

ವಿಜಯವಾಣಿ ಸುದ್ದಿಜಾಲ ಗದಗ
ಇತ್ತೀಚಿನ ದಿನಗಳಲ್ಲಿ ಹೃದಯಾಘಾತಗಳು ಹಾಗೂ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಇವುಗಳಿಗೆ ಯುವಕರು ಮತ್ತು ಮಕ್ಕಳು ಬಲಿಯಾಗುತ್ತಿರುವುದು ದುಷ್ಟಕರ ವಿಷಯ. ಹೃದಯಾಘಾತಗಳಿಗೆ ಬದಲಾದ ಜೀವನ ಶೈಲಿ ಎಂದು ಡಾ. ಎನ್. ಗುರುಪ್ರಸಾದ ಹೇಳಿದರು.
ತಾಲೂಕಿನ ಹುಲಕೊಟಿ ಗ್ರಾಮದ ರಾಜೇಶ್ವರಿ ವಿದ್ಯಾನಿಕೇತನ ಮಕ್ಕಳಿಗೆ ಏರ್ಪಡಿಸಿದ್ದ ಸಿಪಿಆರ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೃದಯಾಘಾತ ಮತ್ತು ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಹೇಗೆ ರಣೆ ಮಾಡಬೇಕು ಎಂಬುದನ್ನು ತರಬೇತಿ ಮೂಲಕ ತಿಳಿಸಲಾಗುವುದು. ಈ ಹೃದಯಾಘಾತಗಳು, ಅಪಘಾತಗಳು ಸಂಭವಿಸಿದಾಗ ಕೆಲವು ಮುನ್ನೆಚ್ಚರಿಕೆಯ ಕಾಳಜಿ ಹಾಗೂ ಕ್ರಮಗಳನ್ನು ತೆಗೆದುಕೊಂಡರೆ ಅಪಘಾತಕ್ಕೆ ಈಡಾದ ವ್ಯಕ್ತಿಗಳನ್ನು ಪ್ರಾಣಾಪಾಯದಿಂದ ಕಾಪಾಡಬಹುದು. ತುರ್ತು ಸ್ಥಿತಿಯಲ್ಲಿ ಉಸಿರಾಟ ನಿಂತಾಗ ಅಥವಾ ಹೃದಯ ಬಡಿತ ನಿಂತಾಗ ಆ ಜೀವವನ್ನು ಉಳಿಸಲು ಏನು ಮಾಡಬೇಕು ಎಂಬುದೇ ಈ ತರಬೇತಿಯ ಉದ್ದೇಶವಾಗಿದೆ ಎಂದು ಹೇಳಿದರು.
ಅಪಘಾಕ್ಕೆ ಈಡಾದ ವ್ಯಕ್ತಿಯನ್ನು ಕಂಡೊಡನೆ ತಣ ನೆರವಿಗೆ ಧಾವಿಸಬೇಕು. ವ್ಯಕ್ತಿಯ ಉಸಿರಾಟವನ್ನು ಪರೀಸಬೇಕು. ಆ ವ್ಯಕ್ತಿಗೆ ನೀರು ಕುಡಿಸಬಾರದು. ನೆರವಿಗಾಗಿ ಹತ್ತಿರದಲ್ಲಿ ಇದ್ದವರನ್ನು ಕರೆಯಬೇಕು. ಆ ವ್ಯಕ್ತಿಯನ್ನು ಸರಿಯಾಗಿ ಉಸಿರಾಡಲು ಸಹಾಯವಾಗುವ ಸ್ಥಿತಿಯಲ್ಲಿ ಮಲಗಿಸಬೇಕು, ತಣ 108 ಆಂಬ್ಯುಲನ್ಸ್ಗೆ ಕರೆ ಮಾಡಿ ಸಂರ್ಪೂಣ ಮಾಹಿತಿ ನೀಡಬೇಕು. ಹತ್ತಿರದ ಆಸ್ಪತ್ರೆಗೆ ದಾಖಲಿಸಬೇಕು ಎಂದರು.
ಎಚ್. ಸಿ. ಓಲೇಕಾರ, ಡಿ. ಬಿ. ಓದುಗೌಡರ, ಡಾ. ಸತೀಶ ಹೊಂಬಾಳೆ, ವೈ. ಆರ್. ಶೆಟ್ಟಿ, ವಿ. ಎ. ರಾಯಭಟ್ಟನವರ ಇತರರು ಇದ್ದರು.