ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ! ಸನ್ಮಾನ ಕಾರ್ಯಕ್ರಮ

21GDG01
Published on

ಹಿಂದೂ ಮಹಾಗಣಪತಿ ಗದಗ ಜಿಲ್ಲಾ 3ನೇ ವರ್ಷದ ಗಣಪತಿ ಪ್ರತಿಷ್ಠಾನ ಅಂಗವಾಗಿ ಧರ್ಮಸಭೆ, ನೃತ್ಯ ಮತ್ತು ಸಂಗೀತ ವೈಭವ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಸೆ.22 ರಂದು ಭಾನುವಾರ ನಗರದ ಕಾಟನ್ ಮಾರುಕಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್. ಎಚ್. ಶಿವನಗೌಡರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂರನೇ ವರ್ಷದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆ ವಿವಿಧ ಸಂಸ್ಕೃತಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮಂಗಳೂರಿನ ಹೆಜ್ಜೆನಾದ ತಂಡದಿಂದ ನೃತ್ಯ ಮತ್ತು ಸಂಗೀತ ವೈಭವ ಕಾರ್ಯಕ್ರಮ ನೆರವೆರುವುದು.  ಅನ್ನದಾನೀಶ್ವರಮಠ ಶ್ರೀಗಳು  ಸಾನಿಧ್ಯವಹಿಸಿ ಧರ್ಮೋಪದೇಶ ನೀಡಲಿದ್ದಾರೆ. 

ದಾನಿಗಳಿಗೆ ಹಾಗೂ ಗಣ್ಯಮಾನ್ಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ. ರಂಗೋಲಿ ಸ್ಪರ್ಧೆ, ಚಸ್ ಸ್ಪರ್ಧೆ, ವೇಷ ಭೂಷಣ ಸ್ಪರ್ಧೆ, ಮಹಿಳೆಯರ ಮ್ಯಾಚಿಂಗ್ ಸ್ಪರ್ಧೆ, ಸ್ಮರಣ ಶಕ್ತಿ ಸ್ಪರ್ಧೆ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳಿಗೆ ಪ್ರಶಸ್ತಿ ವಿತರಿಸಲಾಗುವುದು ಎಂದರು.

ಸುಧಿರ ಖಾಟಗೆ ಮಾತನಾಡಿ, ಸೆ. 24 ರಂದು ಬೆಳಿಗ್ಗೆ 10.30ಕ್ಕೆ ಲಾಯನ್ಸ್ ಕ್ಲಬ್ ಸಂಯೋಗದೊಂದಿಗೆ ಉಚಿನ ಕಣ್ಣಿನ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಜರಗುವುದು. ಸೆ. 25 ರಂದು ಬೆಳಗ್ಗೆ 9ಕ್ಕೆ ಸತ್ಯನಾರಾಯಣ ಪೂಜೆ ಮತ್ತು   ಬೃಹತ ರಕ್ತದಾನ ಶಿಬಿರ ನೆರೆವೆರುವುದು. ಸೆ. 26 ರಂದು ಸಂಜೆ 5 ಕ್ಕೆ  ಗಣಪತಿಗೆ 21 ದಿನ ಪೂಜಿಸಿದ ಹಣ್ಣು ಹಂಪಲ, ಅಂತರಕಾಯಿ, ಬಂಗಾರ, ಬೆಳ್ಳಿ ಆಭರಣಗಳು ಸವಾಲು ಕಾರ್ಯಕ್ರಮ ಜರುಗಲಿದೆ. ಸೆ. 27 ರಂದು ಬೆಳಗ್ಗೆ 9 ಕ್ಕೆ ಸಾಂಸ್ಕೃತಿಕ ಮೇಳದೊಂದಿದೆ ಬೀಷ್ಮ ಕೆರೆಯಲ್ಲಿ ಗಣಪತಿ ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದರು.

 ರಮೇಶ ಸಜ್ಜಗಾರ ಮಾತನಾಡಿ ಉಚಿತ ಚಿಕಿತ್ಸೆ ಪಡೆಯುವರು ತಮ್ಮ ಆಧಾರ್ ಕಾರ್ಡ ನೊಂದಿಗೆ ಆಗಮಿಸಿಲು ತಿಳಿಸಿದರು.

ಅಶ್ವಿನಿ ಜಗತಾಪ, ವಂದನಾ ವರ್ಣೇಕರ, ರಾಘವೇಂದ್ರ ಹಬೀಬ ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net