ಕುಮಾರಸ್ವಾಮಿ ಸಿಎಂ ಆಗಿದ್ದ ಸಂದರ್ಭದಲ್ಲೇ ಅಕ್ರಮ ಗಣಿಗಾರಿಕೆ: ಎಚ್​.ಕೆ. ಪಾಟೀಲ

24GDG02
Published on

ವಿಜಯವಾಣಿ ಸುದ್ದಿಜಾಲ ಗದಗ

ಕಾನೂನು ಸಚಿವ ಎಚ್​.ಕೆ. ಪಾಟೀಲ ಅಕ್ರಮ ಗಣಿಗಾರಿಕೆಗೆ ಕಾನೂನು ಬಿಗಿಗೊಳಿಸುವ ಕುರಿತು ಸಿಎಂ ಅವರಿಗೆ ಬರೆದ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಮಾಜಿ ಸಿಎಂ, ಸಂಸದ ಕುಮಾರಸ್ವಾಮಿ ಅವರು ಎಚ್​.ಕೆ. ಪಾಟೀಲ ವಿರುದ್ಧ ನೀಡಿದ್ದ "ಕುಂಬಕರಣ ನಿದ್ರೆ' "ರಾವಣ' ಪದ ಬಳಕೆಗೆ ಸಚಿವ ಎಚ್​.ಕೆ. ಪಾಟೀಲ ಗದಗನಲ್ಲಿ ತೀಕ್ಷ$್ಣ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಎಚ್​.ಕೆ. ಪಾಟೀಲ, ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲೇ ಅತಿ ಹೆಚ್ಚು ಅಕ್ರಮ ಗಣಿಗಾರಿಕೆ ನಡೆದಿದೆ. 1.50 ಲಕ್ಷ ಕೋಟಿ ಮೊತ್ತದ ನಾಡಿನ ಸಂಪತ್ತು ಅಕ್ರಮವಾಗಿ ಹೊರ ಹೋಗಿದೆ. ಅಕ್ರಮ ಗಣಿಗಾರಿಕೆ ವರದಿಗಳೆಲ್ಲೆವು ಅಂದು ಸಿಎಂ ಆಗಿದ್ದ ಕುಮಾರಸ್ವಾಮಿ ಬಳಿಯೇ ಇದ್ದವು. ಆಗ ಅವರೇನು "ಅಭಿಷೇಕ ಮಾಡುತ್ತ ಕುಳಿತಿದ್ದರೆ' ಎಂದು ರಾವಣ, ಕುಂಬಕರಣ ಹೇಳಿಕೆಗೆ ವಿರುದ್ಧ ತಿರುಗೇಟು ನೀಡಿದರು

ಸಂಸದ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ನನ್ನ ಪತ್ರ ಕಸದ ಬುಟ್ಟಿಗೆ ಹಾಕಿ ಎಂದು ಹೇಳಿದ್ದಾರೆ. ನನ್ನ ಪತ್ರ ಕಸದ ಬುಟ್ಟಿಗೋ ಕ್ರಮದ ತೋಟ್ಟಿಗೋ ಕಾದು ನೋಡಿ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ಅಕ್ರಮ ಗಣಿಗಾರಿಕೆಯಿಂದ ಕೊಳ್ಳೆ ಹೊಡೆದ ಸಂಪತ್ತಿನ ಮೊತ್ತವನ್ನು ಕನ್ನಡ ನಾಡಿಗೆ ವಾಪಾಸು ತರಬೇಕೆನ್ನುವ ಹಿನ್ನೆಲೆ ಈ ಪತ್ರ ಬರೆಯಲಾಗಿದೆ. ಪತ್ರ ಸ್ಪಷ್ಟ ಮತ್ತು ವಿವರವಾಗಿದೆ. ನಮ್ಮ ಹತ್ತಿರ ದಾಖಲೆ ಇರುವುದನ್ನು ಸಾರ್ವಜನಿಕರ ಮುಂದೆ ಬಿಡುಗಡೆ ಮಾಡುತ್ತೇವೆ ಎಂದು ಕಾನೂನು ಸಚಿವ ಎಚ್​.ಕೆ. ಪಾಟೀಲ ಹೇಳಿದರು.

ಈಗಲೇ ಪತ್ರ ಬರೆಯಲು ಕಾರಣ?

ಸರ್ಕಾರ ಅಧಿಕಾರಕ್ಕೆ ಬಂದು ಎರಡೂ ವರ್ಷ ಕಳೆದ ನಂತರ ಈಗಲೇ ಪತ್ರ ಬರೆಯುವ ಹಿಂದಿನ ಉದ್ದೇಶವೇನಿತ್ತು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗಣಿಗಾರಿಕೆ ಪ್ರಕರಣಗಳಲ್ಲಿ ಹೈಕೊರ್ಟನಲ್ಲಿ ಇತ್ತೀಚೆಗೆ ಕೆಲ ನಿರ್ಣಯ ಬಂದಿವೆ. ಕಳೆದ 15 ವರ್ಷಗಳಿಂದ ನಾವು ಮಾಡುತ್ತಿರುವ ಹೋರಾಟಗಳು ಕೊರ್ಟನಲ್ಲಿ ಮೂರ್ತ ಸ್ವರೂಪಕ್ಕೆ ಬಂದಿವೆ. ಕೆಲ ಆರೋಪಗಳು ಸಾಭಿತಾಗಿದೆ. ಈ ಎಲ್ಲ ದೃಷ್ಟಿಕೋನದಿಂದ ನಾಡಿನ ಸಂಪತ್ತು ಮರಳಿ ರಾಜ್ಯಕ್ಕೆ ಬರಬೇಕೆನ್ನು ಹಿನ್ನೆಲೆ ಪತ್ರ ಬರೆದಿದ್ದೇನೆ. ಸಿಎಂ ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ವ್ಯವಸ್ಥೆ ಸರಿದೂಗಿಸಬೇಕಿದೆ. ಆಡಳಿತ ವ್ಯವಸ್ಥೆಗೆ ಸವಾಲಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಈ ಪತ್ರ ಬರೆಯುವುದು ಅವಶ್ಯಕತೆ ಇತ್ತು ಎಂದು ಸಚಿವ ಎಚ್​.ಕೆ. ಪಾಟೀಲ ತಿಳಿಸಿದರು.

ಡಿ.ಆರ್​. ಪಾಟೀಲ, ಸಿದ್ದು ಪಾಟೀಲ, ಬಿ.ಬಿ. ಅಸೂಟಿ, ಅಶೋಕ ಮಂದಾಲಿ ಇತರರು ಇದ್ದರು

ಪೊಟೋ 24ಜಿಡಿಜಿ01: ಎಚ್​.ಕೆ. ಪಾಟೀಲ (ಪೊಟೋ ಬಳಸಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net