ಯೋಧನ ಅಂತ್ಯಸಂಸ್ಕಾರ

11GDG10A
ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದ ಅಂತ್ಯ ಸಂಸ್ಕಾರ ವೇಳೆ ಯೋಧ ಮಂಜುನಾಥ ಪಾಥಿರ್ವ ಶರೀರಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಿದರು. ಸಿ.ಸಿ. ಪಾಟೀಲ, ಬಿ.ಆರ್​. ಯಾವಗಲ್ಲ, ಉಮೇಶಗೌಡ ಪಾಟೀಲ, ಸಿ.ಎನ್​. ಶ್ರೀಧರ, ರೋಹನ ಜಗದೀಶ ಇತರರು ಇದ್ದರು.
Published on

ಗದಗ: ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ತಾಲೂಕಿನ ಹಿರೇಕೊಪ್ಪ ಗ್ರಾಮದ ಯೋಧ ಮಂಜುನಾಥ ಮಲ್ಲಪ್ಪ ಗಿಡ್ಡಮಲ್ಲಣ್ಣವರ ಕರ್ತವ್ಯದಲ್ಲಿದ್ದಾಗಲೇ ಕಳೆದ ಮಂಗಳವಾರ ವಿದ್ಯುತ್​ ಅವಡದಿಂದ ಮೃತಪಟ್ಟಿದ್ದನು. ಗುರುವಾರ ಪಾಥಿರ್ವ ಶರೀರದ ಅಂತ್ಯ ಸಂಸ್ಕಾರವನ್ನು ಹಿರೇಕೊಪ್ಪ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ನರಗುಂದ ಶಾಸಕ ಸಿ.ಸಿ. ಪಾಟೀಲ, ಸಂಸ ಪಿ.ಸಿ. ಗದ್ದಿಗೌಡರ, ಜಿಲ್ಲಾಧಿಕಾರಿ ಸಿ.ಎನ್​, ಶ್ರೀಧರ ಸೇರಿದಂತೆ ಹಲವು ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಿದರು.

ಪಂಜಾಬ ರಾಜ್ಯದ ಜಲಂಧರ್​ನಲ್ಲಿ ಇರುವ ಎಎಸ್​ಸಿ ಸೆಂಟರ್​ನಲ್ಲಿ ಯೋಧನಾಗಿ 13 ಷರ್ವಗಳಿಂದ ಸೇವೆ ಸಲ್ಲಿಸುತ್ತಿದ್ದ. ಸೇನೆಯ ವಸತಿ ಗೃಹದಲ್ಲಿ ಕುಟುಂಬ ಸಹಿತ ವಾಸವಾಗಿದ್ದರು. ಮಂಜುನಾಥನ ಕರ್ತವ್ಯದಲ್ಲಿ ಇದ್ದ ಸಂದರ್ಭದಲ್ಲಿ ಶುಕ್ರವಾರ ವಿದ್ಯುತ್​ ಅವಡ ಸಂಭವಿಸಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಲಿಸದೇ ಮಂಗಳವಾರ ಬೆಳಗ್ಗೆ ನಿಧನ ಹೊಂದಿದ್ದರು. ಗುರುವಾರ ಸ್ವಗ್ರಾಮಕ್ಕೆ ಪಾಥಿರ್ ಶರೀರ ತರಲಾಯಿತು. ಪಾಥಿರ್ವ ಶರೀರ ಕಂಡು ಗ್ರಾಮಸ್ಥರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮೃತ ಯೋಧನಿಗೆ ಪತ್ನಿ, ಐದು ವರ್ಷದ ಪುತ್ರ, ತಂದೆ&ತಾಯಿ, ಸಹೋದರ ಸೇರಿ ಅಪಾರ ಬಂಧು ಬಳಗವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net