ಸಚಿವ ಡಾ. ಎಚ್.ಕೆ. ಪಾಟೀಲ ಅವರಿಂದ ಸರ್ಕಾರಿ ವಸತಿ ಗೃಹಗಳ ಲೋಕಾರ್ಪಣೆ

DSC_9558
Published on

ಗದಗ: ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಜಿಲ್ಲಾಡಳಿತ ಭವನದ ಹಿಂಬಾಗದಲ್ಲಿ ನಿರ್ಮಿಸಲಾದ ವಸತಿಗೃಹಗಳನ್ನು ಲೋಕಾರ್ಪಣೆಗೊಳಿಸಿದರು.

೨೦೨೧-೨೨ ನೇ ಸಾಲಿನ ಜಿಲ್ಲಾ ಪಂಚಾಯತ ಕಚೇರಿ ಕಟ್ಟಡಗಳ‌ ನಿರ್ಮಾಣ ಮತ್ತು ನಿರ್ವಹಣೆ ಯೋಜನೆಯಡಿ ಗ್ರೂಪ್ ಸಿ, ಡಿ ನೌಕರರಿಗೆ ೧೮೦೦ ಚದರ ಮೀಟರ್ ವಿಸ್ತೀರ್ಣದಲ್ಲಿ ಒಟ್ಟು ೮೬ ಲಕ್ಷ ವೆಚ್ಚದಲ್ಲಿ ಒಟ್ಟು ಸುಸಜ್ಜಿತ ೪ ಗೃಹಗಳು ನಿರ್ಮಿತಿ ಕೇಂದ್ರದಿಂದ ಮಾಡಲಾಗಿತ್ತು.

ಈ ವಸತಿ ಗೃಹ ಲೋಕಾರ್ಪಣೆ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೋರಟ್ಟಿ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಬಿ ಬಿ ಅಸೂಟಿ, ತಾಲ್ಲೂಕು ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಪಂಚಾಯತ ಸಿಇಓ ಭರತ್ ಎಸ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಸೇರಿದಂತೆ ಮತ್ತಿತರರು ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net