ಜಗತ್ತಿನಲ್ಲಿ ತಂದೆ ತಾಯಿ,ಕಲಿಸಿದ ಗುರುವಿಗಿಂತ ದೊಡ್ಡವರಾರು ಇಲ್ಲ: ಸಭಾಪತಿ ಬಸವರಾಜ ಹೊರಟ್ಟಿ

10GDG04
Published on

ವಿಜಯವಾಣಿ ಸುದ್ದಿಜಾಲ ಗದಗ

ಪ್ರಸ್ತುತ ಶಾಲಾ ಶಿಣದಲ್ಲಿ ವಿದ್ಯಾಥಿರ್ಗಳಿಗೆ ಹುಟ್ಟಿದ ಊರು, ಹೆತ್ತವರ ಮಹತ್ವ, ಕಲಿತ ಶಾಲೆ, ಕಲಿಸಿದ ಗುರುಗಳು, ಉಪಕಾರ ಮಾಡಿದವರನ್ನು ಸ್ಮರಿಸುವಂತಹ ಈ ಐದು ಗುಣಗಳ ಮಹತ್ವದ ಅರಿವನ್ನು ವಿದ್ಯಾಥಿರ್ಗಳಲ್ಲಿ ಮೂಡಿಸಿದರೆ ಖಂಡಿತವಾಗಿಯೂ ಆ ವಿದ್ಯಾಥಿರ್ ಒಬ್ಬ ಉತ್ತಮ ನಾಗರಿಕನಾಗುತ್ತಾನೆ. ಈ ಜಗತ್ತಿನಲ್ಲಿ ತಂದೆ ತಾಯಿ ಕಲಿಸಿದ ಗುರುವಿಗಿಂತ ದೊಡ್ಡವರಾರು ಇಲ್ಲವೆಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸಿದ್ಧಲಿಂಗ ನಗರದ ಸರ್ಕಾರಿ ಪ್ರೌಢಶಾಲೆಯ 2005&06ನೇ ಸಾಲಿನ ವಿದ್ಯಾಥಿರ್ಗಳಿಂದ ಏರ್ಪಡಿಸಿದ್ದ ಗುರವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಗುರು ಮತ್ತು ಶಿಷ್ಯರ ಸಂಬಂಧ ಅಷ್ಟಕ್ಕಷ್ಟೇ ಅನ್ನುವಂತಹ ವಾತಾವರಣದಲ್ಲಿ ಈ ಶಾಲೆಯಲ್ಲಿ 20 ವರ್ಷಗಳ ಹಿಂದೆ ಕಲಿತ ವಿದ್ಯಾಥಿರ್ಗಳು ಕಲಿತ ಶಾಲೆಯ ಮೇಲಿನ ಹೆಮ್ಮೆಯಿಂದ ಕಲಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿದ್ದು ಅತ್ಯಂತ ಹೃದಯಸ್ಪಷಿರ್ ಕಾರ್ಯಕ್ರಮವಾಗಿದೆ. ಈ ಶಾಲೆಯನ್ನು ದತ್ತುಪಡೆದು ಅಭಿವೃದ್ಧಿಪಡಿಸಿದ್ದು ಸಾರ್ಥಕವಾಗಿದೆ. ಇದರ ಸದುಪಯೋಗವನ್ನು ಈ ಭಾಗದ ಎಲ್ಲ ವಿದ್ಯಾಥಿರ್ಗಳು ಪಾಲಕರು ಮಾಡಿಕೊಳ್ಳಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಲಾ ದತ್ತು ಉಸ್ತುವಾರಿ ಡಾ.ಬಸವರಾಜ ಧಾರವಾಡ, ಡಿಡಿಪಿಐ ಆರ್​.ಎಸ್​. ಬುರಡಿ, ಶಹರ ಬಿ.ಇ.ಓ. ಆರ್​.ವಿ.ಶೆಟ್ಟೆಪ್ಪನವರ, ತೋಂಟದಾರ್ಯ ವಿದ್ಯಾಪಿಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟರ, ಮುಂತಾದವರು ಮಾತನಾಡಿದರು.

ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳ ಬಗ್ಗೆ 20 ಕ್ಕೂ ಹೆಚ್ಚು ವಿದ್ಯಾಥಿರ್ಗಳು ಅನುಭವವನ್ನು ಹಂಚಿಕೊಂಡು ಅಂದಿನ ಶಾಲೆಯ ಸ್ಥಿತಿಗತಿ ಇಂದು ಶಾಲೆ ಬೆಳವಣಿಗೆ ಆದ ಬಗ್ಗೆ ಖುಷಿ ಪಟ್ಟು ಶಿಕರು ತಿದ್ದಿ ತೀಡಿ ಕಲಿಸಿದ ಪ್ರತಿಯೊಬ್ಬ ಶಿಕರನ್ನು ನೆನೆದು ಕೃತತೆಯನ್ನು ಸಲ್ಲಿಸಿದರು.

ಎಸ್​.ಆರ್​. ಹೂಗಾರ, ಎಂ. ವೀರಪ್ಪ, ಎ.ಎಂ. ಕುಂಟೋಜಿ, ಎಸ್​. ಎಸ್​. ಕಪ್ಪರದ, ಎಂ. ಪಿ. ಚಿಂಚೇವಾಡಿ, ವಿ.ಎಂ.ಬೂದಿಹಾಳ, ಜೆ. ಬಿ. ಅಣ್ಣಿಗೇರಿ, ವಿ. ಬಿ. ತಾಳಿಕೋಟಿ, ಎಸ್​.ಆರ್​.ಹನಮಗೌಡ್ರ ಸೇರಿದಂತೆ ಹಲವು ಗುರು ವಂಧನಾ ಸ್ವೀಕರಿಸಿದರು.

ಯು. ಕುಷ್ಟಗಿ, ಗಂಗಾ. ಅಳವಂಡಿ, ಮಂಜುಳಾ ಟಿ, ಶಶಿಕಲಾ ಗುಳೇದವರ, ಶಾರದಾ ಬಾಣದ, ಸಂಜೀವಿನಿ ಕೂಲಗುಡಿ, ಪದ್ಮಾ ದಾಸರ, ಲಕ್ಷ$್ಮಮ್ಮ ಮಾಳೋತ್ತರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net