ರೈತರ ಮುಂದೆ ಗರ್ವ ಬಿಡಿ, ಎದ್ದು ನಿಂತು ಮಾತಾಡಿ: ಅಧಿಕಾರಿಗಳಿಗೆ ಎಚ್.ಕೆ. ಪಾಟೀಲ ಎಚ್ಚರಿಕೆ

oplus_2
oplus_2
Published on

ಗದಗ: ರೈತರ ಮುಂದೆ ಗರ್ವ ಬಿಡಿ. ವಿನಮ್ರದಿಂದ ಕೆಲಸ ಮಾಡಿ ಎಂದು ಎಚ್.ಕೆ ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜನತಾ ದರ್ಶನದಲ್ಲಿ ಅಧಿಕಾರಿಗಳಿಗೆ ಸೂಕ್ಷ್ಮ ಎಚ್ಚರಿಕೆ ನೀಡಿದ ಅವರು, ರೈತ ಹರಕು ಪಂಚೆ(ದೋತ್ರ) ತೊಟ್ಟು
ಅರ್ಜಿ, ಅಹವಾಲು ನೀಡಲು ಬಂದ ಸಂದರ್ಭದಲ್ಲಿ ಅವರನ್ನು ಕುಳಿತುಕೊಳ್ಳಲು ವಿನಮ್ರವಾಗಿ ಹೇಳಬೇಕು. ಒಂದು ವೇಳೆ ಅವರು ಭಯದಿಂದ, ಸಂಕೋಚನಿಂದ ಕುಳಿತುಕೊಳ್ಳಲು ಸಂಕೋಚ ಪಟ್ಟರೆ ಜಿಲ್ಲಾಧಿಕಾರಿ ಒಳಗೊಂಡು ಅವರ ಮುಂದೆ ಎದ್ದು ನಿಂತು ಅವರಿಗೆ ಗೌರವ ಕೊಟ್ಟು ಅವರಿಗೆ ಸ್ಪಂಧಿಸಬೇಕು. ರೈತರ, ಬಡವರ ಮುಂದೆ ಅಧಿಕಾರಿಗಳು ಗರ್ವ ಬಿಡಬೇಕು ಎಂದು ಎಚ್.ಕೆ. ಪಾಟೀಲ ಅಧಿಕಾರಿಗಳನ್ನು ಎಚ್ಚರಿಸಿದರು.

ಜಿ.ಎಸ್. ಪಾಟೀಲ, ಗೋವಿಂದ ರೆಡ್ಡಿ, ಭರತ್ ಸಿ.ಎಸ್. ಅನ್ನಪೂರ್ಣ ಎಂ, ಬಿ.ಬಿ. ಅಸೂಟಿ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net