

ಗದಗ: ಜಾನಪದ ಭಾರತ ಸಂಸ್ಕೃತಿಯ ಜೀವಾಳ ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹುಲಕೋಟಿಯ ಶ್ರೀ ಕೆ ಎಚ್ ಪಾಟೀಲ ಸರಕಾರಿ ಪ್ರಥಮ ದರ್ಜೆಕಾಲೇಜಿನ ಪ್ರಾಂಶುಪಾಲರಾದ ಡಾ. ಸುಧಾ ಕೌಜಗೇರಿ ಹೇಳಿದರು.
ಶ್ರೀ ಕೆ ಎಚ್ ಪಾಟೀಲ ಸರಕಾರಿ ಪ್ರಥಮ ದರ್ಜೆಕಾಲೇಜು ಹುಲಕೋಟಿಯಲ್ಲಿ ಜರುಗಿದ ಜಾನಪದ ಉತ್ಸವ -2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನಪದ ಸಾಹಿತ್ಯ, ಪರಿಸರ, ಭಾಷೆ, ಸಂಸ್ಕೃತಿ, ಕಲೆ, ಪಾರಂಪರಿಕ ಕರಕುಶಲ ವಸ್ತುಗಳ ತಯಾರಿಕೆ, ದೇಸಿ ಆಹಾರ, ದೇಸಿ ಉಡುಗೆ-ತೊಡುಗೆ, ದೇಸಿ ನೃತ್ಯ, ಸಂಗೀತ, ಆಟ ಈ ಎಲ್ಲವನ್ನೂ ಒಳಗೊಂಡಿರುವುದೇ ಜಾನಪದ ಎಂದು ಹೇಳಿದರು.
ಐಕ್ಯೂಎಸಿ ಸಂಚಾಲಕರಾದ ಡಾ. ಜಿತೇಂದ್ರ ಜಹಾಗೀರದಾರ ಅವರು ಮಾತನಾಡುತ್ತಾ ಪಾಶ್ಚಾತ್ಯೀಕರಣದ ಪ್ರಭಾವದಿಂದ ಇಂದು ಜನಪದ ಸಂಸ್ಕೃತಿಯು ನಶಿಸುತ್ತಿದೆ ಕಾರಣ ವಿದ್ಯಾರ್ಥಿಗಳು ಹಾಗೂ ಯುವಕರು ನಮ್ಮ ಈ ಸಂಸ್ಕೃತಿಯನ್ನು ಉಳಿಸಿಕೊಳ್ಳುವದು ಅಗತ್ಯವಾಗಿದೆ ಎಂದು ಹೇಳಿದರು.
ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಉಲ್ಲಾಸ ಶೆಟ್ಟಿಯವರು ಮಾತನಾಡುತ್ತ ಜನಪದ ಸಾಹಿತ್ಯ ಮತ್ತು ವಿಜ್ಞಾನಕ್ಕೆ ಇರುವ ಸಂಬAಧವನ್ನು ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಬೋಧಕ ಸಿಬ್ಬಂಧಿ ವರ್ಗದವರಾದ ಬಸವರಾಜ ಬಿ, ಡಾ.ಸಂಗೀತಾ ಕಲಾಲ, ಶ್ವೇತಾ ಪಾಲನಕರ, ಡಾ.ಬಸವರಾಜ ಅಂಬಿಗೇರ, ಡಾ.ಮಂಜುನಾಥ ತ್ಯಾಲಗಡಿ, ಎಮ್ ಎ ನವಲಗುಂದ, ಡಾ. ಉಲ್ಲಾಸ ಶೆಟ್ಟಿ, ಡಾ. ಲಕ್ಷ್ಮಣ ಮುಳಗುಂದ, ಡಾ.ಕಿರಣಕುಮಾರ ರಾಯರ, ಜಯಪ್ರಕಾಶದೊಡ್ಡೂರ ಬೋಧಕೇತರ ಸಿಬ್ಬಂದಿ ವರ್ಗ, ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇತಿಹಾಸ ಪ್ರಾಧ್ಯಾಪಕರು ಮತ್ತು ಎನ್‌ಎಸ್‌ಎಸ್ ಸಂಚಾಲಕರಾದ ಡಾ. ಅಪ್ಪಣ್ಣ ಹಂಜೆ ಇವರು ಸ್ವಾಗತಿಸಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕರಾದÀ ರಮೇಶ ಹುಲಕುಂದ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ವಿಭಾಗದ ಸಹಸಂಚಾಲಕರಾದ ಭೀಮೇಶ ನಿರೂಪಿಸಿದರು. ಮಹಾಂತೇಶ ಅವರು ವಂದಿಸಿದರು.