ಗಭಿರ್ಣಿಯರಿಗೆ ಪೌಷ್ಟಿಕ ಆಹಾರ ಕುರಿತು ಜಾಗೃತಿ ಅಭಿಯಾನ

09GDG02
Published on

ಗದಗ: ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಪಂ ಸಂಯುಕ್ತಾಶ್ರಯದಲ್ಲಿ ನಗರದ 24 ನೇ ವಾಡಿರ್ನಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಗಭಿರ್ಣಿ ಮಹಿಳೆಯರು ಹಾಗೂ ಬಾಣಂತಿಯರಿಗಾಗಿ ವಿಶೇಷ ಪೌಷ್ಠಿಕ ಆಹಾರ ಕುರಿತು ಜಾಗೃತಿ ಅಭಿಯಾನ ಜರುಗಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಗಭಿರ್ಣಿ ಮಹಿಳೆಯರಿಗೆ, ಬಾಣಂತಿಯರಿಗೆಹಾಗೂ ಶಿಶು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು ಗಭಿರ್ಣಿಯರು ಆರೋಗ್ಯವಂತ ಮಗುವನ್ನು ಪಡೆಯಲು ಅಗತ್ಯ ಮುಂಜಾಗ್ರತಾ ವೈದ್ಯಕಿಯ ಸಲಹೆ ಪಡೆದುಕೊಂಡು ಜಾಗೃತಿ ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗದಗ ತಾಲೂಕಾ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯೆ ಸಾವಿತ್ರಿ ಹೂಗಾರ, ಅಂಗನವಾಡಿ ಕಾರ್ಯಕರ್ತೆಯರಾದ ರೇಣವ್ವ ಜಗ್ಗಲ್ಲ, ನಿರ್ಮಲಾ ಶೆಗಣಿ, ಸಹಾಯಕಿಯರಾದ ಮಾದೇವಿ ನಿಡಗುಂದಿ. ಆರೋಗ್ಯ ಇಲಾಖೆ ಸುಮಿತ್ರಾ ಅಂಬಿಗಾರ. ಆಶಾ ಕಾರ್ಯಕರ್ತೆಯರಾದ ಲಕ್ಷಿ$್ಮ ನಿಲಗುಂದ, ಭಾರತಿ ಹಿರೇಮಠ ಹಾಗೂ ವಾಡಿರ್ನ ಗಭಿರ್ಣಿಯರು, ಬಾಣಂತಿಯರು, ಮಕ್ಕಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net