Sep 27: ಗದಗ ಪ್ರಮುಖ ಸುದ್ದಿಗಳು

Vijayavani-logo
Published on

ವಿಭಾಗಮಟ್ಟದ ದಸರಾ ಕ್ರೀಡಾಕೂಟ

ಗದಗ:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸುತ್ತೋಲೆಯನ್ವಯ ಪ್ರಸ್ತುತ ಸಾಲಿನ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಪುಟಬಾಲ್, ಹಾಕಿ, ಟೇಕ್ವಾಂಡೋ ಸ್ಪರ್ಧೆಗಳನ್ನು ಅಕ್ಟೋಬರ್ 4 ರಿಂದ 5 ರ ವರಗೆ ಗದುಗಿನ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಅಕ್ಟೋಬರ್ 4 ರಂದು ಬೆಳಗ್ಗೆ 8 ಗಂಟೆಗೆ ಕೆ.ಎಚ್.ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳನ್ನು ವರದಿ ಮಾಡಿಕೊಳ್ಳಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗದಗ ಸಹಾಯಕ ನಿರ್ದೇಶಕರವರ  ಕಛೇರಿ ಕೆ.ಎಚ್.ಪಾಟೀಲ್ ಕ್ರೀಡಾಂಗಣ ದೂರವಾಣಿ ಸಂಖ್ಯೆ 08372-238345 ಗೆ ಸಂಪರ್ಕಿಸಬಹುದಾಗಿದೆ.

ಹ್ಯಾಂಡ್‍ಬಾಲ್ ಮತ್ತು ಬಾಲ್‍ಬ್ಯಾಡ್ಮಿಂಟನ್ ಸ್ಪರ್ಧೆಗಳ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

ಗದಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸುತ್ತೋಲೆಯನ್ವಯ ಪ್ರಸ್ತುತ ಸಾಲಿನ ಬೆಳಗಾವಿ ವಿಭಾಗದಲ್ಲಿ ಹ್ಯಾಂಡ್‍ಬಾಲ್ ಮತ್ತು ಬಾಲ್ ಬ್ಯಾಡ್ಮಿಂಟನ್ ಕ್ರೀಡೆಗಳಿಗೆ ಸಂಬಂಧಿಸಿದಂತೆ ವಿಭಾಗದ ಮಟ್ಟದ ದಸರಾ ಕ್ರೀಡಾ ಕೂಟವನ್ನು ಅಕ್ಟೋಬರ್ 2 ರಂದು ಹಾವೇರಿಯ ಹೊಸಮನಿ ಸಿದ್ಧಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಸಂಘಟಿಸಲಾಗುತ್ತಿದೆ. ಆಯಾ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾ ಪಟುಗಳು ನಿಗದಿತ ಸ್ಥಳಗಳಲ್ಲಿ ಅಕ್ಟೋಬರ್ 2 ರಂದು ಬೆಳಿಗ್ಗೆ 7 ಗಂಟೆಗೆ ವರದಿ ಮಾಡಿಕೊಳ್ಳಬೇಕು. ಸ್ಪರ್ಧೆಗಳನ್ನು ಅಂದೇ ಬೆಳಿಗೆ 8 ಗಂಟೆಗೆ ಪ್ರಾರಂಭಿಸಲಾಗುವುದು.  ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟದ ಫಲಿತಾಂಶ ಪಟ್ಟಿಯನ್ನು  ನಿಗದಿತ ನಮೂನೆಯಲ್ಲಿ ಸೆಪ್ಟೆಂಬರ್ 30 ರೊಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹೊಸಮನಿ ಸಿದ್ಧಪ್ಪ ಜಿಲ್ಲಾ ಕ್ರೀಡಾಂಗಣ ಹಾವೇರಿ,  advsshvr@gmail.com  ಗೆ ಕಳುಹಿಸಿಕೊಡಬೇಕು.  ಹೆಚ್ಚಿನ ಮಾಹಿತಿಗಾಗಿ ಹೆಚ್ಚಿನ ಮಾಹಿತಿಗಾಗಿ  ಗದಗ ಸಹಾಯಕ ನಿರ್ದೇಶಕರವರ  ಕಛೇರಿ ಕೆ.ಎಚ್.ಪಾಟೀಲ್ ಕ್ರೀಡಾಂಗಣ ದೂರವಾಣಿ ಸಂಖ್ಯೆ 08372-238345 ಗೆ ಸಂಪರ್ಕಿಸಬಹುದಾಗಿದೆ.

ಗದಗ ಬೆಟಗೇರಿ ಅವಳಿ ನಗರದಲ್ಲಿ ವಿವಿಧೆಡೆ ನೀರು ಪೂರೈಕೆ ವಿವರ

ಗದಗ ಗದಗ ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ತಿಳಿಸುವುದೆನೆಂದರೆ ಸೆಪ್ಟೆಂಬರ್ 28 ವಾರ್ಡ್ ನಂಬರ್ 29 ರಲ್ಲಿ ರಾಜೀವ್ ಗಾಂಧಿನಗರ ಪೆÇಲೀಸ್ ಸ್ಟೇಷನ್ ಮೇಲಿನ ಭಾಗ ವಾರ್ಡ್ ನಂಬರ್ 34 35 ರಲ್ಲಿ ವಡ್ರಗೇರಿ ಈ ಡಬ್ಲ್ಯು ಎಸ್ ಲೈನ್ 46 ವಾರ್ಡ್ ನಂಬರ್ 1 ರಲ್ಲಿ ಎಸ್. ಎಮ್. ಕೃಷ್ಣ ನಗರ ಮೇಲಿನ ಭಾಗ ಕೆಳಗಿನ ಭಾಗ ವಾರ್ಡ್ ನಂಬರ್ 05ರಲ್ಲಿ ರಂಗಪ್ಪಜ್ಜನ ಮಠ ಎರಡನೆಯ ಬ್ಯಾಚ್ ಕುಲಕರ್ಣಿ ಗಲ್ಲಿ ಭಜಂತ್ರಿ ಓಣಿ ಅಂಬೇಡ್ಕರ್ ನಗರ ಉಳಿದ ಭಾಗಗಳು ವಾರ್ಡ್ ನಂಬರ್ ಮೂರರಲ್ಲಿ ಜಮಾದಾರ್ ನಗರ ಬಾಳಿಕಾಯಿಯ ಮಸೂತಿ ಹಿಂದಿನ ಭಾಗ ಬಾರ್ಕೆರ್ ಲೈನ್ ಈಶ್ವರ್ಗುಡಿ ಲೈನ್ ದುರ್ಗಣ್ಣವರ್ ಪ್ಲಾಟ್ ಸ್ವಾಮಿಯವರ ಲೈನ್ ವಾರ್ಡ್ ನಂಬರ್ 22ರಲ್ಲಿ ಗಂಗಿಮಡಿ ಒಂದನೇ ಲೈನ್ ಎರಡನೇ ಲೈನ್ ವಾರ್ಡ್ ನಂಬರ್ 22 ರಲ್ಲಿ ಮೆರ್ವಡಿ ಲೈನ್ ವಕೀಲರ ಲೈನ್ ಗೋಡಚಿ ಭಾಗ ಲೈನ್ ಡಾಕ್ಟರ್ ಲೈನ್ 3 ನೇ ಕ್ರಾಸ್ ಉದ್ದಾರ್ ಮಸ್ತರ್ ಲೈನ್ ವಾರ್ಡ್ ನಂಬರ್ 28 27ರಲ್ಲಿ ಸ್ಟೇಡಿಯಂ ಸಜ್ಜನ್ ಕುಲಕರ್ಣಿ ನಂದೀಶ್ವರ ಮತ ಲೈನ್ ಹೊಸಮನಿ ಸರ್ ಲೈನ್ ರೊಟ್ಟಿ ಲೇಔಟ್ ಕೊಪ್ಪದ್ ಮಾಸ್ಟರ್ ಲೈನ ಕಮಡೊಳ್ಳಿ ಮಠದ ಲೈನ್ ಜಿ ಎಸ್ ಪಾಟೀಲ್ ಕಟ್ಟಿ ಅವರ ಲೈನ್, ಕುರುಡಗಿ ದವಾಖಾನೆ ಲೈನ್ ಮಲ್ನಾಡದವರು ಲೈನ್ ವಾರ್ಡ್ ನಂಬರ್ 17 18 ರಲ್ಲಿ 24 ರಲ್ಲಿ ಮಣ್ಣಮ್ಮನವರ್ ಲೈನ್ ನಮಾಜಿಯವರ ಲೈನ್ ಮೀನದ ಮಾರ್ಕೆಟ್ ಲೈನ್ ಶಿವಾನಂದ ಅವರ ಲೈನ್ ನಾಲ್ವಾಡದಲ್ಲಿ ಲೈನ್ ವಾರ್ಡ್ ನಂಬರ್ 20 23ರಲ್ಲಿ ಅಂಗನವಾಡಿ ಲೈನ್ ಈಟಿ ಅವರ್ ಲೈನ್ ನಾಗಲಿಂಗ ನಗರ ಭಾಗ-1,2 ಮಲ್ಲೇಶಪ್ಪ ಅವರ ಲೈನ್ ಲಕ್ಕುಂಡಿ ಅವರ್ ಲೈನ್ ಮಾನ್ವಿ ಅವರ ಲೈನ್, ಗಣಪತಿ ಗುಡಿ ಲೈನ್, ಮಡಿವಾಳ ಲೈನ್ ಸ್ಥಳಗಳಿಗೆ ನೀರು ಪೂರೈಕೆ ಮಾಡಲಾಗುವುದು.

ಶಿಗ್ಲಿ ಗ್ರಾಮದಲ್ಲಿ ಹೊಸ ನ್ಯಾಯ ಬೆಲೆ ಅಂಗಡಿಗೆ ಅರ್ಜಿ ಆಹ್ವಾನ

ಗದಗ: ಲಕ್ಷ್ಮೇಶ್ವರ ತಾಲೂಕು ಶಿಗ್ಲಿ ಗ್ರಾಮದಲ್ಲಿ ಹೊಸ ನ್ಯಾಯ ಬೆಲೆ ಅಂಗಡಿಗೆ  ಅರ್ಜಿಗಳನ್ನು ಆಹ್ವನಿಸಲಾಗಿದೆ. ಅರ್ಜಿಗಳನ್ನು ಅಕ್ಟೋಬರ್ 26 ರೊಳಗಾಗಿ ಲಕ್ಷ್ಮೇಶ್ವರ ತಹಶೀಲ್ದಾರ ಕಚೇರಿ ಇಲ್ಲಿ ನಿಗದಿತ ನಮೂನೆ ಎ ರಲ್ಲಿ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ ಇತರೆ ಮಾಹಿತಿಯನ್ನು ಸಂಬಂಧಪಟ್ಟ ತಹಶೀಲ್ದಾರರ ಕಚೇರಿ ಅಥವಾ ಉಪನಿರ್ದೇಶಕರ ಕಚೇರಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ , ಜಿಲ್ಲಾಡಳಿತ ಭವನ ಗದಗ ಇಲ್ಲಿ ಸಂಪರ್ಕಿಸಬಹುದಾಗಿದೆ.

ಸೂಡಿ ಗ್ರಾಮದಲ್ಲಿ ಹೊಸ ನ್ಯಾಯ ಬೆಲೆ ಅಂಗಡಿಗೆ ಅರ್ಜಿ ಆಹ್ವಾನ

ಗದಗ: ಗಜೇಂದ್ರಗಡ ತಾಲೂಕು ಸೂಡಿ ಗ್ರಾಮದಲ್ಲಿ ಹೊಸ ನ್ಯಾಯ ಬೆಲೆ ಅಂಗಡಿಗೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿಗಳನ್ನು ಅಕ್ಟೋಬರ್ 26 ರೊಳಗಾಗಿ ಗಜೇಂದ್ರಗಡ ತಹಶೀಲ್ದಾರ ಕಚೇರಿ ಇಲ್ಲಿ ನಿಗದಿತ ನಮೂನೆ ಎ ರಲ್ಲಿ ನಿಗದಿಪಡಿಸಿದ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆ ಹಾಗೂ  ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಹಶೀಲ್ದಾರರ ಕಚೇರಿ ಅಥವಾ ಉಪನಿರ್ದೇಶಕರ ಕಚೇರಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ , ಜಿಲ್ಲಾಡಳಿತ ಭವನ ಗದಗ ಇಲ್ಲಿ ಸಂಪರ್ಕಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net