

Gadag: ರಾಮಕರುಣಾನಂದ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಪಠ್ಯ ಆಧಾರಿತ ವಸ್ತು ಪ್ರದರ್ಶನವನ್ನು ದಿನಾಂಕ 3- 11 -2025 ಸೋಮವಾರ ನಡೆಸಲಾಯಿತು. ಸತತವಾಗಿ ಮೂರನೇ ಬಾರಿ ಈ ಒಂದು ಕಾರ್ಯಕ್ರಮವನ್ನು ನಡೆಸಲಾಯಿತು. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಆರ್ ಎಂ ಮುಲಿಮನಿ ಯವರು ಹಾಗೂ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿ ಡಿ ರಂಗಪ್ಪನವರು ಮತ್ತು ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಡಿ. ಬಿ. ತಿರಲಾಪುರ ರವರು ಶ್ರೀ ಈ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ವಿಶೇಷತೆ:- ತಾರಾಲಯ, ಕನ್ನಡ, ಗಣಿತ,ವಿಜ್ಞಾನ ಹಿಂದಿ, ಸಮಾಜ ವಿಜ್ಞಾನ, ಆಂಗ್ಲ, ಭಾಷೆಗಳ ಮಾದರಿಗಳು, ಕಲೆ ಮತ್ತು ಕರಕುಶಲ ಮಾದರಿಗಳು, ಕ್ರೀಡೆಗಳ ಮಾದರಿ, ಬಣ್ಣ ಬಣ್ಣದ ರಂಗೋಲಿ ಇವುಗಳನ್ನು ನಮ್ಮ ಶಾಲೆ ಮಕ್ಕಳು ಶಿಕ್ಷಕರ ಮಾರ್ಗದರ್ಶನದೊಂದಿಗೆ ಪ್ರದರ್ಶಿಸಿದ್ದಾರೆ. ಎಲ್. ಕೆ. ಜಿ ಯು. ಕೆ ಜಿ ಮಕ್ಕಳ ಮಾದರಿ ಪ್ರದರ್ಶನ ಆಕರ್ಷಕವಾಗಿತ್ತು. ಶಾಲೆಯ ಏಲ್ಲಾ ಮಕ್ಕಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಬಹಳಷ್ಟು ಪೋಷಕರು, ಸಾರ್ವಜನಿಕರು ವಸ್ತು ಪ್ರದರ್ಶನ ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀ ರಾಘವೇಂದ್ರ ಕೆ ಆರ್ಒ ರವರು ಕಾರ್ಯಕ್ರಮ ವನ್ನು ಆಯೋಜಿಸಿದ್ದರು. ಜಿಲ್ಲಾ ಸತ್ಯಸಾಯಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಭೋಜರಾಜ ಕಬಾಡಿಯವರು ವಸ್ತು ಪ್ರದರ್ಶನ ವೀಕ್ಷಿಸಿ ಮಕ್ಕಳಿಗೆ ಸಿಹಿ ಹಂಚಿದರು. ಒಟ್ಟಾರೆಯಾಗಿ ವಸ್ತು ಪ್ರದರ್ಶನ ಬಹಳ ಅದ್ದೂರಿಯಾಗಿ ಯಶಸ್ವಿಗೊಂಡಿತು.