ಹುಲಕೋಟಿಯಲ್ಲಿ ಶುದ್ದಗಂಗಾ ಪ್ರೇರಕರ ಪ್ರಗತಿ ಪರಿಶೀಲನಾ ಸಭೆ

27GDG04
Published on

ಗದಗ: ತಾಲೂಕಿನ ಹುಲಕೋಟಿಯ ಕೆವಿಕೆಯಲ್ಲಿ ಶನಿವಾರ ಕೊಪ್ಪಳ ಮತ್ತು ಗದಗ ಜಿಲ್ಲೆಯ ಶುದ್ದಗಂಗಾ ಪ್ರೇರಕರ ಪ್ರಗತಿ ಪರಿಶೀಲನಾ ಸಭೆ ಜರುಗಿತು.
ಸಭೆಯನ್ನು ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮತ್ತು ಕಲ್ಯಾಣ ಕರ್ನಾಟಕ ಕೊಪ್ಪಳ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಅವರು ದೀಪ ಬೆಳಗಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.
ಆನಂದ ಸುವರ್ಣ ಮಾತನಾಡಿ, ಶುದ್ಧ ಗಂಗಾ ಪ್ರೇರಕರು ಕೆಲಸ ನಿರ್ವಹಣೆಯನ್ನು ಶುದ್ಧವಾಗಿ ನೆರವೇರಿಸಬೇಕು ಎಂದು ತಿಳಿಸಿದರು. ಟಕದ ಸ್ವಚ್ಚತೆ ಮತ್ತು ಸಮುದಾಯ ಅಭಿವೃದ್ಧಿ ವಿಭಾಗದ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಗ್ರಾಮೀಣ ಪ್ರದೇಶದಲ್ಲಿ ಶುದ್ಧ ನೀರನ್ನು ಪ್ರತಿಯೊಬ್ಬರ ಮನೆಗೆ ವಿತರಣೆ ಮಾಡುವದು ಪುಣ್ಯದ ಕೆಲಸ. ನೀವು ಮಾಡಿದ ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರೇರಕರನ್ನು ಸನ್ಮಾನಿಸಲಾಯಿತು. ಶಿವಾನಂದ ಆಚಾರ್ಯ, ಚಂದ್ರಶೇಖರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net