ಹುಲಕೋಟಿ; ಭಾರತೀಯ ಮಕ್ಕಳ ವೈದ್ಯಕೀಯ ಅಕಾಡೆಮಿ ಗದಗ ಇವರ ವತಿಯಿಂದ ಆರ್ ಎಮ್ ಎಸ್ ಎಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಹುಲಕೋಟಿಯಲ್ಲಿ ಆಯ್ ಎಮ್ ಎ,ಜಿ ಒ ಜಿ ಎಸ್ ಗದಗ ಸಹಯೋಗದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಅತಿಥಿಗಳು ವೇದಿಕೆಯನ್ನ ಅಲಂಕರಿಸಿ ನಂತರ ಸಸಿಗೆ ನೀರೆರೆದು ಜ್ಯೋತಿಯನ್ನ ಬೆಳಗುವುದರ ಮೂಲಕ ಗಣ್ಯವ್ಯಕ್ತಿಗಳು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಹೆಣ್ಣನ್ನು ಪ್ರಕೃತಿ ಸಮಾನವಾಗಿ ಕಾಣುತ್ತಾ ಗೌರವಿಸುವ ಸನಾತನ ಸಂಸ್ಕೃತಿಯನ್ನು ಹೊಂದಿದ ದೇಶ ಭಾರತ. ಅಲ್ಲಲ್ಲಿ ಅನಕ್ಷರಸ್ಥತೆಯಿಂದ ಕಂಡುಬರುವ ಲಿಂಗ ತಾರತಮ್ಯವನ್ನು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವ ಹಾಗೆ,
ಡಾ|| ಶಿವನಗೌಡ ಅಧ್ಯಕ್ಷರು ಆಯ್ ಎ ಪಿ ಗದಗ ಇವರು ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸುವ ಮೂಲಕ ಹೆಣ್ಣು ಮಕ್ಕಳಿಗೆ ಶಿಕ್ಷಣವು ಅದೆಷ್ಟು ಮಹತ್ವವನ್ನು ಹೊಂದಿದೆ ಎಂಬುದರ ಕುರಿತು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಡಾ|| ಎಸ್ ಆರ್ ನಾಗನೂರ ಚೇರ್ಮನ್ ಆರ್ ಎಮ್ ಎಸ್ ಎಸ್ ಸೊಸೈಟಿ,ಅಥಿತಿ ಉಪನ್ಯಾಸರಾದ ಡಾ||ಶ್ವೇತಾ ಸಂಕನೂರ ಸಲಹೆಗಾರರು ಅನಸ್ತೆಷಿಯಾಲಾಜಿಸ್ಟ್ ಗದಗ ಇವರು ಪ್ರಜಾಪ್ರಭುತ್ವ, ಲೈಂಗಿಕ ಕಿರುಕುಳ,ಲಿಂಗ ತಾರತಮ್ಯ, ಹಾಗೂ ಯುಎಸ್ಎ ವಿದ್ಯಾಭ್ಯಾಸದ ಕುರಿತು ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಸವಿವರವಾಗಿ ಮಾತನಾಡಿದರು. ಆರ್ ಎಮ್ ಎಸ್ ಎಸ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಬಸಯ್ಯ ಹಿರೇಮಠ ಇವರು ಈಗಿನ ಕಾಲದಲ್ಲಿ ವಿದ್ಯಾವಂತರಾದ ನಾವುಗಳು ಲಿಂಗತ್ವದಲ್ಲಿ ತಾರತಮ್ಯವನ್ನು ಮಾಡದೆ ಹೆಣ್ಣು ಮಕ್ಕಳಿಗೂ ಸಮಾನ ಸ್ಥಾನಮಾನ ನೀಡಿ ಅವರ ಉತ್ತಮ ಬೆಳವಣಿಗೆಗೆ ಯಾವುದೇ ಕುಂಠಿತವಾಗದೆ, ಅಡೆತಡೆಯಾಗಿಸದೆ ಸಮಾನ ಹಕ್ಕುಗಳನ್ನು ನೀಡಬೇಕು ಎಂದು ಹೆಣ್ಣು ಮಕ್ಕಳ ಮಹತ್ವದ ಕುರಿತು ಮನವರಿಕೆಯನ್ನು ಮೂಡಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಬಿಂದುಗಳಾಗಿದ್ದ ಬಿ ಎಸ್ ಸಿ ನರ್ಸಿಂಗ್ ವಿದ್ಯಾರ್ಥಿಗಳಲ್ಲಿ ಮೂರು ಮತ್ತು ಐದನೇ ಸೆಮಿಸ್ಟರ್ ವಿದ್ಯಾರ್ಥಿಗಳಿಂದ ವಿಶೇಷ ದಿನದ ಕುರಿತು ಭಾಷಣ, ಪಾತ್ರಾಭಿನಯ, ಪೋಸ್ಟರ್ ಪ್ರೆಸೆಂಟೆಷನ್ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದರು.
ಅದೇ ರೀತಿ ಡಾ ವೆಮನ್ ಸಾವಕಾರ ಗೌರವ ಕಾರ್ಯದರ್ಶಿ ಆರ್ ಎಮ್ ಎಸ್ ಎಸ್ ಸೊಸೈಟಿ,ಶ್ರೀಮತಿ ಪ್ರಿಯಾ ಪಾಟೀಲ್ ಪ್ರಾಂಶುಪಾಲರು ಸ್ವಾಮಿ ವಿವೇಕಾನಂದ ಪಿ ಯು ಕಾಲೇಜು,ಡಾ ಶಿಲ್ಪಾ ಡಿ ಗೌರವ ಕಾರ್ಯದರ್ಶಿ ಆಯ್ ಎಮ್ ಎ ಲೇಡಿಸ್, ಡಾ ರಶ್ಮಿ ಪಾಟೀಲ್ ಕಾರ್ಯದರ್ಶಿ ಜಿ ಒ ಜಿ ಎಸ್ ಗದಗ, ಡಾ ಪ್ರವೀಣ್ ಎಸ್ ಅಧ್ಯಕ್ಷರು ಜಿ ಒ ಜಿ ಎಸ್ ಗದಗ, ಡಾ ಶಿವನಗೌಡ ಅಧ್ಯಕ್ಷರು ಆಯ್ ಎ ಎಫ್ ಗದಗ ಡಾ ಕೃಷ್ಣರೆಡ್ಡಿ ಹೂಲಿ ಕಾರ್ಯದರ್ಶಿ ಆಯ್ ಎ ಪಿ ಗದಗ, ಹಾಗೂ ಆರ್ ಎಮ್ ಎಸ್ ಕಾಲೇಜಿನ ಸಹ ಉಪನ್ಯಾಸಕ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಈ ವಿಶೇಷ ಕ್ಷಣದಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾದರು