ಲಾರ್ವಾ ನಿರ್ವಾರಣ ದಿನ ಅಂಗವಾಗಿ ಮುಂಡರಗಿ ನಗರದಲ್ಲಿ  ಲಾರ್ವಾ ಸರ್ವೇ

WhatsApp Image 2024-07-05 at 3.01.10 PM
Published on

ಗದಗ: ಮುಂಡರಗಿ ತಾಲೂಕಿನ ಲಾರ್ವಾ ಸಮೀಕ್ಷೆಗೆ  ಆರೋಗ್ಯ ಸುರಕ್ಷಣಾ,ನಿರಿಕ್ಷಣಾ ಅಧಿಕಾರಿಗಳನ್ನೊಳಗೊಂಡತೆ 36 ವಿವಿಧ ತಂಡಗಳನ್ನು ರಚಿಸಲಾಗಿದೆ ಎಂದು  ತಾಲೂಕಾ ಆರೋಗ್ಯಾಧಿಕಾರಿ  ಡಾ. ಲಕ್ಷ್ಮಣ ಪೂಜಾರ ಅವರು ಹೇಳಿದರು.

ಮುಂಡರಗಿ ತಾಲೂಕ ಆಸ್ಪತ್ರೆಯಲ್ಲಿ ಶುಕ್ರವಾರ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ,ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು,ತಾಲೂಕ ಆಡಳಿತ,ತಾಲೂಕ ಪಂಚಾಯತ,ತಾಲೂಕ ಆರೋಗ್ಯಾ ಅಧಿಕಾರಿಗಳ ಕಾರ್ಯಲಯದ ಸಹಯೋಗದಲ್ಲಿ ತಾಲೂಕ ಲಾರ್ವಾ ಸಮಿಕ್ಷೆಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಲಾರ್ವಾನಿರ್ವಾಹರಣ ದಿನ ಅಂಗವಾಗಿ  ಪ್ರತಿ ಶುಕ್ರವಾರ ನಗರದಲ್ಲಿ ಲಾರ್ವಾ ಸರ್ವೆಗಳನ್ನು ಕೈಗೊಳ್ಳಲಿದ್ದು  ಮುಂಡರಗಿ ನಗರ ಪ್ರದೇಶದಲ್ಲಿ ಲಾರ್ವಾ ಸರ್ವೇ   ಮಾಡಲು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರಿಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿ ಒಟ್ಟು 36 ತಂಡಗಳನ್ನು ಮಾಡಿ ಅದರ ಮೇಲ್ವಿಚಾರಣೆ ಮಾಡಲು ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು, ತಾಲೂಕಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ತಾಲೂಕಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿಗಳು ಹಾಗೂ ಮುಂಡರಗಿ ನಗರದ ಸಿ.ಹೆಚ್.ಓ ರವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

 ಕಾರ್ಯಕ್ರಮದಲ್ಲಿ ಶ್ರೀಮತಿ ಮಂಜಳಾ ಸಜ್ಜನರ, ಶ್ರೀಮತಿ ಜಯಲಕ್ಷ್ಮೀ ಕೊಳ್ಳರೂ, ಶ್ರೀಮತಿ ಕೆ.ಎಸ್. ಚೌಟಗಿ,  ಕೆ.ವಿ.ಬಡಿಗೇರ, ಶ್ರೀ ಕೆ ಪಿ ಗಂಭಿರ ,  ಎಮ್ ಎಫ್ ಕಲಕಂಬಿ,  ಶಂಕರಲಿಂಗ ಲ ಕೋರಿ,  ಎಮ್ ಎ ಡಾಲಾಯತ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net