ಹುಲಕೋಟಿಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ: ವಾರ್ಷಿಕ ಸ್ನೇಹ ಸಮ್ಮೇಳನ.

IMG-20250305-WA0011
Published on

Gadag: ವಾರ್ಷಿಕ ಸ್ನೇಹ ಸಮ್ಮೇಳನ. ಹಾಗೂ ವಿಜ್ಞಾನ ವಸ್ತು ಪ್ರದರ್ಶನ. ಹುಲಕೋಟಿಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆ. ಸಂಜೆ 4:00ಯಿಂದ ರಾತ್ರಿ 10 ಗಂಟೆಯವರೆಗೆ ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ಪಂಚಾಯತಿಯ ಮಾಜಿ ಸದಸ್ಯರಾದ ಶ್ರೀ ವಿಜಯಲಕ್ಷ್ಮೀ ತಮ್ಮನಗೌಡ್ರ ಇವರು ನೇರವೇರಿಸಿದರು.

ಆರಂಭದಲ್ಲಿ ಸ್ವಾಗತ ಭಾಷಣವನ್ನು ಶ್ರೀ ಎ ವಿ ತಳವಾರ್ ಗುರುಗಳು ಮಾಡಿದರು. ಶಾಲೆಯ ಪ್ರಧಾನ ಗುರುಗಳಾದ ಶ್ರೀ ಎಸ್. ಆಯ್. ಬಡಿಗೇರ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಎಸ್ ಆರ್ ಬಂಡಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಆರ್‌ ಕೆ ಗುತ್ತಿ ಗುರುಮಾತೆಯರು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶ್ರೀ ವಿಜಯಲಕ್ಷ್ಮೀ ತಮ್ಮನಗೌಡ್ರ ಇವರು ಮಕ್ಕಳ ಪಾಲಕರು ಮತ್ತು ಶಿಕ್ಷಕರು ಸಮಾಜಮುಖಿಯಾಗಿ ಕೆಲಸ ಮಾಡಿ ಪ್ರತಿಯೊಬ್ಬ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಮುಂದಾಗಬೇಕು ಎಂದು ಹೇಳಿದರು. ನಿವೃತ್ತ ಉಪ ನಿರ್ದೇಶಕರಾದ ಶ್ರೀ ಎಂ ಎ ರೆಡ್ಡರ್, ಶ್ರೀ ವಿ.ವಿ ನಡುವಿನಮನಿ. ಬಿ ಇ ಓ ಗದಗ್, ಶ್ರೀ ಶಂಕರ್ ಹಡಗಲಿ, ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಗದಗ ಇವರು ಭಾಗವಹಿಸಿದ್ದರು.
ಶಾಲೆಯ ಮಕ್ಕಳ ತಂದೆ ತಾಯಿಯರು ಪಾಲಕರು ಊರಿನ ಜನತೆ ಮಕ್ಕಳ ಹಾಡು ಕುಣಿತವನ್ನು ನೋಡಿ ಆನಂದಿಸಿದರು.
ಕೊನೆಗೆ ವಂದನಾರ್ಪಣೆಯನ್ನು ಶ್ರೀ ಆರ್ ವೈ ಹನುಮರ ಗುರುಗಳು ನಡೆಸಿಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net