

ರಾಜ್ಯ ಮೆಡಿಕಲ್ ಕೌನ್ಸಿಲ್ ಗೌರವ ಅಧ್ಯ ಡಾ.ಯೋಗಾನಂದ ರೆಡ್ಡಿ ಅಭಿಮತ
ವಿಜಯವಾಣಿ ಸುದ್ದಿಜಾಲ ಗದಗ
ಭಾರತೀಯ ವೈದ್ಯಕಿಯ ಸಂಸ್ಥೆ ರಾಜ್ಯ ಟಕಕ್ಕೆ ಹಾಗೂ ವೈದ್ಯಕಿಯ ಕ್ಷೇತ್ರದ ಉನ್ನತಿಗೆ ಗದಗ ಜಿಲ್ಲೆಯ ಕೊಡುಗೆ ಅನುಪಮವಾಗಿದೆ ಎಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್ನ ಗೌರವ ಅಧ್ಯ ಡಾ. ವೈ. ಸಿ.ಯೋಗಾನಂದ ರೆಡ್ಡಿ ಹೇಳಿದರು.
ಶುಕ್ರವಾರ ನಗರದ ಪೊಲೀಸ್ ಭವನದಲ್ಲಿ ಜರುಗಿದ ಭಾರತೀಯ ವೈದ್ಯಕಿಯ ಸಂದ ಜಿಲ್ಲಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗದಗ ಜಿಲ್ಲೆ ಅಖಿಲ ಭಾರತ ಮಟ್ಟದಲ್ಲಿ ಸಹಕಾರಿ ಆಂದೋಲನವನ್ನು ಹುಟ್ಟು ಹಾಕಿದೆ. ನಗರದಲ್ಲಿ ವೈದ್ಯರ ಸಂ 1976 ರಲ್ಲಿ ಆರಂಭಗೊಂಡು ಹಲವಾರು ರಚನಾತ್ಮ ಕಾರ್ಯಗಳಿಂದಾಗಿ ರಾಜ್ಯದ ಗಮನ ಸೆಳೆದಿದೆ. ಗದಗ ಐಎಂಎ ದಲ್ಲಿ ಚರ್ಚೆಯ ರೂಪುರೇಷೆಗಳು, ಗಂಭೀರ ವಿಷಯಗಳು ಲಪ್ರದಗೊಂಡಿವೆ. ಹೋರಾಟದ ಮಾರ್ಗ, ಬೇಡಿಕೆಗಳಿಗೆ, ವೈದ್ಯಕಿಯ ಕಾನೂನು ತಿದ್ದುಪಡಿ ತರಲು ಚಿಂತನೆಗಳಿಗೆ ವೇದಿಕೆಯಾಗಿದೆ ಎಂದರು.
ರಾಜ್ಯ ಐಎಂಎ ನಿಯೋಜಿತ ಅಧ್ಯ ಡಾ. ವಿ. ವಿ. ಚಿನಿವಾಲರ ಮಾತನಾಡಿ, ರಾಜ್ಯ ಐಎಂಎ ಸಂಟನೆಯ ಬಲವರ್ಧನೆಗೆ ನಗರದ ಸಹಕಾರ ಅಧಿಕವಾಗಿದೆ ಎಂದರು.
ನೂತನ ಐಎಂಎ ಜಿಲ್ಲಾಧ್ಯಕ್ಷ ಡಾ. ಪವನ ಪಾಟೀಲ, ಮಹಿಳಾ ಟಕದ ಅಧ್ಯೆ ಡಾ. ಅನುಪಮಾ ಪಾಟೀಲ, ಕಾರ್ಯದಶಿರ್ ಡಾ. ಶಿಲ್ಪಾ ಪ್ರಕಾಶ ಕುಷ್ಟಗಿ, ಡಾ. ಸೋನಿಯಾ ಕರೂರ, ಡಾ.ರಾಧಿಕಾ ಬಳ್ಳಾರಿ ಇತರರು ಇದ್ದರು.