

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ದೇವೀರಮ್ಮ ದೇವಸ್ಥಾನದಲ್ಲಿ ಶುಕ್ರವಾರ ಕೃಷಿ ಇಲಾಖೆ ವತಿಯಿಂದ ತಾಳೆ ಬೇಸಾಯ ಪದ್ಧತಿ ಶಿಬಿರ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಚಂದ್ರು ಲಮಾಣಿ, ಯಂಕಣ್ಣ ಡಂಬಳ ರವರ ಜಮೀನಿನಲ್ಲಿ ಸಾಂಕೇತಿಕವಾಗಿ ತಾಳೆ ಸಸಿ ನಾಟಿ ಮಾಡಿ ಚಾಲನೆ ನೀಡಲಾಗಿದೆ. ತಾಳೆ ಬೆಳೆ ಇಂದು ಪ್ರಾಮುಖ್ಯತೆ ಪಡೆಯುತ್ತಿದೆ. ರೈತರು, ಸರ್ಕಾರದ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ತಾಳೆ ಬೆಳೆ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು.
ಶಿರಹಟ್ಟಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಶಾಂತ ಕುಲಕಣಿರ್ ಮಾತನಾಡಿ, ತಾಳೆ ಎಣ್ಣೆಯು ವಿಶ್ವದ ಪ್ರಮುಖ ತೈಲ ಬೆಳೆಯಾಗಿದೆ. ಸಸ್ಯಜನ್ಯ ತೈಲ ಮೂಲವಾಗಿರುವ ಏಕೈಕ ಬೆಳೆಯಾಗಿದ್ದು, ಆಹಾರ ಭದ್ರತೆ ಮತ್ತು ಆಥಿರ್ಕ ಅಭಿವೃದ್ಧಿಗೆ ಇದು ಪ್ರಮುಖ ಬೆಳೆ ಆಗಿದೆ. ಈಗಾಗಲೇ ಶಿರಹಟ್ಟಿ ಹಾಗೂ ಲೆ$್ಮಶ್ವರ ತಾಲೂಕಿನಲ್ಲಿ ಅನೇಕ ರೈತರು ಈ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ ಎಂದರು.
ಬೆಳೆಯನ್ನು ನಾಟಿ ಮಾಡಿರುವುದರಿಂದ ಕೊಯ್ಲಿನವರೆಗೂ ಖಾಸಗಿ ಸಂಸ್ಥೆಯವರು ಕಾಲಕಾಲಕ್ಕೆ ಸೂಕ್ತ ಸಲಹೆ ಸೂಚನೆ ನೀಡುತ್ತಾರೆ. ಪ್ರತಿ ಹೇಕ್ಟೇರಿಗೆ ಪ್ರತಿ ವರ್ಷಕ್ಕೆ 4 ರಿಂದ 6 ಟನ್ ಗಳಷ್ಟು ತೈಲದ ಇಳುವರಿ ಹೊಂದಿರುವ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯಂತ ಪ್ರಮುಖ ಬೆಳೆಯಾಗಿ ಸ್ಥಾನ ಪಡೆದಿದೆ ಎಂದರು.
ಬಸವಕುಮಾರ ಇ. ಕೆ., ಶ್ರೀಶೈಲ ಕುಬಕಟ್ಟಿ, ಸುರೇಶ ಡಬಾಲಿ, ಶಹಾಜಿ ಕದಂ, ರಮೇಶ ನಿರ್ವಾಣಶೆಟ್ಟರ, ಗಂಗವ್ವ ತಳವಾರ, ಬಸವರಾಜ ನಾವಿ, ತಿಮ್ಮರಡ್ಡಿ ಮರಡ್ಡಿ, ಶಿವನಗೌಡ್ರ ಪಾಟೀಲ ಹಲವರು ಇದ್ದರು.