್ಯಾಗ್ ಗಳನ್ನು ವಿತರಿಸಲಾಯಿತು.  ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಬಿರಾದರ್, ಖಜಾಂಚಿ ಶ್ರೀಮತಿ ರಾಣಿ ಚಂದಾವರಿ, ಐ ಎಸ್ ಓ ಶ್ರೀಮತಿ ಸುವರ್ಣ  ಹೊನ್ನಗುಡಿ, ಸದಸ್ಯರಾದ ಶ್ರೀಮತಿ ದೀಪಾ ಉಗಲಾಟ, ಸೂರ್ಯ ನಗರದ ನಿವಾಸಿಯಾದ ಶ್ರೀಮತಿ ಶಾರದಾ ಕಳಸಗೊಂಡ, ಶ್ರೀಮತಿ ಜ್ಯೋತಿ ಕಳಸಗೊಂಡ, ಶ್ರೀಮತಿ ಭಾರತಿ ಗಾಳರಡ್ಡಿ,ಶ್ರೀಮತಿ ಮುತ್ತ ತುಪ್ಪದ, ಶ್ರೀಮತಿ ನಾಗರತ್ನ ನಾಗಾವಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net