ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಆಸಕ್ತಿ ರೂಢಿಸಿಕೊಳ್ಳಬೇಕು: ಪ್ರೊ. ಆರ್.ಸಿ.ದಿನ್ನಿ

WhatsApp Image 2024-09-06 at 4.21.22 PM
Published on

Gadag: ವಿದ್ಯಾರ್ಥಿಗಳು ಸತತ ಅಧ್ಯಯನ ಮಾಡುವುದರ ಬಗ್ಗೆ ಆಸಕ್ತಿ ರೂಢಿಸಿಕೊಳ್ಳಬೇಕು, ಗುರುಗಳು ಹೇಳಿದ ಮಾತನ್ನು ನಿಷ್ಠೆಯಿಂದ ಕಾರ್ಯಗತಗೊಳಿಸಬೇಕು. ಗುರುಗಳಲ್ಲಿರುವ ಆದರ್ಶ ಮತ್ತು ನಡೆ ನುಡಿಗಳನ್ನು ಅನುಸರಿಸಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದು. ವಿದ್ಯಾರ್ಥಿಗಳಲ್ಲಿರುವ ಅಂಧಕಾರ, ಅಜ್ಞಾನ, ಅಸತ್ಯ, ಅಧರ್ಮ ಹೋಗಲಾಡಿಸಿ ಪರಿಪೂರ್ಣ ವಿದ್ಯಾರ್ಥಿಗಳನ್ನು ರೂಪಿಸುವುದು ಶಿಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ.
ದ್ರೋಣಾಚಾರ್ಯರಿಂದ ಯಶಸ್ಸನ್ನು ಪಡೆದ ಶಿಷ್ಯತ್ವದ ಪರಮಾವಧಿ ಉದಾಹರಣೆ ಏಕಲವ್ಯನಾಗಿದ್ದಾನೆ. ಹಾಗೆ ವಿದ್ಯಾರ್ಥಿಗಳೂ ಸಹ ಗುರುಗಳ ಬಗ್ಗೆ ಗೌರವ, ನಿಷ್ಠೆ, ಶೈಕ್ಷಣಿಕ ಪರಿಶ್ರಮ ಹೊಂದಬೇಕು ಎಂದು ಪ್ರೊ.ಆರ್.ಸಿ.ದಿನ್ನಿ ವಾಣಿಜ್ಯಶಾಸ್ತ್ರ ಉಪನ್ಯಾಸಕರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಹುಲಕೋಟಿಯ ಗ.ಸ.ಜ.ಗಿ.ಪ.ಪೂ ಮಹಾವಿದ್ಯಾಲಯದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮೇಲಿನಂತೆ ನುಡಿದರು. ವಿದ್ಯಾರ್ಥಿಗಳಲ್ಲಿ ಸ್ಪಷ್ಟವಾದ ಗುರಿ ಇರಬೇಕು ಮತ್ತು ಗುರಿ ಮುಟ್ಟು ವಸಂಕಲ್ಪ ಹೊಂದಬೇಕು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಪ್ರೊ.ಕೆ.ಎಂ.ಗರಗ ಅವರು ಮಾತನಾಡಿ ಶಿಕ್ಷಕರ ಜೀವನವೆಂದರೆ ಮೇಣದ ಬತ್ತಿ ಇದ್ದ ಹಾಗೆ, ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ಕೊಟ್ಟು ತನ್ನ ಜೀವನವನ್ನು ಸವೆಸುವುದು ಮತ್ತು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮಾಡುವುದು.
ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವಾಗುವುದು ವರ್ಗದ ನಾಲ್ಕು ಗೋಡೆಗಳ ಮಧ್ಯ ಆದ್ದರಿಂದ ಪ್ರತಿ ವಿದ್ಯಾರ್ಥಿಯು ಲಕ್ಷ ಕೊಟ್ಟು ಏಕಾಗ್ರತೆಯಿಂದ ಪಾಠ ಪ್ರವಚನಗಳನ್ನು ಆಲಿಸಬೇಕು, ಅಂದಾಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವುದರಲ್ಲಿ ದಾಸವಾಣಿಯಾದ ಗುರುವಿನ ಗುಲಾಮನಾಗುವತನಕ ಸಂದೇಹವೇ ಇಲ್ಲವೆಂದರು. ಇದೇ ಸಂದರ್ಭದಲ್ಲಿ ಪುರಂದರ ದೊರೆಯದಣ್ಣ ಮುಕ್ತಿ ಎಂಬುದನ್ನು ಅರಿಕೆ ಮಾಡಿಕೊಟ್ಟರು.
ಕಾರ್ಯಕ್ರಮವು
ಡಾ.ಎಸ್.ರಾಧಾಕೃಷ್ಣನ್ನರವರ
ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಆರಂಭಿಸಲಾಯಿತು.
ಪ್ರಾರ್ಥನೆಯನ್ನು ಕುಮಾರಿ. ಮಹಾದೇವಿ ಮುದುಕನಾಯ್ಕರ ಹಾಗೂ ಸಂಗಡಿಗರು ನಡೆಸಿಕೊಟ್ಟರು. ಸ್ವಾಗತವನ್ನು ಸಹನಾ ನದಾಫ ನೆರವೇರಿಸಿದಳು. ಶಿಕ್ಷಕರ ದಿನಾಚರಣೆ ನಿಮಿತ್ಯವಾಗಿ ಏರ್ಪಡಿಸಿದ ವಿವಿಧ ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು
ವಿತರಿಸಲಾಯಿತು.
ಡಾ. ಎಸ್.ರಾಧಾಕೃಷ್ಣನ್ ಜೀವನ ಸಾಧನೆ ಕುರಿತು ಕುಮಾರಿ.ಮಹಾದೇವಿ ಮುದುಕನಾಯ್ಕರ ಪ್ರಬಂಧ ವಾಚನ ಮಾಡಿದಳು. ಇದೇ ಸಂದರ್ಭದಲ್ಲಿ ಸಿಬ್ಬಂದಿ ವರ್ಗಕ್ಕೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಕಾಲೇಜಿನ ಮಾಜಿ ವಿದ್ಯಾರ್ಥಿಯಾದ ಕೃಷ್ಣಾ ಕಡಿಯವರ ಗುರುವಿನ ಕುರಿತು ಗೀತ ಗಾಯನ ಮಾಡಿದನು. ಕಾರ್ಯಕ್ರಮದಲ್ಲಿ ಕಾಲೇಜಿನ ಶೈ.ಸ.ಸಮಿತಿ ಚೇರಮನ್ನರಾದ ಶ್ರೀ.ಡಿ.ಬಿ ಓದುಗೌಡ್ರ ಹಾಗೂ ಉಪನ್ಯಾಸಕ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವಂದನಾರ್ಪಣೆಯನ್ನು ಕುಮಾರಿ. ಸೀಮಾ ಯಳವತ್ತಿ ಸಲ್ಲಿಸಿದಳು. ಕಾರ್ಯಕ್ರಮವನ್ನು ಕುಮಾರಿ, ಶಶಿಕಲಾ ಗಂಜಲಿ ಮತ್ತು ಮೇಘಾ ಗೋಣಬಾಯಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net