ರಾಜ್ಯ ಚುನಾವಣಾ ಆಯುಕ್ತವರಿಂದ ಹುಲಕೋಟಿ ಗ್ರಾಮ ಪಂಚಾಯತ್ ಕಟ್ಟಡ ವೀಕ್ಷಣೆ

c658477e-a873-47b0-9c0c-84da511fe79b
Published on
ಗದಗ: ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತರಾದ ಸಂಗ್ರೇಶಿ ಅವರು ಶುಕ್ರವಾರ ಗದಗ ಜಿಲ್ಲೆಯ ಹುಲಕೋಟಿ ಗ್ರಾಮ ಪಂಚಾಯತಗೆ ಭೇಟಿ ನೀಡಿ ನೂತನ ಕಟ್ಟಡವನ್ನು ವೀಕ್ಷಣೆ ನಡೆಸಿದರು.
 ಹುಲಕೋಟೆಯಲ್ಲಿ ನೂತನವಾಗಿ ನಿರ್ಮಿಸಿರುವ ಗ್ರಾಮ ಪಂಚಾಯತ್ ಕಟ್ಟಡವು ದೇಶದಲ್ಲಿಯೇ ಮಾದರಿ ಗ್ರಾಮ ಪಂಚಾಯತ್ ಕಟ್ಟಡವಾಗಿದೆ.
 ಸ್ಥಳೀಯ ಆಡಳಿತ ಕೈಗೊಳ್ಳಲು ಈ ರೀತಿಯ ಮಾದರಿ ಕಟ್ಟಡ ನಿರ್ಮಾಣ ಅತ್ಯಗತ್ಯವಾಗಿದೆ .
ಈ ಮಾದರಿ ಗ್ರಾಮ ಪಂಚಾಯತಿ ಕಟ್ಟಡ ನಿರ್ಮಿಸಲು ಶ್ರಮಿಸಿದ ಪ್ರತಿಯೊಬ್ಬರು ಅಭಿನಂದನೆಗೆ ಅರ್ಹರು ಎಂದು ಪ್ರಶಂಸೆ ವ್ಯಕ್ತ ಪಡಿಸಿದರು.
 ಗ್ರಾಮ ಪಂಚಾಯಲ್ಲಿರುವ ಪ್ರತೇಕ ಸಭಾ ಭವನ,ಅಧ್ಯಕ್ಷ,ಆಡಳಿತ ವರ್ಗದವರ ಕಾರ್ಯಲಯಗಳು ಸುಂದರವಾಗಿದ್ದು ಗ್ರಾಮ ಪಂಚಾಯತಿ ಕಟ್ಟಡದಲ್ಲಿ ಕುಳಿತರೆ ಪ್ರವಾಸಿ ಸ್ಥಳದಲ್ಲಿ ಕುಳಿತಂತಹ ಭಾವನೆ ಬರುತ್ತದೆ ಎಂದು ಸಂತೋಷ ವ್ಯಕ್ತ ಪಡೆಸಿದರು.
 ಗ್ರಾಮ ಆಡಳಿತ ಸುಭದ್ರವಾಗಿ ನಡೆದರೆ ದೇಶ ಅಭಿವೃದ್ಧಿ ಹೊಂದುವುದರಲ್ಲಿ ಯಾವ ಸಂಶಯವಿಲ್ಲ ಹಾಗಾಗಿ ಪ್ರತಿ ಗ್ರಾಮ ಪಂಚಾಯತಿಯೂ ಹುಲಕೋಟಿ ಯಂತಹ ಕಟ್ಟಡ ಹೊಂದಿದರೆ ಗ್ರಾಮ ಆಕರ್ಷಕವಾಗಿರುತ್ತದೆ ಎಂದು ನುಡಿದರು.
 ಈ ಸುಂದರವಾದ ಪಂಚಾಯತಿ ಕಟ್ಟಡವನ್ನುವ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
 ಈ‌ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಗದಗ ತಾಲೂಕ ತಹಶಿಲ್ದಾರರ ಶ್ರೀನಿವಾಸ ಕುಲಕರ್ಣಿ, ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ಗ್ರಾಮ ಪಂಚಾಯತಿ ಅಧಿಕಾರಿಳು ಸಿಬ್ಬಂದಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net