

Gadag: ಸ್ಥಳೀಯ ಬಿಂಕದಕಟ್ಟಿ ಶ್ರೀರಾಮ ಕರುಣಾನಂದ ಶಿಕ್ಷಣ ಸಂಸ್ಥೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹುಲಕೋಟಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ದಿನಾಂಕ 1/8/2024 ರ ಗುರುವಾರದಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವಿ .ಡಿ. ರಂಗಪ್ಪನವರ ಅವರು ವಹಿಸಿದ್ದರು . ಮತ್ತು ಮುಖ್ಯ ಅತಿಥಿ ಸ್ಥಾನವನ್ನು ರವೀಂದ್ರನಾಥ ಮೂಲಿಮನಿ, ವಹಿಸಿದ್ದರು.
ಮತ್ತು ಅತಿಥಿ ಸ್ಥಾನವನ್ನು ಶ್ರೀ ಟಿ .ಎಸ್. ಪವಾರ ಟಿ .ಪಿ .ಓ ಗದಗ, ಪ್ರಾಥಮಿಕ ಆರೋಗ್ಯ ಘಟಕದ ವೈದ್ಯಾಧಿಕಾರಿಗಳು ಬಿಂಕದಕಟ್ಟಿ ,ಗ್ರಾಮೀಣ ವಲಯದ ಪೊಲೀಸ ಇಲಾಖೆ ,ಮತ್ತು ಹುಲಕೋಟಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀ ಬಿ.ಸಿ. ಕಪ್ಪಲಿ ಅವರು ವಹಿಸಿದ್ದರು . ಇವರೆಲ್ಲರೂ ವೇದಿಕೆ ಮೇಲೆ ಉಪಸ್ಥಿತರಿದ್ದರು. ಇತರೆ ಸಮೂಹ ಸಂಪನ್ಮೂಲ ವ್ಯಕ್ತಿಗಳು ಶಾಲೆಯ ಶಿಕ್ಷಕರು,ಮಕ್ಕಳು, ಪಾಲಕರು ಹಾಜರಿದ್ದರು. ಶಾಲೆಯ ಶಿಕ್ಷಕರೆಲ್ಲರು ಒಂದುಗೂಡಿ ಪ್ರಾರ್ಥನಾ ಗೀತೆಯನ್ನು ಸುಮಧುರವಾಗಿ ಹಾಡುವುದರ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯಮಾನ್ಯರನ್ನು ಶಾಲೆಯ ಶಿಕ್ಷಕಿ ಗೀತಾ ಕರಿಬಿಸ್ಟಿ ಅವರು ಮಕ್ಕಳಿಂದ ಪುಷ್ಪವನ್ನು ಕೊಡಿಸುವುದರ ಮೂಲಕ ಗೌರವಪೂರ್ವಕ ರೀತಿಯಲ್ಲಿ ಸ್ವಾಗತಿಸಿದರು .ಕಾರ್ಯಕ್ರಮದ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ರಾಘವೇಂದ್ರ .ಕೆ.ಆರ್ ಅವರು ಕ್ರೀಡೆಯು ಯೋಗದ ಒಂದು ಭಾಗ ಮತ್ತು ಮಕ್ಕಳಿಗೆ ಇದು ಶಕ್ತಿಯನ್ನು ಒದಗಿಸುವ ಒಂದು ಕ್ರಿಯೆ ಇದರಿಂದ ನಾವು ಜೀವನವನ್ನು ಬಹಳ ದಿನಗಳವರೆಗೆ ಬಾಳಲು ಸಹಾಯಕಾರಿ ಮತ್ತು ಕ್ರೀಡೆಯಲ್ಲಿ ಸೋಲು ಗೆಲವು ಸಹಜ ಆದರೆ ಭಾಗವಹಿಸುವಿಕೆ ಮುಖ್ಯ ಪಾತ್ರ ವಹಿಸುತ್ತದೆ. ಎಂದು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಕಾರ್ಯಕ್ರಮದ ಮಹತ್ವದ ಘಟ್ಟ ಕ್ರೀಡಾಕೂಟದ ಧ್ವಜಾರೋಹಣ ಇದನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಆರ್. ಎಂ .ಮೂಲಿಮನಿ ಅವರು ನೆರವೇರಿಸಿದರು. ಮತ್ತು ಅದೇ ಸಮಯಕ್ಕೆ ಬೆಳಕಿನ ಸಂಕೇತವಾಗಿ ಕ್ರೀಡಾ ಜ್ಯೋತಿಯನ್ನು ನಮ್ಮ ಶಾಲೆಯ ಅಧ್ಯಕ್ಷರಾದ ವಿ.ಡಿ. ರಂಗಪ್ಪನವರ್ ವಿದ್ಯಾರ್ಥಿಗಳ ಮುಖಾಂತರ ಬೆಳಗಿಸಿ ಅವರಿಂದ ಜ್ಯೋತಿಯನ್ನು ಪಡೆದುಕೊಂಡು ಕಾರ್ಯಕ್ರಮವನ್ನು ಮುಂದುವರಿಸಿದರು. ಶಿಕ್ಷಕರಾದ ಶ್ರೀ ಬಸವರಾಜ .ಹೈಗರ್ ಅವರು ಎಲ್ಲ ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞೆಯನ್ನು ಒಂದು ಉತ್ತಮ ರೀತಿಯಲ್ಲಿ ಹೇಳಿಸಿದರು ನಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಸಹ ಅಧ್ಯಕ್ಷರಾದ ಶ್ರೀ ವಿ.ಡಿ. ರಂಗಪ್ಪನವರ ಅವರು ಮತ್ತು ಸಂಸ್ಥೆಯ ಸದಸ್ಯರಾದ ಶ್ರೀ ಡಿ.ಬಿ. ತಿರ್ಲಾಪುರವರು ಮತ್ತು ಇತರೆ ಅತಿಥಿಗಳು ವಾಲಿಬಾಲ್ ಆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶ್ರೀ ಆರ್. ಎಂ. ಮೂಲಿಮನಿ ಕಾರ್ಯಕ್ರಮದ ಕುರಿತಾಗಿ ಮಕ್ಕಳಿಗೆ ಕ್ರೀಡೆಯ ಅವಶ್ಯಕತೆ ಮತ್ತು ಅದರ ಮಹತ್ವದ ಬಗ್ಗೆ ಭಾಷಣವನ್ನು ಮಾಡಿದರು. ಮತ್ತು ನಿವೃತ್ತ ದೈಹಿಕ ಶಿಕ್ಷಕರಾದ ವಾಯ್.ಕೆ. ಚೌಡಪ್ಪನವರ ಅವರು ಸಹ ಕಾರ್ಯಕ್ರಮದ ಕುರಿತಾಗಿ ಮಾತನಾಡಿದರು ಕ್ರೀಡೆಯು ಮಕ್ಕಳಿಗೆ ದೈಹಿಕ ಮತ್ತು ಭೌತಿಕ ಸಾಮರ್ಥ್ಯವನ್ನು ಹೆಚ್ಚಿಸುವುದಲ್ಲದೆ ಮಕ್ಕಳು ಯಾವಾಗಲೂ ಉತ್ಸಾಹದಿಂದ ಮತ್ತು ಆರೋಗ್ಯದಿಂದ ಇರಲು ಸಹಾಯ ಮಾಡುತ್ತದೆ ಎಂದು ಉತ್ತಮವಾಗಿ ಮಾತನಾಡಿದರು. ಕಾರ್ಯಕ್ರಮದ ಕೊನೆಯ ಘಟ್ಟ ವಂದನಾರ್ಪಣೆ ಶ್ರೀಮತಿ ಸಮೀನಾ .ಬಿನ್ನಾಳ್ ಅವರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಶ್ರೀಮತಿ ಶೈಲಾ ಬೆರಗೇರಿ ಅವರು ವಿಶಿಷ್ಟ ರೀತಿಯಲ್ಲಿ ನೆರವೇರಿಸಿದರು. ಕಾರ್ಯಕ್ರಮದ ಸವಿ ನೆನಪಿನ ಕಾಣಿಕೆಯನ್ನು ಧಾನಿಗಳಾದ ಶ್ರೀ ಶ್ರೀ ಪಿ.ಪಿ ನದಾಫ್ ,ಶ್ರೀ ರಮೇಶ ಕೆಂಚನಗೌಡರ, ಶ್ರೀ ರಮೇಶ ತಿರ್ಲಾಪುರ,ದೇವರೆಡ್ಡಿ ತಿರ್ಲಾಪುರ ಅವರು ನೀಡಿದ್ದಾರೆ. ಕಾರ್ಯಕ್ರಮವು ಹೀಗೆ ಎಲ್ಲರ ಉತ್ಸುಕತೆಯಿಂದ ಒಟ್ಟಾರೆಯಾಗಿ ಯಶಸ್ವಿಯಾಗಿ ನೆರವೇರಿತು.