

ಮಕ್ಕಳಿಗೆ ಉತ್ತಮ ಸೌಕರ್ಯಗಳೊಂದಿಗೆ ಶಿಕ್ಷಣ ದೊರೆಯಲಿ ಗದಗ: ಚಿಕ್ಕಮಕ್ಕಳಿಗೆ ಆರಂಭದಿAದಲೇ ಉತ್ತಮ ಸೌಕರ್ಯಗಳೊಂದಿಗೆ ಶಿಕ್ಷಣ ದೊರೆಯಬೇಕು. ಈ ಉದ್ದೇಶದಿಂದಲೇ ನಗರದಲ್ಲಿ ಇಂದು ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ತಿಳಿಸಿದರು.