ಸವರ್ಣ ಸಂಭ್ರಮ: ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕ ಸ್ಥಿತಿ ಬೆಳವಣಿಗೆ: ಎಚ್.ಕೆ.ಪಿ

IMG-20231104-WA0009
Published on

ಗದಗ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಜನರ ಆರ್ಥಿಕ ಸ್ಥಿತಿ ಗಮನಾರ್ಹ ಬೆಳವಣಿಗೆ ಕಂಡಿದೆ ಎಂದು ಸಚಿವ ಎಚ್ ಕೆ ಪಾಟೀಲ ಹೇಳಿದರು.

ಬಡತನ ರೇಖೆಯುಲ್ಲಿದ್ದ ಲಕ್ಷಾಂತರ ಕುಟುಂಬಗಳು ಕೇವಲ ಐದೇ ತಿಂಗಳಲ್ಲಿ ಕೆಳ ಮಧ್ಯಮ ವರ್ಗದಲ್ಲಿ ಗುರುತಿಸಿಕೊಂಡಿದ್ದಾರೆ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಶಕ್ತಿ ಯೋಜನೆಗಳು ಬಡವರ ಮುಖದಲ್ಲಿ ಮಂದಹಾಸ ಮೂಡಿಸಿವೆ ಎಂದರು.

ಗ್ಯಾರಂಟಿ ಯೋಜನೆಗಳು ವಿಶ್ವದಾಖಲೆಯುನ್ನು ಮಾಡಿವೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಶ್ರೇಯುಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯು ಅವರಿಗೆ ಸಲ್ಲುತ್ತದೆ ಎಂದರು.

ಕರ್ನಾಟಕ ಸುವರ್ಣ ಮಹೋತ್ಸವ ಕಾರ್ಯುಕ್ರಮ ನಿಮಿತ್ತ ಗದಗ ನಗರದಲ್ಲಿ ತಾಯಿ ಭುವನೇಶ್ವರಿಯು ಭವ್ಯ ಮೆರವಣಿಗೆ ನಡೆಯಿತು. ಸಿಎಂ ಸಿದ್ದರಾಮಯ್ಯು ಭಾಗವಹಿಸಿದ್ದ ಮೆರವಣಿಗೆಗೆ ಅಭೂಪೂರ್ವ ಸ್ವಾಗತ ಸಿಕ್ಕಿತು. ನೂರಾರು ಮಹಿಳೆಯುರು ಪೂರ್ಣ ಕುಂಭ ದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು ಎಂದರು.

ಗದಗ ಜಿಲ್ಲೆಯುಲ್ಲಿ ಗ್ಯಾರಂಟಿ ಯೋಜನೆಯ ನಾಲ್ಕು ಯೋಜನೆಗಳಿಗೆ ಅಪಾರ ಬೆಂಬಲ ಸಿಕ್ಕಿದೆ. ಗೃಹ ಲಕ್ಷಿಲಕ್ಷ್ಮೀ ಶೇ ೯೧.೩, ಗೃಹಜ್ಯೋತಿ ಶೇ ೯೪.೨೧, ಅನ್ನಭಾಗ್ಯ ಶೇ ೯೧ ಹಾಗೂ ಶಕ್ತಿ ಯೋಜನೆಯುಡಿ ೨ ಕೋಟಿ ಮಹಿಳೆಯುರು ಪ್ರಯೋಜನ ಪಡೆದುಕೊಂಡಿದ್ದಾರೆ. ಶೀಘ್ರದಲ್ಲಿ ನಾಲ್ಕು ಯೋಜನೆಗಳಲ್ಲಿ ಶೇ ೧೦೦ ಫಲಿತಾಂಶ ತರಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಅವರು ವಿವರಿಸಿದರು.

ಗದಗ ಕೊಡುಗೆ ಅಪಾರ
ನಾಡು ನುಡಿ ನೆಲ ಜಲಕ್ಕೆ ಗದಗ ಜಿಲ್ಲೆಯ ಕೊಡುಗೆ ಅಪಾರ. ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಹಾಗೂ ಕರ್ನಾಟಕ ನಾಮಕರಣಕ್ಕಾಗಿ ನಡೆದ ಹೋರಾಟಗಳಲ್ಲಿ ಗದಗ ಜಿಲ್ಲೆಯ ಕೊಡುಗೆ ಅಪರಿಮಿತ. ಅನೇಕ ಹೋರಾಟಗಳಿಗೆ ಗದಗ ಬೀಜಾಂಕುರ ಸ್ಥಳ ಎಂದು ಸಚಿವ ಎಚ್ ಕೆ ಪಾಟೀಲ ಹೇಳಿದರು.
೧೯೭೩ರಲ್ಲಿ ಅಂದಿನ ಸಿಎಂ ದೇವರಾಜ ಅರಸ್ ಹಾಗೂ ಗದಗನ ಸಚಿವರಾಗಿದ್ದ ಕೆ ಎಚ್ ಪಾಟೀಲ ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಬೇಕೆಂದು ನಿರ್ಣಯಿಸಿದ್ದು ಇತಿಹಾಸ. ಇದೀಗ ೫೦ ವರ್ಷಗಳ ನಂತರ ಕರ್ನಾಟಕ ನಾಮಕರಣ ಸುವರ್ಣ ಮಹೋತ್ಸವ ಆಚರಿಸುಚ ಅವಕಾಶ ಸಿಕ್ಕಿದ್ದು ತುಂಬಾ ಖುಷಿಯು ಸಂಗತಿ ಎಂದರು.

ಕರ್ನಾಟಕ ಸುವರ್ಣ ಸಂಭ್ರಮ ಗಳಿಗೆಯುಲ್ಲಿ ಗದಗ ಜಿಲ್ಲೆಯು ಮಹನೀಯುರನ್ನು ನೆನೆಯುವುದು ಅತಿಅವಶ್ಯವಾಗಿದ್ದು, ಉದಯುವಾಗಲಿ ಚೆಲುವ ಕನ್ನಡನಾಡು ಎಂದು ಹೇಳಿದ ಕವಿ ಆಲೂರು ವೆಂಕಟರಾಯರನ್ನು ಮರೆಯುವಂತಿಲ್ಲ. ಅದರಂತೆ ಕುಮಾರವ್ಯಾಸ, ನಾಗವರ್ಮ, ದುರ್ಗಸಿಂಹ, ನಯುಸೇನ, ಚಾಮರಸ,ಚನ್ನವೀರ ಕಣವಿ,ಅಂದಾನಪ್ಪ ದೊಡ್ಡಮೇಟಿ, ಕೆ ಎಚ್ ಪಾಟೀಲ, ಎಮ ಎಸ್ ಸುಂಕಾಪುರ, ಜಿ ಎಸ್ ಆಮೂರ, ಭಾರತರತ್ನ ಪಂಡಿತ ಭೀಮಸೇನ ಜೋಶಿ, ಪದ್ಮವಿಭೂಷಣ ಡಾ ಪುಟ್ಟರಾಜ ಕವಿ ಗವಾಯಿಗಳು ಆಭಿಮಾನ ಉಕ್ಕುವಂತಹ ಕೊಡುಗೆ ನೀಡಿದ್ದಾರೆ. ಇದಲ್ಲದೇ, ಕೆ ಎಚ್ ಪಾಟೀಲ ಅವರ ನೇತೃತ್ವದಲ್ಲಿ ೧೯೬೧ ಕಸಾಪ ಸಾಹಿತ್ಯ ಸಮ್ಮೇಳನ ನಡೆಸಲಾಯಿತು. ಅದೇ ಸಮ್ಮೇಳನದಲ್ಲಿಯೇ ಮೈಸೂರು ಕರ್ನಾಟಕ ಆಗಬೇಕೆಂದು ಠರಾವು ಪಾಸು ಮಾಡಲಾಯಿತು ಎಂದು ಅವರು ಇತಿಹಾಸವನ್ನು ವಿವರಿಸಿದರು.

ಗದಗ ನಗರಕ್ಕೆ ಐದು ಸಾವಿರ ಹಾಗೂ ಗದಗ ಜಿಲ್ಲೆಗೆ ೧೦ ಸಾವಿರ ಮನೆಗಳನ್ನು ಕೊಡಬೇಕು ಎಂದು ಸಚಿವ ಎಚ್ ಕೆ ಪಾಟೀಲ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು. ಎಲ್ಲರಿಗೂ ಸೂರು ಸಿಗಬೇಕು ಎನ್ನುವುದೇ ಇದರ ಮುಖ್ಯ ಉದ್ದೇಶವಾಗಿದೆ. ಬೇರೆ ಏನನ್ನೂ ಕೇಳಲ್ಲ. ಇದೊಂದು ಮನವಿಗೆ ಸ್ಪಂದಿಸಬೇಕು. ಗದಗ ಜಿಲ್ಲೆಯು ಜನರ ವಸತಿ ರಹಿತರ ಸಮಸ್ಯೆಗೆ ಮುಖ್ಯಮಂತ್ರಿ ಅವರು ಸ್ಪಂದಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net