

ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರದ ಉದ್ಘಾಟನೆ
ಗದಗ: ದೇಶದ ಗಡಿ ಕಾಯುವ ಹಾಗೂ ದೇಶವನ್ನು ಕಟ್ಟುವಲ್ಲಿ ಸೈನಿಕರ ಪಾತ್ರ ಶ್ಲಾö್ಯಘನೀಯವಾದದ್ದು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಅವರು ರವಿವಾರ ಮುಳಗುಂದ ರೋಡನ ಆದಿತ್ಯ ನಗರದಲ್ಲಿ ಗದಗ ಜಿಲ್ಲಾ ಮಾಜಿ ಸೈನಿಕರ ಸಂಘ (ರಿ)ದ ನೂತನ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ರಕ್ಷಣೆ ಮತ್ತು ಹಿತವನ್ನು ಕಾಪಾಡುವಲ್ಲಿ ಸೈನಿಕರು ಹಗಲಿರುವ ತಮ್ಮ ಜೀವದ ಹಂಗು ತೊರೆದು ದಕ್ಷತೆಯಿಂದ ಕಾರ್ಯ ಮಾಡುತ್ತಿದ್ದಾರೆ ಅವರಿಗೆ ನೈತಿಕ ಬಲ ಆತ್ಮಸ್ಥೆöÊರ್ಯವನ್ನು ತುಂಬುವ ಮೂಲಕ ನಾವು ಸದಾವಕಾಲ ಸೈನಿಕರ ಶ್ರೇಯೋಭಿವೃದ್ಧಿಯನ್ನು ಬಯಸಬೇಕು ಎಂದರು.
ಸರಕಾರ ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಈ ಸೈನಿಕ ಸಮುದಾಯ ಭವನವನ್ನು ಹಾಗೂ ತರಬೇತಿ ಕೇಂದ್ರವನ್ನು ರಾಜ್ಯದಲ್ಲಿಯೇ ಮಾದರಿ ಎನ್ನುವಂತೆ ನಿರ್ಮಾಣಗೊಳಿಸಿದ್ದು ಅಭಿನಂದನೀಯ ಎಂದರು.
ಈ ಸಂಘದ ಸರ್ವ ಸದಸ್ಯರು ಒಗ್ಗಟ್ಟಿನಿಂದ ಈ ಕಟ್ಟಡವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಯುವಕರನ್ನು ಇಲ್ಲಿ ಸೈನಿಕ ಭರ್ತಿಗೆ ತರಬೇತುಗೊಳಿಸುವ ಕಾರ್ಯ ನಿರಂತರವಾಗಿ ನಡೆಯುವಂತಾಗಲಿ ಎಂದರು.
ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಎಸ್.ವ್ಹಿ.ಸಂಕನೂರ ಮಾತನಾಡಿ ಪ್ರತಿಯೊಬ್ಬ ನಾಗರಿಕನೂ ಸೈನಿಕ, ರೈತ ಹಾಗೂ ಶಿಕ್ಷಕನನ್ನು ಮರೆಯುವಂತಿಲ್ಲ. ಸುಭದ್ರ ದೇಶವಾಗಿ ನಿರ್ಮಾಣಗೊಳ್ಳುವಲ್ಲಿ ಈ ಮೂವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರಲ್ಲದೆ ಇಲ್ಲಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ದೇಶಾಭಿಮಾನ ಹುಟ್ಟುವ ರೀತಿಯಲ್ಲಿ ಯುವ ಪಡೆಯನ್ನು ಸೈನ್ಯಕ್ಕೆ ಸೇರಲು ತರಬೇತಿ ಮಾರ್ಗದರ್ಶನ ನೀಡಲು ಸಂಘವು ಅಗತ್ಯ ಕ್ರಮ ಕೈಗೊಳ್ಳಲಿ ಎಂದರು.
ಘನ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ವಾಯು ಸೇನಾಧಿಕಾರಿ ಎರ್ ಕಮೋಡರ್ ಸಿ.ಎಸ್.ಹವಲ್ದಾರ ಮಾತನಾಡಿ ಸಂಘದಲ್ಲಿ ಒಗ್ಗಟ್ಟು ಬಲಗೊಳ್ಳಬೇಕು ಅಂದಾಗ ಮಾತ್ರ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ ಎಂದರು.
ಮಾಜಿ ಸೈನಿಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳು ಸಹಜವಾಗಿ ಮತ್ತು ಸಕಾಲಕ್ಕೆ ದೊರೆಯುತ್ತಿಲ್ಲ ಆ ಕೆಲಸ ಆಗಬೇಕು. ಕೇವಲ ಮಾಜಿ ಸೈನಿಕರನ್ನು ಹಾಡಿ ಹೊಗಳಿದರೆ ಸಾಲದು ಅವರಿಗೆ ಯೋಗ್ಯ ಸ್ಥಾನಮಾನಗಳು ಲಭ್ಯವಾಗಬೇಕು. ಮಾಜಿ ಸೈನಿಕರಿಗೆ ಶೇ. 10 ಮೀಸಲಾತಿ ಇದ್ದು ಅದು ಪ್ರಾಮಾಣಿಕವಾಗಿ ಅನುಷ್ಠಾನಗೊಳ್ಳಬೇಕು. ಮಾಜಿ ಸೈನಿಕರಿಗೂ ರಾಜಕಾರಣದಲ್ಲಿ ಎಂ.ಎಲ್.ಎ, ಎಂ.ಎಲ್.ಸಿ ಅಭ್ಯರ್ಥಿಯಾಗಲು ಅವಕಾಶ ದೊರೆಯಬೇಕು ಅಂದಾಗ ಮಾತ್ರ ಮಾಜಿ ಸೈನಿಕರ ಕಷ್ಟ ನೋವು ಬೇಡಿಕೆಗಳನ್ನು ಪಡೆಯಲು ಸಾಧ್ಯ. ಬರಲಿರುವ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕೆಂದರು.
ಸಮಾರAಭದ ಸಾನಿಧ್ಯ ವಹಿಸಿದ್ದ ಓಂಕಾರೇಶ್ವರ ಹಿರೇಮಠದ ಪೂಜ್ಯ ಫಕೀರೇಶ್ವರ ಪಟ್ಟಾಧ್ಯಕ್ಷರು ಮಾಜಿ ಸೈನಿಕರ ಸೇವೆಯನ್ನು ಶ್ಲಾö್ಯಘಿಸಿ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರ ನಿರ್ಮಾಣಗೊಳ್ಳಲು ಸರ್ವ ದಾನಿಗಳು ನೀಡಿದ ಸಹಕಾರವನ್ನು ಮೆಚ್ಚಿ ಅಭಿನಂದನಾಪರ ಮಾತನಾಡಿದರು.
ವಿಶೇಷ ಆಹ್ವಾನಿತರಾಗಿ ಗಣ್ಯರಾದ ಅರವಿಂದ ಶಿಗ್ಗಾಂವಿ, ಸುಧೀಂದ್ರ ಇಟ್ನಾಳ, ಟಿ.ಎಸ್.ಪಾಟೀಲ, ಬಸವರಾಜ ನಿಂಗನಗೌಡರ, ಶಿವಲೀಲಾ ಭಾವಿಕಟ್ಟಿ, ಅತಿಥಿಗಳಾಗಿ ಅನುಸೂಯಾ ಬೆಟಗೇರಿ, ಕಿರಣಕುಮಾರ ಕೋಪರ್ಡೆ, ಶಾಂತವ್ವ ಭಜಂತ್ರಿ, ವಿದ್ಯಾ ಕೆ, ಜಿ.ಸಿ.ರೇಶ್ಮಿ, ಕೇಶವ ದೇವಾಂಗ ಆಗಮಿಸಿದ್ದರು. ಸಮಾರಂಭದಲ್ಲಿ ಎಲ್ಲ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್.ಆರ್.ಪಾಟೀಲ ಸ್ವಾಗತಿಸಿದರು ಸುಧೀರಸಿಂಹ ಘೋರ್ಪಡೆ ನಿರೂಪಿಸಿದರು ಸಂಘದ ಅಧ್ಯಕ್ಷ ಜಿ.ಬಿ.ಮಾಲಗಿತ್ತಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು ಕೊನೆಗೆ ಕಾರ್ಯದರ್ಶಿ ಸಿ.ಜಿ.ಸೊನ್ನದ ವಂದಿಸಿದರು.
ಕಾರ್ಯಕ್ರಮದಲ್ಲಿ ಎಸ್.ಎಫ್.ಹೊನ್ನಪ್ಪನವರ, ಸಂಘಟನಾ ಕಾರ್ಯದರ್ಶಿ ಈರಣ್ಣ ತಳ್ಳಿಕೇರಿ, ಸಹ ಕಾರ್ಯದರ್ಶಿ ಮಹೇಶ ಆಶಿ, ಮಹಮ್ಮದಹನೀಫ್ ಶೇಖಬಾಯಿ, ನಿರ್ದೆಶಕರಾದ ಬಿ.ವ್ಹಿ.ಅಬ್ಬಿಗೇರಿ, ಎಚ್.ಬಿ.ಜಂಗಣ್ಣವರ, ಲಲಿತಾ ಕುರಹಟ್ಟಿ, ಶರಣಪ್ಪ ಸರ್ವಿ, ವೀರಪ್ಪ ಬಿಂಗಿ, ಶಿವಲೀಲಾ ಬಾವಿಕಟ್ಟಿ, ಕೆ.ಎಸ್.ಹಿರೇಮಠ, ಎ.ಎಂ.ತಹಶೀಲ್ದಾರ, ರಘುನಾಥರೆಡ್ಡಿ ಶೆಟ್ರಡ್ಡಿ, ಬಿ.ಬಿ.ಅರವಡಗಿಮಠ, ಚನ್ನಯ್ಯ ಬಳಗಾನೂರಮಠ, ಎಸ್.ಎಸ್.ವಡ್ಡಿನ, ಬಸನಗೌಡ ಪಾಟೀಲ, ಎಸ್.ಎಂ.ಮಡಿವಾಳರ, ಮೀನಾಕ್ಷಿ ಬದಿ, ಶಂಕರಗೌಡ ಪಾಟೀಲ, ದ್ರಾಕ್ಷಾಯಣಿ ಲಕ್ಕುಂಡಿ ಮುಂತಾದವರಿದ್ದರು.
= = =